ಉಪ್ಪಿ ಅಭಿನಯದ ‘ಹೋಮ್ ಮಿನಿಸ್ಟರ್’ ಸಿನಿಮಾ ರಿಲೀಸ್, ಕುಣಿದು ಕುಪ್ಪಳಿಸಿದ ಅಭಿಮಾನಿಗಳು!

‘ಹೋಮ್ ಮಿನಿಸ್ಟರ್’ ಚಿತ್ರವನ್ನು ಸುಜಯ್ ಕೆ ಶ್ರೀಹರಿ ನಿರ್ದೇಶಿಸಿದ್ದಾರೆ. ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾ ಬ್ಯುಸಿ ನಟಿಯೆನಿಸಿಕೊಂಡಿರುವ ವೇಧಿಕಾ ಈ ಚಿತ್ರದಲ್ಲಿ ಫಿಮೇಲ್ ಲೀಡ್​ನಲ್ಲಿ ಕಾಣಿಸಿಕೊಂಡಿದ್ದಾರೆ

TV9kannada Web Team

| Edited By: Arun Belly

Apr 02, 2022 | 1:09 AM

ಕನ್ನಡದ ಸೂಪರ್ ಸ್ಟಾರ್ ಗಳಲ್ಲಿ ಒಬ್ಬರೆನಿಸಿಕೊಂಡಿರುವ ಉಪೇಂದ್ರ (Upendra) ಅವರ ಸಂಭ್ರಮ ನೋಡಿ ಮಾರಾಯ್ರೇ. ಯಾಕಾಗಬಾರದು. ಬಹಳ ದಿನಗಳ ನಂತರ ಅವರ ನೆಚ್ಚಿನ ನಟ ಸಿನಿಮಾ ರಿಲೀಸಾಗಿದೆ. ಅದೇ ಖುಷಿಯಲ್ಲಿ ಅವರ ಅಭಿಮಾನಿಗಳು ಬೆಂಗಳೂರಿ ಚಿತ್ರಮಂದಿರವೊಂದ ಮುಂದೆ ಪಟಾಕಿ ಸಿಡಿಸುತ್ತಿದ್ದಾರೆ, ಕುಣಿಯುತ್ತಿದ್ದಾರೆ ಮತ್ತು ಕೇಕೆ ಹಾಕುತ್ತಿದ್ದಾರೆ. ಹೌದು ಮಾರಾಯ್ರೇ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್’ (Home Minister) ಸಿನಿಮಾ ಶುಕ್ರವಾರ ತೆರೆಕಂಡಿದೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಕರ್ನಾಟಕಾದ್ಯಂತ 350 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ (theatres) ‘ಹೋಮ್ ಮಿನಿಸ್ಟರ್’ ರಿಲೀಸ್ ಆಗಿದೆ. ಉಪ್ಪಿ ಈಗಲೂ ಅತ್ಯಂತ ಬೇಡಿಕೆಯಲ್ಲಿರುವ ನಟ ಅನ್ನೋದಿಕ್ಕೆ ಬೇರೆ ಉದಾಹರಣೆ ಬೇಕೆ?

‘ಹೋಮ್ ಮಿನಿಸ್ಟರ್’ ಚಿತ್ರವನ್ನು ಸುಜಯ್ ಕೆ ಶ್ರೀಹರಿ ನಿರ್ದೇಶಿಸಿದ್ದಾರೆ. ದಕ್ಷಿಣ ಭಾರತದ ಎಲ್ಲ ಭಾಷೆಗಳ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾ ಬ್ಯುಸಿ ನಟಿಯೆನಿಸಿಕೊಂಡಿರುವ ವೇಧಿಕಾ ಈ ಚಿತ್ರದಲ್ಲಿ ಫಿಮೇಲ್ ಲೀಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ’ಮದ್ರಾಸಿ’ ಹೆಸರಿನ ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ವೇಧಿಕಾ ‘ಹೋಮ್ ಮಿನಿಸ್ಟರ್’ ಚಿತ್ರದಲ್ಲಿ ಒಬ್ಬ ಜರ್ನಲಿಸ್ಟ್ ಪಾತ್ರ ನಿರ್ವಹಿಸಿದ್ದಾರೆ.

ಕೋವಿಡ್-19 ಪಿಡುಗುನಿಂದಾಗಿ ‘ಹೋಮ್ ಮಿನಿಸ್ಟರ್’ ಚಿತ್ರದ ಶೂಟಿಂಗ್ ವಿಳಂಬಗೊಂಡಿತ್ತು. ಹಾಗೆ ನೋಡಿದರೆ ಅದು 2019 ರ ಕೊನೆಭಾಗದಲ್ಲಿ ರಿಲೀಸ್ಆಗಬೇಕಿತ್ತು. ಶುಕ್ರವಾರದಂದು ಉಪೇಂದ್ರ ಮತ್ತು ವೇಧಿಕಾ ಚಿತ್ರಮಂದಿರವೊಂದರಲ್ಲಿ ಪ್ರೇಕ್ಷಕರ ನಡುವೆ ಕುಳಿತು ಸಿನಿಮಾ ವೀಕ್ಷಿಸಿದರು.

ಇದನ್ನೂ ಓದಿ:   Upendra: ‘ನಾವೆಲ್ಲಾ ಕಾಯೋದು ಆ ಒಂದು ದಿನಕ್ಕೆ’; ಸಿನಿಮಾ ರಿಲೀಸ್ ಸಂಭ್ರಮದ ಬಗ್ಗೆ ಉಪೇಂದ್ರ ಮನದಾಳದ ಮಾತು

Follow us on

Click on your DTH Provider to Add TV9 Kannada