Upendra: ‘ನಾವೆಲ್ಲಾ ಕಾಯೋದು ಆ ಒಂದು ದಿನಕ್ಕೆ’; ಸಿನಿಮಾ ರಿಲೀಸ್ ಸಂಭ್ರಮದ ಬಗ್ಗೆ ಉಪೇಂದ್ರ ಮನದಾಳದ ಮಾತು

Upendra: ‘ನಾವೆಲ್ಲಾ ಕಾಯೋದು ಆ ಒಂದು ದಿನಕ್ಕೆ’; ಸಿನಿಮಾ ರಿಲೀಸ್ ಸಂಭ್ರಮದ ಬಗ್ಗೆ ಉಪೇಂದ್ರ ಮನದಾಳದ ಮಾತು

TV9 Web
| Updated By: shivaprasad.hs

Updated on: Apr 01, 2022 | 9:15 PM

Home Minister Movie: ಸ್ಯಾಂಡಲ್​ವುಡ್​ನ ನಟ ರಿಯಲ್​ಸ್ಟಾರ್ ಉಪೇಂದ್ರ ಹಾಗೂ ವೇದಿಕಾ ಅಭಿನಯಿಸಿರುವ ಚಿತ್ರ ‘ಹೋಮ್​ ಮಿನಿಸ್ಟರ್’ ಇಂದು (ಏ.1) ರಾಜ್ಯಾದ್ಯಂತ ತೆರೆಕಂಡಿದೆ. ಚಿತ್ರ ವೀಕ್ಷಿಸಿದ ನಂತರ ಮಾತನಾಡಿದ ಉಪೇಂದ್ರ ಸಿನಿಮಾ ರಿಲೀಸ್ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ.

ಸ್ಯಾಂಡಲ್​ವುಡ್​ನ ನಟ ರಿಯಲ್​ಸ್ಟಾರ್ ಉಪೇಂದ್ರ (Upendra) ಹಾಗೂ ವೇದಿಕಾ ಅಭಿನಯಿಸಿರುವ ಚಿತ್ರ ‘ಹೋಮ್​ ಮಿನಿಸ್ಟರ್’ ಇಂದು (ಏ.1) ರಾಜ್ಯಾದ್ಯಂತ ತೆರೆಕಂಡಿದೆ. ನಾಯಕ ನಟ ಉಪೇಂದ್ರ ಹಾಗೂ ನಟಿ ವೇದಿಕಾ ಪ್ರೇಕ್ಷಕರ ಜೊತೆ ಕೂತು ಸಿನಿಮಾ ನೋಡಿದ್ದಾರೆ. ನಂತರ ಮಾತನಾಡಿದ ಉಪೇಂದ್ರ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಚಿತ್ರವೊಂದರ ರಿಲೀಸ್ ಬಗ್ಗೆ ಮಾತನಾಡಿದ ಅವರು, ‘‘ಸಿನಿಮಾ ಬಿಡುಗಡೆ ಆಗೋ ಆ ಒಂದು ದಿನಕ್ಕೆ ಕ=ನಾವೆಲ್ಲರೂ ಕಾಯುತ್ತಿರುತ್ತೇವೆ. ಅದು ಒಂದು ರೀತಿ ತೀರ್ಪು ಬರುವ ದಿನ’’ ಎಂದಿದ್ದಾರೆ. ‘‘ಜನರು ನೋಡಬೇಕು, ಖುಷಿ ಪಡಬೇಕು. ಅದನ್ನು ನೋಡಿ ನಮಗೆ ಖುಷಿಯಾಗುತ್ತದೆ’’ ಎಂದು ಹೇಳಿದ್ದಾರೆ ಉಪೇಂದ್ರ.

ಚಿತ್ರದ ರಿಲೀಸ್​ಗೂ ಮೊದಲು ಉಪೇಂದ್ರ ಅವರ ಹಲವು ಲುಕ್​ಗಳು ವೈರಲ್ ಆಗಿದ್ದವು. ಈ ಬಗ್ಗೆ ಮಾತನಾಡಿದ ಉಪೇಂದ್ರ, ‘‘ಹೌದು, ಅದು ಎಲ್ಲರಿಗೂ ಅಚ್ಚರಿ ತಂದಿತ್ತು. ಸಿನಿಮಾದಲ್ಲಿ ಅದು ಬೇರೆ ತರಹವೇ ಇದೆ. ಸಸ್ಪೆನ್ಸ್ ಇರಲಿ ಎಂದು ಹಾಗಿಟ್ಟಿದ್ದವು’’ ಎಂದಿದ್ದಾರೆ.

ಇದನ್ನೂ ಓದಿ:

KGF 2: ದೆಹಲಿಯಲ್ಲಿ ‘ಕೆಜಿಎಫ್ 2’ ಭರ್ಜರಿ ಪ್ರಚಾರ; ಇಲ್ಲಿವೆ ಫೋಟೋಗಳು

RRR: ‘ಶ್ರದ್ಧಾ ಕಪೂರ್, ಪರಿಣೀತಿ ಚೋಪ್ರಾ..’; ‘ಆರ್​ಆರ್​ಆರ್​’ ಆಫರ್ ರಿಜೆಕ್ಟ್ ಮಾಡಿದ್ದ 5 ಸ್ಟಾರ್ ನಟಿಯರು ಇವರೇ!