RRR: ‘ಶ್ರದ್ಧಾ ಕಪೂರ್, ಪರಿಣೀತಿ ಚೋಪ್ರಾ..’; ‘ಆರ್​ಆರ್​ಆರ್​’ ಆಫರ್ ರಿಜೆಕ್ಟ್ ಮಾಡಿದ್ದ 5 ಸ್ಟಾರ್ ನಟಿಯರು ಇವರೇ!

RRR: ‘ಶ್ರದ್ಧಾ ಕಪೂರ್, ಪರಿಣೀತಿ ಚೋಪ್ರಾ..’; ‘ಆರ್​ಆರ್​ಆರ್​’ ಆಫರ್ ರಿಜೆಕ್ಟ್ ಮಾಡಿದ್ದ 5 ಸ್ಟಾರ್ ನಟಿಯರು ಇವರೇ!
‘ಆರ್​ಆರ್​​ಆರ್​’ ಚಿತ್ರದ ಆಫರ್ ನಿರಾಕರಿಸಿದ ತಾರೆಯರು

Shraddha Kapoor | Parineeti Chopra: ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದಲ್ಲಿ ಆಲಿಯಾ ಭಟ್ ಹಾಗೂ ಬ್ರಿಟನ್ ನಟಿ ಒಲಿವಿಯಾ ಮೋರಿಸ್ ನಟಿಸಿರುವ ಪಾತ್ರಕ್ಕೆ ಯಾವೆಲ್ಲಾ ಕಲಾವಿದರಿಗೆ ಆಫರ್ ನೀಡಲಾಗಿತ್ತು ಎಂಬ ಬಗ್ಗೆ ನಿಮಗೆ ತಿಳಿದಿದೆಯೇ? ಕುತೂಹಲಕರ ವಿಚಾರ ಇಲ್ಲಿದೆ.

TV9kannada Web Team

| Edited By: shivaprasad.hs

Apr 01, 2022 | 7:25 PM

ರಾಜಮೌಳಿ (Rajamouli) ನಿರ್ದೇಶನದ ‘ಆರ್​ಆರ್​ಆರ್​’ (RRR Movie) ಚಿತ್ರ ಮಾರ್ಚ್ 25ರಂದು ರಿಲೀಸ್ ಆಗಿತ್ತು. ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ಚಿತ್ರದ ಕಲೆಕ್ಷನ್ ಒಂದೇ ವಾರಕ್ಕೆ 700 ಕೋಟಿ ರೂ ದಾಟಿದೆ. ತೆಲುಗು ಭಾಷೆಯ ಜತೆಗೆ ಹಿಂದಿ ಹಾಗೂ ಇತರ ಭಾಷೆಗಳಲ್ಲೂ ಚಿತ್ರ ಉತ್ತಮ ಕಲೆಕ್ಷನ್ ಮಾಡಿದೆ. ವಿದೇಶದಲ್ಲೂ ಹಣ ಬಾಚಿಕೊಳ್ಳುತ್ತಿರುವುದು ಚಿತ್ರದ ಹೆಚ್ಚುಗಾರಿಕೆ. ಚಿತ್ರ ಯಶಸ್ವಿಯಾಗಲು ಬಹುಮುಖ್ಯ ಕಾರಣ ಅದರ ಪಾತ್ರವರ್ಗ ಎಂದು ಹಲವು ಜನರು ಅಭಿಪ್ರಾಯಪಟ್ಟಿದ್ದಾರೆ. ರಾಮ್​ ಚರಣ್ ಹಾಗೂ ಜ್ಯೂ.ಎನ್​ಟಿಆರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಿತ್ರದಲ್ಲಿ ಆಲಿಯಾ ಭಟ್, ಅಜಯ್ ದೇವಗನ್ ಮೊದಲಾದ ತಾರೆಯರು ನಟಿಸಿದ್ದಾರೆ. ರಾಜಮೌಳಿ ಕಲಾವಿದರ ಆಯ್ಕೆಯಲ್ಲಿ ಬಹಳ ಮುತುವರ್ಜಿ ವಹಿಸುತ್ತಾರೆ. ಜತೆಗೆ ಕಲಾವಿದರಿಂದ ಎಂತಹ ಅಭಿನಯ ತೆಗೆಸಬೇಕು ಎಂಬ ಕಲೆಯೂ ಅವರಿಗೆ ಸಿದ್ಧಿಸಿದೆ. ಆದರೆ ಚಿತ್ರದಲ್ಲಿ ಆಲಿಯಾ ಭಟ್ (Alia Bhatt) ಹಾಗೂ ಬ್ರಿಟನ್ ನಟಿ ಒಲಿವಿಯಾ ಮೋರಿಸ್ ನಟಿಸಿರುವ ಪಾತ್ರಕ್ಕೆ ಯಾವೆಲ್ಲಾ ಕಲಾವಿದರಿಗೆ ಆಫರ್ ನೀಡಲಾಗಿತ್ತು ಎಂಬ ಬಗ್ಗೆ ನಿಮಗೆ ತಿಳಿದಿದೆಯೇ? ಕುತೂಹಲಕರ ವಿಚಾರ ಇಲ್ಲಿದೆ.

ಕೆಲವು ವರದಿಗಳ ಪ್ರಕಾರ ‘ಆರ್​ಆರ್​ಆರ್​’ನಲ್ಲಿ ನಟಿಸಲು ಮೊದಲಿಗೆ ಆಲಿಯಾ ಭಟ್​ಗೆ ಆಫರ್ ನೀಡಲಾಗಿರಲಿಲ್ಲವಂತೆ. ಆ ಪಾತ್ರಕ್ಕೆ ಹಲವು ಸ್ಟಾರ್ ನಟಿಯರನ್ನು ಸಂಪರ್ಕಿಸಲಾಗಿತ್ತು. ಆದರೆ ಅವರೆಲ್ಲರೂ ವಿವಿಧ ಕಾರಣಗಳಿಂದ ಚಿತ್ರವನ್ನು ರಿಜೆಕ್ಟ್ ಮಾಡಿದ್ದರು. ಅಂತಹ ನಟಿಯರು ಯಾರು? ರಾಜಮೌಳಿಯವರೊಂದಿಗೆ ಚಿತ್ರ ಮಾಡಲು ಎಲ್ಲಾ ತಾರೆಯರು ಮುಂದೆ ಬರುವಾಗ ಈ ತಾರೆಯರು ರಿಜೆಕ್ಟ್ ಮಾಡಿದ್ದೇಕೆ? ಈ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ಆಲಿಯಾ ಕಾಣಿಸಿಕೊಂಡಿರುವ ಸೀತಾ ಪಾತ್ರಕ್ಕಾಗಿ ರಾಜಮೌಳಿ ಬಾಲಿವುಡ್ ಬೆಡಗಿ ಶ್ರದ್ಧಾ ಕಪೂರ್​ ಅವರನ್ನು ಸಂಪರ್ಕಿಸಿದ್ದರು. ಆದರೆ ಅವರು ಚಿತ್ರವನ್ನು ಒಪ್ಪಿಕೊಳ್ಳಲಿಲ್ಲ. ನಂತರ ಮತ್ತೋರ್ವ ಖ್ಯಾತ ನಟಿ ಪರಿಣೀತಿ ಚೋಪ್ರಾಗೆ ಆಫರ್ ನೀಡಲಾಗಿತ್ತು. ಅವರಿಗೆ ಚಿತ್ರವನ್ನು ಒಪ್ಪಿಕೊಳ್ಳಲು ಆಸಕ್ತಿ ಹೊಂದಿದ್ದರು. ಆದರೆ ಏಕಕಾಲದಲ್ಲಿ ಸಾಲುಸಾಲು ಚಿತ್ರಗಳ ಆಫರ್ ಬಂದಿದ್ದರಿಂದ ‘ಆರ್​ಆರ್​ಆರ್​’ ರಿಜೆಕ್ಟ್ ಮಾಡಿದ್ದರು. ಕೊನೆಗೆ ಸೀತಾ ಪಾತ್ರಕ್ಕೆ ಆಲಿಯಾಗೆ ಆಫರ್ ನೀಡಲಾಯಿತು. ಅವರು ಚಿತ್ರವನ್ನು ಒಪ್ಪಿದರು.

ಆಲಿಯಾ ಚಿತ್ರವನ್ನು ಒಪ್ಪಿದ್ದರಿಂದ ಅವರಿಗೆ ದೊಡ್ಡ ಮಟ್ಟದ ಲಾಭವಾಗಿದೆ. ದಕ್ಷಿಣ ಭಾರತ ಪ್ರೇಕ್ಷಕರಿಗೆ ಆಲಿಯಾ ಮತ್ತಷ್ಟು ಹತ್ತಿರವಾಗಿದ್ದಾರೆ. ಅಲ್ಲದೇ ‘ಆರ್​ಆರ್​ಆರ್​’ನಲ್ಲಿ ಸೀತಾ ಪಾತ್ರ ಕೆಲವೇ ನಿಮಿಷ ಇದ್ದರೂ ಕೂಡ ಆಲಿಯಾ ನಟನೆ ಎಲ್ಲರ ಮನಗೆದ್ದಿದೆ. ಈಗಾಗಲೇ ಆಲಿಯಾ ಮತ್ತಷ್ಟು ದಕ್ಷಿಣ ಭಾರತ ಚಿತ್ರಗಳಲ್ಲಿ ನಟಿಸುವ ಸೂಚನೆ ನೀಡಿದ್ದಾರೆ. ಇದರಿಂದ ಅವರಿಗೆ ಮತ್ತಷ್ಟು ಸ್ಟಾರ್ ಚಿತ್ರಗಳ ಆಫರ್ ಬರಲೂಬಹುದು.

ಆಫರ್ ರಿಜೆಕ್ಟ್ ಮಾಡಿದ್ದ ಆಮಿ ಜಾಕ್ಸನ್:

ಈ ನಡುವೆ ‘ಆರ್​ಆರ್​ಆರ್​’ನಲ್ಲಿ ಗಮನ ಸೆಳೆದಿದ್ದು ಬ್ರಿಟಿಷ್ ನಟಿ ಒಲಿವಿಯಾ ಮಾರಿಸ್. ಜ್ಯೂ.ಎನ್​ಟಿಆರ್ ಜತೆ ಅವರ ನಟನೆ ಅಭಿಮಾನಿಗಳಿಗೆ ಪ್ರಿಯವಾಗಿತ್ತು. ಆದರೆ ವಾಸ್ತವವಾಗಿ ಈ ಪಾತ್ರಕ್ಕೆ ಅವರನ್ನು ಮೊದಲು ಸಂಪರ್ಕಿಸಿರಲಿಲ್ಲ. ಈಗಾಗಲೇ ಕನ್ನಡ ಸೇರಿದಂತೆ ದಕ್ಷಿಣ ಭಾರತದಲ್ಲಿ ಗುರುತಿಸಿಕೊಂಡಿರುವ ಆಮಿ ಜಾಕ್ಸನ್​ಗೆ ಆಫರ್ ನೀಡಲಾಗಿತ್ತು. ಆದರೆ ಅವರು ಪ್ರೆಗ್ನೆನ್ಸಿಯ ಕಾರಣದಿಂದ ಚಿತ್ರ ಒಪ್ಪಿಕೊಳ್ಳಲಿಲ್ಲ. ಬಾಲಿವುಡ್ ತಾರೆ ಕತ್ರಿನಾ ಕೈಫ್ ಸಹೋದರಿ ಇಸಾಬೆಲ್ಲಾ ಕೈಫ್​ಗೂ ಆಫರ್ ನೀಡಲಾಗಿತ್ತಂತೆ. ಆದರೆ ಅವರೂ ಒಪ್ಪಿಕೊಂಡಿರಲಿಲ್ಲ.

ಆ ನಂತರ ಬ್ರಿಟಿಷ್ ನಟಿ ಡೈಸಿ ಎಡ್ಗರ್ ಜೋನ್ಸ್ ಅವರನ್ನು ಸಂಪರ್ಕಿಸಲಾಗಿತ್ತು. ಅಂತಿಮವಾಗಿ ಮತ್ತೋರ್ವ ಬ್ರಿಟಿಷ್ ನಟಿ ಒಲಿವಿಯಾ ಮಾರಿಸ್​ ಆ ಪಾತ್ರವನ್ನು ಒಪ್ಪಿಕೊಂಡರು. ಈ ಮೂಲಕ ಭಾರತೀಯ ಚಿತ್ರರಂಗಕ್ಕೆ ಒಲಿವಿಯಾ ಪರಿಚಿತರಾಗಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಒಲಿವಿಯಾ ಇತ್ತೀಚೆಗಷ್ಟೇ ವಿಶೇಷ ಧನ್ಯವಾದಗಳನ್ನು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು. ವಿವಿಧ ಕಾರಣಗಳಿಗೆ ಖ್ಯಾತ ತಾರೆಯರು ‘ಆರ್​ಆರ್​ಆರ್​’ ಆಫರ್ ಮಿಸ್ ಮಾಡಿಕೊಂಡಿರಬಹುದು. ಆದರೆ ಅವರು ದೊಡ್ಡ ಅವಕಾಶವೊಂದನ್ನು ಮಿಸ್ ಮಾಡಿಕೊಂಡಿದ್ದಾರೆ ಎನ್ನುವುದು ತಾರೆಯರ ಅಭಿಮಾನಿಗಳ ಅಭಿಪ್ರಾಯ.

ಇದನ್ನೂ ಓದಿ:

RRR Box Office Collection: ಒಂದೇ ವಾರದಲ್ಲಿ ‘ಆರ್​ಆರ್​ಆರ್​’ ಗಳಿಸಿದ್ದು ಎಷ್ಟು ಕೋಟಿ? ಇಲ್ಲಿದೆ ನೋಡಿ ಬಾಕ್ಸಾಫೀಸ್ ಲೆಕ್ಕಾಚಾರ

Srinidhi Shetty: ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಕ್ಯೂಟ್ ಫೋಟೋ ಗ್ಯಾಲರಿ

Follow us on

Related Stories

Most Read Stories

Click on your DTH Provider to Add TV9 Kannada