Srinidhi Shetty: ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಕ್ಯೂಟ್ ಫೋಟೋ ಗ್ಯಾಲರಿ
Srinidhi Shetty Photos: ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರಪ್ರೇಮಿಗಳ ಮನಗೆದ್ದಿರುವ ಶ್ರೀನಿಧಿ ಶೆಟ್ಟಿ ಅವರ ಮುಂದಿನ ಚಿತ್ರಗಳ ಬಗ್ಗೆ ಅಭಿಮಾನಿಗಳು ಕುತೂಹಲಗೊಂಡಿದ್ದಾರೆ.
Updated on: Apr 01, 2022 | 6:26 PM

‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ ಈಗ ದೇಶಾದ್ಯಂತ ಸದ್ದು ಮಾಡುತ್ತಿರುವ ತಾರೆ.

ಶ್ರೀನಿಧಿ ಶೆಟ್ಟಿ ಅಭಿನಯದ ‘ಕೆಜಿಎಫ್ 2’ ರಿಲೀಸ್ಗೆ ಸಿದ್ಧವಾಗಿದ್ದು, ಏಪ್ರಿಲ್ 14ರಂದು ತೆರೆಗೆ ಬರಲಿದೆ.

‘ಕೆಜಿಎಫ್ 1’ರಲ್ಲಿ ಮಿಂಚಿದ್ದ ನಟಿ ‘ಕೆಜಿಎಫ್ 2’ರಲ್ಲಿ ಮತ್ತಷ್ಟು ಮಿಂಚಲಿದ್ದಾರೆ ಎಂದಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.

ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿರುವ ನಟಿ ಇತ್ತೀಚೆಗೆ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಸೀರೆ ಧರಿಸಿ ಭರ್ಜರಿ ಪೋಸ್ ನೀಡಿರುವ ನಟಿ, ಎಲ್ಲರ ಮನ ಗೆದ್ದಿದ್ದಾರೆ.

ಸದ್ಯ ಶ್ರೀನಿಧಿ ಶೆಟ್ಟಿ ಫೋಟೋಗಳು ವೈರಲ್ ಆಗಿವೆ.

‘ಕೆಜಿಎಫ್ 2’ ನಂತರ ಶ್ರೀನಿಧಿ ತಮಿಳು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ವಿಕ್ರಮ್ ಅಭಿನಯದ ‘ಕೋಬ್ರಾ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದ್ದು, ಅದರಲ್ಲಿ ಶ್ರೀನಿಧಿ ಬಣ್ಣಹಚ್ಚಿದ್ದಾರೆ.

‘ಕೆಜಿಎಫ್ 2’ ಮತ್ತಷ್ಟು ಬೇಡಿಕೆ ಹೆಚ್ಚಿಸಲಿದ್ದು, ಯಾವೆಲ್ಲಾ ತಾರೆಯರೊಂದಿಗೆ ಶ್ರೀನಿಧಿ ಶೆಟ್ಟಿ ನಟಿಸಲಿದ್ದಾರೆ ಎಂದು ಅಭಿಮಾನಿಗಳು ಕುತೂಹಲಗೊಂಡಿದ್ದಾರೆ.



















