ಹಳೇ ಹುಬ್ಭಳ್ಳಿಯಲ್ಲಿ ಕೋಮುಗಲಭೆ; ಕಾಂಗ್ರೆಸ್​ ನಾಯಕರ ಹಳೆಯ ವರಸೆ! ಇದು ಎಷ್ಟು ಸಮಂಜಸ? ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

ಹಳೇ ಹುಬ್ಭಳ್ಳಿಯಲ್ಲಿ ಕೋಮುಗಲಭೆ; ಕಾಂಗ್ರೆಸ್​ ನಾಯಕರ ಹಳೆಯ ವರಸೆ! ಇದು ಎಷ್ಟು ಸಮಂಜಸ? ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

TV9 Web
| Updated By: ಸಾಧು ಶ್ರೀನಾಥ್​

Updated on: Apr 20, 2022 | 3:37 PM

Violence in Hubballi And Congress: ಹುಬ್ಬಳ್ಳಿಯಲ್ಲಿ ಹಳೆಯ ಸಮಸ್ಯೆಯೊಂದು ನವೀನ ಮಾದರಿಯಲ್ಲಿ ತಾಂಡವವಾಡಿ, ಇದ್ದಕ್ಕಿದ್ದಂತೆ ಹಿಂದೂ ಮತ್ತು ಮುಸಲ್ಮಾನರ ಮಧ್ಯೆ ಸಾಮರಸ್ಯಕ್ಕೆ ಪೆಟ್ಟು ಕೊಟ್ಟಿದೆ. ಈ ಸಮಯದಲ್ಲಿ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಪಕ್ಷಭೇದ ಮರೆತು ಸಾಮರಸ್ಯ ಮೂಡಿಸುವ ಕೈಕಂರ್ಯದಲ್ಲಿ ತೊಡಗಬೇಕಿತ್ತು. ಆದರೆ ಇದಕ್ಕೆ ರಾಜಕೀಯ ಬಣ್ಣ ಬಳಿದಿದ್ದು ಮಾತ್ರ ಪರಿಸ್ಥಿತಿಯ ಚೋದ್ಯವೇ ಸರಿ.

ಹುಬ್ಬಳ್ಳಿಯಲ್ಲಿ ಹಳೆಯ ಸಮಸ್ಯೆಯೊಂದು ನವೀನ ಮಾದರಿಯಲ್ಲಿ ತಾಂಡವವಾಡಿ, ಇದ್ದಕ್ಕಿದ್ದಂತೆ ಹಿಂದೂ ಮತ್ತು ಮುಸಲ್ಮಾನರ ಮಧ್ಯೆ ಸಾಮರಸ್ಯಕ್ಕೆ ಪೆಟ್ಟು ಕೊಟ್ಟಿದೆ. ಈ ಸಮಯದಲ್ಲಿ ಜನಪ್ರತಿನಿಧಿಗಳು, ರಾಜಕೀಯ ಮುಖಂಡರು ಪಕ್ಷಭೇದ ಮರೆತು ಸಾಮರಸ್ಯ ಮೂಡಿಸುವ ಕೈಕಂರ್ಯದಲ್ಲಿ ತೊಡಗಬೇಕಿತ್ತು. ಆದರೆ ಇದಕ್ಕೆ ರಾಜಕೀಯ ಬಣ್ಣ ಬಳಿದಿದ್ದು ಮಾತ್ರ ಪರಿಸ್ಥಿತಿಯ ಚೋದ್ಯವೇ ಸರಿ (Hubballi Violence).

ಶನಿವಾರ ಸಂಜೆ ಹಳೇ ಹುಬ್ಭಳ್ಳಿಯಲ್ಲಿ ನಡೆದ ಕೋಮುಗಲಭೆಯ ನಂತರ ಕಾಂಗ್ರೆಸ್​ ಪಕ್ಷದ ನಾಯಕರುಗಳ ಪ್ರತಿಕ್ರಿಯೆ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಆ ಗಲಭೆಯಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರನ್ನು ಸರಕಾರ ಶಿಕ್ಷಿಸಲಿ ಎಂದ ಕಾಂಗ್ರೆಸ್​ ಈಗ ತನ್ನ ವರಸೆ ಬದಲಿಸಿದೆ. ಪ್ರಾರ್ಥನೆ ಮಾಡಲು ಹೋದವರನ್ನು, ಅಮಾಯಕರನ್ನು ಬಂಧಿಸಿದೆ. ಅವರನ್ನು ಬಿಟ್ಟುಬಿಡಿ ಎಂದು ಕಾಂಗ್ರೆಸ್​ ಹೇಳುತ್ತಿದೆ. ಈ ಕುರಿತು ಇಂದಿನ ಡಿಜಿಟಲ್​ ಲೈವ್​ನಲ್ಲಿ ಚರ್ಚಿಸೋಣ (TV9 Kannada Digital Live). ಆ್ಯಂಕರ್​ ಹರಿಪ್ರಸಾದ್​ ಈ ಚರ್ಚೆ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30ರ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ.

ಇದನ್ನೂ ವೀಕ್ಷಿಸಿ:
ಹಿಂದೂ-ಮುಸಲ್ಮಾನರ ಸಾಮರಸ್ಯಕ್ಕೆ ಪೆಟ್ಟು ಬಿದ್ದಿದೆ, ಮುಂದೇನು ಎಂಬುದು ಕಾಡತೊಡಗಿದೆ :ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ

ಇದನ್ನೂ ವೀಕ್ಷಿಸಿ:
ಕೋಮು ಸಾಮರಸ್ಯ ಕದಡಲು ಪೊಲೀಸ್​ ವೈಫಲ್ಯ ಕಾರಣವಾ? ಪೊಲೀಸರು ತಡವಾಗಿ ಎಚ್ಚೆತ್ತರಾ? ಟಿವಿ 9 ಡಿಜಿಟಲ್ ಲೈವ್​ನಲ್ಲಿ ಚರ್ಚೆ