ದೆಹಲಿಯಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಓದುವ ಬಾಲಕಿ; ಬಿಜೆಪಿ ಕಾರ್ಯದರ್ಶಿ ಸಿಟಿ ರವಿ ಫುಲ್ ಫಿದಾ

ಸಿಟಿ ರವಿ ಸ್ವತಃ ಬಾಲಕಿ ಮುಂದೆ ನಿಂತು ಆಕೆಯ ಸಾಹಸವನ್ನು ವೀಕ್ಷಿಸಿದ್ದಾರೆ. ಆಕೆಯ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ನಂತರ ಅವಳ ಮುಂದೆ ಇಂಗ್ಲಿಷ್ ಪೇಪರ್​ನ ಇಟ್ಟರೆ ಅವಳು ಓದುತ್ತಾಳೆ.

TV9kannada Web Team

| Edited By: sandhya thejappa

Apr 26, 2022 | 4:33 PM

ತಪ್ಪಾಗದಂತೆ ಓದುವುದೇ ದೊಡ್ಡ ಸವಾಲು. ತಪ್ಪಾಗದಂತೆ ಓದುವುದಕ್ಕೆ ಎಷ್ಟೇ ಪ್ರಯತ್ನಪಟ್ಟರೂ ಒಂದಲ್ಲ ಒಂದು ಪದ ತಪ್ಪಾಗಿ ಉಚ್ಚಾರವಾಗುತ್ತದೆ. ಈ ನಡುವೆ ದೆಹಲಿಯಲ್ಲಿ ಬಾಲಕಿಯೊಬ್ಬಳು ದೊಡ್ಡ ಸಾಧನೆ ಮಾಡಿದ್ದಾಳೆ. ಕಣ್ಣಿಗೆ ಬಟ್ಟೆಗೆ ಕಟ್ಟಿ ಓದುತ್ತಾಳೆ. ಬಾಲಕಿ ಪ್ರಿಸ್ತಾ ಚಮತ್ಕಾರಕ್ಕೆ ಬಿಜೆಪಿ ಕಾರ್ಯದರ್ಶಿ ಸಿಟಿ ರವಿ ಫುಲ್ ಫಿದಾ ಆಗಿದ್ದಾರೆ. ಸಿಟಿ ರವಿ ಸ್ವತಃ ಬಾಲಕಿ ಮುಂದೆ ನಿಂತು ಆಕೆಯ ಸಾಹಸವನ್ನು ವೀಕ್ಷಿಸಿದ್ದಾರೆ. ಆಕೆಯ ಕಣ್ಣಿಗೆ ಬಟ್ಟೆ ಕಟ್ಟಲಾಗುತ್ತದೆ. ನಂತರ ಅವಳ ಮುಂದೆ ಇಂಗ್ಲಿಷ್ ಪೇಪರ್​ನ ಇಟ್ಟರೆ ಅವಳು ಓದುತ್ತಾಳೆ. ಹಾಗೇ ಅವಳ ಮುಂದೆ ನಿಂತು ಕೈ, ಕಾಲು ಆ್ಯಕ್ಷನ್ ಮಾಡಿದರೆ ಅವರ ಅವಳು ಅದೇ ರೀತಿ ಆ್ಯಕ್ಷನ್ ಮಾಡುತ್ತಾಳೆ. ಸಿಟಿ ರವಿ ಅವರು ಕೂಡಾ ಕೆಲ ಆ್ಯಕ್ಷನ್ ಮಾಡಿದ್ದಾರೆ. ಈಕೆಯ ಸಾಧನೆ ಕಂಡು ಅವರು ಆಶ್ಚರ್ಯಗೊಂಡಿದ್ದಾರೆ.

ಇದನ್ನೂ ಓದಿ

ಪ್ರೊಬೇಷನ್ ಅವಧಿಯಲ್ಲಿರುವಾಗಲೇ ಖದರು ಪ್ರದರ್ಶಿಸುತ್ತಿರುವ ಒಬ್ಬ ಪಿಎಸ್ ಐ ಸೋಮವಾರಪೇಟೆ ಗ್ರಾಮಾಂತರ ಠಾಣೆಯಲ್ಲಿದ್ದಾರೆ!

3 ಸಾವಿರಕ್ಕೂ ಹೆಚ್ಚು ಹಾವುಗಳ ರಕ್ಷಿಸಿದ್ದ, ಸಾವು ಗೆದ್ದ ಉರಗ ರಕ್ಷಕ ಸೈಯದ್ ಅಹಮ್ಮದ್ ಈಗ ಎಲ್ಲಿದ್ದಾನೆ ಗೊತ್ತಾ?

Follow us on

Click on your DTH Provider to Add TV9 Kannada