3 ಸಾವಿರಕ್ಕೂ ಹೆಚ್ಚು ಹಾವುಗಳ ರಕ್ಷಿಸಿದ್ದ, ಸಾವು ಗೆದ್ದ ಉರಗ ರಕ್ಷಕ ಸೈಯದ್ ಅಹಮ್ಮದ್ ಈಗ ಎಲ್ಲಿದ್ದಾನೆ ಗೊತ್ತಾ?
ಹಾವುಗಳೊಂದಿಗೆ ಆಟವಾಡುತ್ತ ವಿಡಿಯೋ ಮಾಡಲು ಹೋಗಿ ಉರಗ ಪ್ರೇಮಿ ವಾಝ್ ಸೈಯದ್ ಅಹಮ್ಮದ್‌ಗೆ ಹಾವೊಂದರಿಂದ ಕಚ್ಚಿಸಿಕೊಂಡಿದ್ದರು. ಹಾವು ಕಚ್ಚಿದ ಭಯಾನಕ ವಿಡಿಯೋ ಸಕತ್ ವೈರಲ್ ಕೂಡ ಆಗಿತ್ತು.
ಕಾರವಾರ: ಕಳೆದ ಮಾರ್ಚ್ ತಿಂಗಳಲ್ಲಿ ಶಿರಸಿ ಭಾಗದ ಅರಣ್ಯಪ್ರದೇಶದಲ್ಲಿ ಮೂರು ನಾಗರ ಹಾವುಗಳ ರಕ್ಷಣೆ ಮಾಡಿ ಕಾಡಿಗೆ ಬಿಡುವಾಗ, ಹಾವುಗಳೊಂದಿಗೆ ಆಟವಾಡುತ್ತ ವಿಡಿಯೋ ಮಾಡಲು ಹೋಗಿ ಉರಗ ಪ್ರೇಮಿ ವಾಝ್ ಸೈಯದ್ ಅಹಮ್ಮದ್‌ಗೆ ಹಾವೊಂದರಿಂದ ಕಚ್ಚಿಸಿಕೊಂಡಿದ್ದರು. ಹಾವು ಕಚ್ಚಿದ ಭಯಾನಕ ವಿಡಿಯೋ ಸಕತ್ ವೈರಲ್ ಕೂಡ ಆಗಿತ್ತು. ಆ ವಿಡಿಯೋದ ತುಣುಕೊಂದನ್ನು IFS ಅಧಿಕಾರಿ ಸುಶಾಂತ ನಂದಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಹಾವು ಕಚ್ಚಿಸಿಕೊಂಡ ಉರಗ ಪ್ರೇಮಿ ಏನಾದ? ಎಂಬುವುದು ಎಲ್ಲರಲ್ಲೂ ಯಕ್ಷಪ್ರಶ್ನೆಯಾಗಿ ಉಳಿದಿತ್ತು. ಘಟಸರ್ಪ ಸೈಯದ್ನ ಮಣಕಾಲಿಗೆ ಕಚ್ಚಿದ್ದರಿಂದ ಆತ ಅಲ್ಲೆ ಕುಸಿದು ಬಿದ್ದಿದ್ದ.
ಹಾವು ಕಚ್ಚಿದ ನಂತರ ಸೈಯದ್ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ 20 ದಿನಗಳ ಕಾಲ ಚಿಕಿತ್ಸೆ ಪಡೆದು ಗುಣಮುಖರಾಗಿ ತಮ್ಮ ಸ್ವ ಸ್ಥಳಕ್ಕೆ ಬಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವಾಸವಿರುವ ಇವರು ತಮ್ಮ ಚಿಕ್ಕ ವಯಸ್ಸಿನಿಂದಲು ಹಾವು ರಕ್ಷಣೆ ಮೇಲೆ ವಿಶೇಷ ಆಸಕ್ತಿ ಹೊಂದಿದ್ದಾರೆ. ಈವರೆಗೆ ಸುಮಾರು 3000 ಕ್ಕೂ ಹೆಚ್ಚು ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಶಿರಸಿ ಭಾಗದಲ್ಲಿ ಯಾರ ಮನೆಯಲ್ಲಿ ಹಾವು ಖಂಡರು ತಕ್ಷಣ ಫೋನ್ ಬರುವುದು ಈ ಮಾಝ್ ಸೈಯದ್ ಅಹಮ್ಮದ್‌ಗೆ. ಅಷ್ಟೊಂದು ಹಾವು ಹಿಡಿಯುವುದರಲ್ಲಿ ಇವರು ಫೇಮಸ್.
ಕಳೆದ ಮಾರ್ಚ್ ತಿಂಗಳಲ್ಲಿ ಶಿರಸಿ ಅರಣ್ಯಪ್ರದೇಶದಲ್ಲಿ ಮೂರು ನಾಗರ ಹಾವುಗಳೊಂದಿಗೆ ಆಟವಾಡುತ್ತಿದ್ದಾಗ ಅದರಲ್ಲಿ ಒಂದು ಹಾವು ಇತನ ಮಣಕಾಲಿಗೆ ಕಚ್ಚಿತ್ತು. ಹಾವುಗಳ ರಕ್ಷಣೆ ವಿಷಯದಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರು ಕೆಲವೊಮ್ಮೆ ಹಿಂತಹ ಘಟನೆಗಳು ನಡೆಯುತ್ತವೆ. ದೇವರ ದಯೆ ಈತ ಹುಷಾರಾಗಿ ತಮ್ಮ ಮನೆಗೆ ಮರಳಿದ್ದಾರೆ.
ಇನ್ನು ಕೆಲವು ದಿನಗಳ ವಿಶ್ರಾಂತಿ ಬಳಿಕ ಮತ್ತೆ ಸೈಯದ್ ಹಾವುಗಳ ರಕ್ಷಣೆಗೆ ಇಳಿದಿದ್ದಾರೆ. ಇಂದು ಶಿರಸಿಯ ಟಿಪ್ಲು ನಗರದಲ್ಲಿ ಸ್ಥಳೀಯರೊಬ್ಬರ ಮನೆಗೆ ಬಂದ ನಾಗರ ಹಾವನ್ನ ರಕ್ಷಣೆ ಮಾಡಿ, ಅದರೊಂದು ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದರಿಂದ ಮೂರು ಹಾವುಗಳೊಂದಿಗೆ ಆಟವಾಡುತ್ತ ಕಚ್ಚಿಸಿ ಕೊಂಡಿದ್ದ ಸೈಯದ್ ಏನಾಗಿದ್ದ ಎಂಬುದಕ್ಕೆ ಉತ್ತರ ಸಿಕ್ಮಿದಂತಾಗಿದೆ. ಇನ್ನ ಮೇಲಾದರು ಸೈಯದ್ ಎಚ್ಚರಿಕೆಯಿಂದ ಸುರಕ್ಷಿತವಾಗಿ ಹಾವುಗಳ ರಕ್ಷಣೆ ಮಾಡುವ ಕಾರ್ಯದಲ್ಲಿ ತೊಡಗಲಿ ಎಂಬುವುದು ಜನರ ಆಶಯವಾಗಿದೆ.
ಇನ್ನೂ ಈ ಬಗ್ಗೆ ಸೈಯದ್ ಅವರನ್ನ ಕೇಳಿದರೆ, ಹಾವುಗಳು ನಮ್ಮ ಪರಿಸರಕ್ಕೆ ಬಹಳ ಉಪಯುಕ್ತ ಸರಿಸೃಪ, ಜನ ಇವುಗಳನ್ನು ಸಾಯಿಸಲಿಕ್ಕೆ ಹೋಗಬಾರದು ಅವುಗಳನ್ನ ಜೀವಂತವಾಗಿ ಬಿಡಬೇಕು ಎಂದರು. ಇನ್ನೂ ಇದೆ ಮೊದಲೇನಲ್ಲ ನಾನು ಹಾವುಗಳಿಂದ ಕಚ್ಚಿಸಿಕೊಂಡಿದ್ದು ಈ ಹಿಂದೆ ಎರಡು ಬಾರಿ ಹಾವುಗಳಿಂದ ಕಚ್ಚಿಸಿಕೊಂಡಿದ್ದೆ. ಏನು ಆಗಲ್ಲ ದೈರ್ಯದಿಂದ ಇರಬೇಕು ಎಂದು ಸಲಹೆ ನೀಡಿದ್ದಾರೆ.
ವರದಿ: ವಿನಾಯಕ ಬಡಿಗೇರ, ಟಿವಿ9 ಕಾರವಾರ
ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ವಿರುದ್ಧ ಜೆಡಿಎಸ್ ಶಾಸಕ ರೇವಣ್ಣ ದರ್ಪದ ಭಾಷೆ! ಹೆಚ್ ಡಿ ಕುಮಾರಸ್ವಾಮಿ ಏನು ಹೇಳ್ತಾರೆ? ಒಂದು ಚರ್ಚೆ