Kajal Aggarwal: ಕಾಜಲ್ ಅಗರ್ವಾಲ್ ಪುತ್ರನ ಹೆಸರು ಬಹಿರಂಗ; ಮಗುವಿನ ಹೆಸರು ತಿಳಿಸಿದ ಪತಿ ಗೌತಮ್
Neil Kitchlu | Gautam Kitchlu: ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಏಪ್ರಿಲ್ 19ರ ಮಂಗಳವಾರ ಗಂಡುಮಗುವಿಗೆ ಜನ್ಮನೀಡಿದ್ದರು. ಇದೀಗ ಕಾಜಲ್ ಪತಿ ಗೌತಮ್ ಕಿಚ್ಲು ಪುತ್ರನ ಹೆಸರನ್ನು ತಿಳಿಸಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.
ಬಹುಭಾಷಾ ನಟಿ ಕಾಜಲ್ ಅಗರ್ವಾಲ್ (Kajal Aggarwal) ಏಪ್ರಿಲ್ 19ರ ಮಂಗಳವಾರ ಗಂಡುಮಗುವಿಗೆ ಜನ್ಮನೀಡಿದ್ದರು. ಇದೀಗ ಗೌತಮ್ ಕಿಚ್ಲು (Gautam Kitchlu) ಹಾಗೂ ಕಾಜಲ್ ತಾರಾ ದಂಪತಿ ಪುತ್ರನ ಹೆಸರನ್ನು ಅಧಿಕೃತವಾಗಿ ತಿಳಿಸಿದ್ದಾರೆ. ಕಾಲಿವುಡ್ ಹಾಗೂ ಟಾಲಿವುಡ್ನಲ್ಲಿ ಮಿಂಚಿ, ಅಪಾರ ಅಭಿಮಾನಿ ಬಳಗ ಸಂಪಾದಿಸಿರುವ ಕಾಜಲ್, 2020ರ ಅಕ್ಟೋಬರ್ 30ರಂದು ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾಗಿದ್ದರು. ಕೊರೊನಾ ಕಾರಣದಿಂದ ಸಿಂಪಲ್ ಆಗಿ ಈರ್ವರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರವೂ ಚಿತ್ರರಂಗದಲ್ಲಿ ಮುಂದುವರೆದಿದ್ದ ಕಾಜಲ್, ಇದಕ್ಕೆ ಕುಟುಂಬದ ಸಹಕಾರ ಇರುವುದರ ಬಗ್ಗೆ ಹಲವು ಬಾರಿ ಮಾತನಾಡಿದ್ದರು. ಕಳೆದ ಕೆಲವು ಸಮಯದ ಹಿಂದೆ ಪ್ರೆಗ್ನೆಂಟ್ ಆಗಿರುವುದನ್ನು ಘೋಷಿಸಿದ್ದ ನಟಿ, ನಂತರ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು.
ಚಿತ್ರರಂಗದಿಂದ ಬಿಡುವು ಪಡೆದುಕೊಂಡಿದ್ದರೂ ಕೂಡ ಕಾಜಲ್, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುತ್ತಿದ್ದರು. ಹಲವು ವಿಶೇಷ ಫೋಟೋಶೂಟ್ಗಳ ಮೂಲಕ ‘ಪ್ರೆಗ್ನೆನ್ಸಿ ಫೋಟೋಶೂಟ್’ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದರು. ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ನಟಿ ನಿರಂತರ ಸಂಪರ್ಕದಲ್ಲಿರುತ್ತಿದ್ದರು.
ಪುತ್ರನ ಹೆಸರನ್ನು ಘೋಷಿಸಿದ ಗೌತಮ್ ಕಿಚ್ಲು- ಕಾಜಲ್:
ಪ್ರಸ್ತುತ ಕಾಜಲ್ ಪತಿ ಗೌತಮ್ ಕಿಚ್ಲು ಪುತ್ರನ ಹೆಸರನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಗೌತಮ್ ಕಿಚ್ಲು ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅದರಲ್ಲಿ ಎಲ್ಲರ ಹಾರೈಕೆ, ಶುಭಾಶಯಗಳಿಗೆ ಧನ್ಯವಾದ ತಿಳಿಸಿದ್ದಾರೆ. ಜತೆಗೆ ಪುತ್ರನ ಹೆಸರನ್ನು ಬಹಿರಂಗಪಡಿಸಿದ್ದಾರೆ. ಕಾಜಲ್ ಹಾಗೂ ಗೌತಮ್ ತಮ್ಮ ಪುತ್ರನಿಗೆ ‘ನೀಲ್ ಕಿಚ್ಲು’ (Neil Kitchlu) ಎಂದು ನಾಮಕರಣ ಮಾಡಿದ್ದಾರೆ.
ಗೌತಮ್ ಕಿಚ್ಲು ಹಂಚಿಕೊಂಡ ಪೋಸ್ಟ್:
View this post on Instagram
ದಕ್ಷಿಣ ಭಾರತದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಕಾಜಲ್ಗೆ ಇದೆ. ಸದ್ಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರೂ ಕೂಡ ನಟಿ ಕಾಣಿಸಿಕೊಂಡಿರುವ ಹಲವು ಚಿತ್ರಗಳು ರಿಲೀಸ್ಗೆ ಸಿದ್ಧವಿದೆ. ಕಾಜಲ್ ನಟನೆಯ, ಚಿರಂಜೀವಿ, ರಾಮ್ಚರಣ್ ಕಾಣಿಸಿಕೊಂಡಿರುವ ‘ಆಚಾರ್ಯ’ ಶೀಘ್ರದಲ್ಲೇ ತೆರೆಕಾಣಲಿದೆ. ಇದರ ಹೊರತಾಗಿ ಇನ್ನೂ ಮೂರು ಚಿತ್ರಗಳಲ್ಲಿ ನಟಿ ಬಣ್ಣಹಚ್ಚಿದ್ದು, ಅವೂ ಕೂಡ 2022ರಲ್ಲೇ ತೆರೆಕಾಣುವ ನಿರೀಕ್ಷೆಗಳಿವೆ.
ಇದನ್ನೂ ಓದಿ: ಕಾಜಲ್ ಅಗರ್ವಾಲ್ ಕಡೆಯಿಂದ ಸಿಹಿ ಸುದ್ದಿ; ಮನೆಗೆ ಹೊಸ ಸದಸ್ಯನ ಆಗಮನ
Kajal Aggarwal: ಪ್ರೆಗ್ನೆನ್ಸಿ ದಿನಗಳನ್ನು ಎಂಜಾಯ್ ಮಾಡುತ್ತಿರುವ ಕಾಜಲ್; ಮುದ್ದಾದ ಫೋಟೋಗಳನ್ನು ಹಂಚಿಕೊಂಡ ನಟಿ
Published On - 1:53 pm, Wed, 20 April 22