Rashmika Mandanna: ಮದ್ಯದ ಕಂಪನಿ ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಹಿಗ್ಗಾಮುಗ್ಗಾ ಟ್ರೋಲ್ ಆದ ನಟಿ

ಸೆಲೆಬ್ರಿಟಿಗಳನ್ನು ಸಾಕಷ್ಟು ಮಂದಿ ಮಾದರಿ ಆಗಿ ತೆಗೆದುಕೊಳ್ಳುತ್ತಾರೆ. ಅವರು ಬಳಸುವ ಕಾಸ್ಮೆಟಿಕ್​ಗಳನ್ನು, ಬ್ರ್ಯಾಂಡ್​ಗಳನ್ನು ಬಳಸಲು ಒಲವು ತೋರುತ್ತಾರೆ. ಅವರು ಕೆಟ್ಟದ್ದನ್ನು ಸೂಚಿಸಿದರೆ ಅನೇಕ ಫ್ಯಾನ್ಸ್ ಯೋಚನೆ ಕೂಡ ಮಾಡದೆ ಅದನ್ನು ಪಾಲಿಸುತ್ತಾರೆ. ನಟಿ ರಶ್ಮಿಕಾ ಕೂಡ ಇದೇ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ.

Rashmika Mandanna: ಮದ್ಯದ ಕಂಪನಿ ಜಾಹೀರಾತಿನಲ್ಲಿ ರಶ್ಮಿಕಾ ಮಂದಣ್ಣ; ಹಿಗ್ಗಾಮುಗ್ಗಾ ಟ್ರೋಲ್ ಆದ ನಟಿ
ಮದ್ಯದ ಕಂಪನಿ ಜಾಹೀರಾತಿನಲ್ಲಿ ರಶ್ಮಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 24, 2022 | 2:38 PM

ನಟ-ನಟಿಯರು ಸಿನಿಮಾದ ಆದಾಯ ಒಂದನ್ನೇ ನಂಬಿಕೊಂಡಿಲ್ಲ. ನಾನಾ ರೀತಿಯ ಜಾಹೀರಾತುಗಳನ್ನು (Advertisement) ಒಪ್ಪಿಕೊಳ್ಳುವ ಮೂಲಕ ಸಾಕಷ್ಟು ದುಡ್ಡು ಮಾಡುತ್ತಾರೆ. ಆದರೆ, ಹಣ ಸಿಗುತ್ತದೆ ಎನ್ನುವ ಕಾರಣಕ್ಕೆ ಸಿಕ್ಕಸಿಕ್ಕ ಜಾಹೀರಾತುಗಳನ್ನು ಒಪ್ಪಿಕೊಂಡರೆ ಟ್ರೋಲ್ ಆಗೋದು ಪಕ್ಕಾ. ನಟಿ ನಿಧಿ ಅಗರ್​ವಾಲ್ (Nidhhi Agerwal) ಕಾಂಡೋಮ್ ಕಂಪನಿಯ ಪ್ರಚಾರದಲ್ಲಿ ಭಾಗಿ ಆಗಿದ್ದಕ್ಕೆ ಟ್ರೋಲ್ ಆಗಿದ್ದರು. ಅಕ್ಷಯ್ ಕುಮಾರ್ ಪಾನ್ ಮಸಾಲ ಅಡ್ವಟೈಸ್​ಮೆಂಟ್​ನಲ್ಲಿ ಕಾಣಿಸಿಕೊಳ್ಳುವ ಮೂಲಕ ತೀವ್ರ ಟೀಕೆಗೆ ಗುರಿ ಆದರು. ಈಗ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸರದಿ. ಅವರು ಮದ್ಯದ ಕಂಪನಿ ಕಿಂಗ್ ಫಿಶರ್ ಜಾಹೀರಾತಿನಲ್ಲಿ ನಟಿಸಿದ್ದಕ್ಕೆ ಫ್ಯಾನ್ಸ್ ಸಿಟ್ಟಾಗಿದ್ದಾರೆ.

ಸೆಲೆಬ್ರಿಟಿಗಳನ್ನು ಸಾಕಷ್ಟು ಮಂದಿ ಮಾದರಿ ಆಗಿ ತೆಗೆದುಕೊಳ್ಳುತ್ತಾರೆ. ಅವರು ಬಳಸುವ ಕಾಸ್ಮೆಟಿಕ್​ಗಳನ್ನು, ಬ್ರ್ಯಾಂಡ್​ಗಳನ್ನು ಬಳಸಲು ಒಲವು ತೋರುತ್ತಾರೆ. ಅವರು ಕೆಟ್ಟದ್ದನ್ನು ಸೂಚಿಸಿದರೆ ಅನೇಕ ಫ್ಯಾನ್ಸ್ ಯೋಚನೆ ಕೂಡ ಮಾಡದೆ ಅದನ್ನು ಪಾಲಿಸುತ್ತಾರೆ. ನಟಿ ರಶ್ಮಿಕಾ ಕೂಡ ಇದೇ ವಿಚಾರಕ್ಕೆ ಟ್ರೋಲ್ ಆಗುತ್ತಿದ್ದಾರೆ. ಅವರು ಮದ್ಯದ ಕಂಪನಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಎಷ್ಟು ಸರಿ ಎಂದು ಒಂದಷ್ಟು ಮಂದಿ ಪ್ರಶ್ನೆ ಮಾಡುತ್ತಿದ್ದಾರೆ.

ರಶ್ಮಿಕಾ ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಅವರು ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ಹೀಗಾಗಿ ಅವರ ಅಭಿಮಾನಿ ಬಳಗ ಕೂಡ ದೊಡ್ಡದಿದೆ. ಈ ಕಾರಣಕ್ಕೆ ಮದ್ಯದ ಜಾಹೀರಾತಿನಲ್ಲಿ ಕಾಣಿಸಿಕೊಂಡಾಗ ಒಂದಷ್ಟು ಮಂದಿ ಅವರನ್ನು ಹಿಂಬಾಲಿಸಬಹುದು ಎಂಬ ಆತಂಕ ಅಭಿಮಾನಿಗಳದ್ದು.

ಈ ಜಾಹೀರಾತಿನಲ್ಲಿ ರಶ್ಮಿಕಾ ಜತೆ ಬಾಲಿವುಡ್ ನಟ ವರುಣ್​ ಧವನ್​ ಕೂಡ ಕಾಣಿಸಿಕೊಂಡಿದ್ದಾರೆ. ಸಮುದ್ರ ದಂಡೆಯ ಪಕ್ಕ ಈ ಜಾಹೀರಾತನ್ನು ಶೂಟ್ ಮಾಡಲಾಗಿದೆ. ಇತ್ತೀಚೆಗೆ ವರುಣ್ ಧವನ್ ಹಾಗೂ ರಶ್ಮಿಕಾ ‘ಬೀಸ್ಟ್’ ಸಿನಿಮಾ ಹಾಡಿಗೆ ರೀಲ್ಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದು ಏಕೆ ಎನ್ನುವ ಪ್ರಶ್ನೆ ಮೂಡಿತ್ತು. ಕಿಂಗ್ ಫಿಶರ್ ಜಾಹೀರಾತಿನಿಂದ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಸದ್ಯ ಹಲವು ಸಿನಿಮಾ ಪ್ರಾಜೆಕ್ಟ್​ಗಳು ರಶ್ಮಿಕಾ ಕೈಯಲ್ಲಿ ಇವೆ. ‘ಪುಷ್ಪ’ ಯಶಸ್ಸಿನಿಂದ ರಶ್ಮಿಕಾಗೆ ಬೇಡಿಕೆ ಹೆಚ್ಚಿದೆ. ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಅವರು ಶೀಘ್ರವೇ ಪಾಲ್ಗೊಳ್ಳಲಿದ್ದಾರೆ. ಸಿದ್ದಾರ್ಥ್​ ಮಲ್ಹೋತ್ರಾ ನಟನೆಯ ‘ಮಿಷನ್ ಮಜ್ನು’ ಚಿತ್ರ ಇನ್ನಷ್ಟೇ ತೆರೆಗೆ ಬರಬೇಕಿದೆ. ಅಮಿತಾಭ್ ಬಚ್ಚನ್ ಅಭಿನಯದ ‘ಗುಡ್​​ ಬೈ’ ಸಿನಿಮಾದಲ್ಲೂ ಅವರು ನಟಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಬರ್ತ್​​ಡೇ ಆಚರಿಸಿಕೊಂಡಿದ್ದರು. ಈ ವೇಳೆ ಅವರ ಎರಡು ಹೊಸ ಸಿನಿಮಾಗಳು ಘೋಷಣೆ ಆದವು. ದಳಪತಿ ವಿಜಯ್​ ಅವರ ಮುಂದಿನ ಚಿತ್ರಕ್ಕೆ ರಶ್ಮಿಕಾ ನಾಯಕಿ. ದುಲ್ಖರ್ ಸಲ್ಮಾನ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ವಿಜಯ್​ಗೆ ಜೋಡಿ ಆಗಿದ್ದಕ್ಕೆ ರಶ್ಮಿಕಾಗೆ ಎಷ್ಟು ಖುಷಿ ಅಂತ ಮಾತಲ್ಲಿ ಹೇಳೋಕಾಗಲ್ಲ; ಫೋಟೋ ನೋಡಿ ತಿಳಿಯಬೇಕಷ್ಟೇ 

  ತಮಗೆ ಸಿಕ್ಕ ದೊಡ್ಡ ಯಶಸ್ಸಿನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ರಶ್ಮಿಕಾ ಮಂದಣ್ಣ

Published On - 2:33 pm, Sun, 24 April 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ