- Kannada News Photo gallery Thalapathy 66: Rashmika Mandanna shares Thalapathy Vijay new movie muhurtha photos
ವಿಜಯ್ಗೆ ಜೋಡಿ ಆಗಿದ್ದಕ್ಕೆ ರಶ್ಮಿಕಾಗೆ ಎಷ್ಟು ಖುಷಿ ಅಂತ ಮಾತಲ್ಲಿ ಹೇಳೋಕಾಗಲ್ಲ; ಫೋಟೋ ನೋಡಿ ತಿಳಿಯಬೇಕಷ್ಟೇ
ದಳಪತಿ ವಿಜಯ್ ನಟನೆಯ ಹೊಸ ಚಿತ್ರದ ಮುಹೂರ್ತ ನೆರವೇರಿದೆ. ಈ ಸಿನಿಮಾಗೆ ರಶ್ಮಿಕಾ ಮಂದಣ್ಣ ನಾಯಕಿ. ಕೆಲವು ಫೋಟೋಗಳನ್ನು ಹಂಚಿಕೊಂಡು ಅವರು ಖುಷಿ ವ್ಯಕ್ತಪಡಿಸಿದ್ದಾರೆ.
Updated on: Apr 06, 2022 | 2:52 PM

Thalapathy 66: Rashmika Mandanna shares Thalapathy Vijay new movie muhurtha photos

Thalapathy 66: Rashmika Mandanna shares Thalapathy Vijay new movie muhurtha photos

ದಳಪತಿ ವಿಜಯ್ ಜೊತೆ ನಟಿಸುವ ಅವಕಾಶ ಸಿಕ್ಕಿರುವುದಕ್ಕೆ ಎಲ್ಲರೂ ರಶ್ಮಿಕಾಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರುತ್ತದೆ ಎಂದು ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ.

ಈ ಚಿತ್ರವನ್ನು ಸದ್ಯಕ್ಕೆ ‘ದಳಪತಿ 66’ ಎಂದು ಕರೆಯಲಾಗುತ್ತಿದೆ. ಶೀರ್ಷಿಕೆ ಇನ್ನೂ ರಿವೀಲ್ ಆಗಿಲ್ಲ. ಈ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗಲಿದೆ.

ಹಿಂದಿಯಲ್ಲಿ ‘ಮಿಷನ್ ಮಜ್ನು’ ಹಾಗೂ ‘ಗುಡ್ ಬೈ’ ಸಿನಿಮಾದ ಕೆಲಸಗಳಲ್ಲಿ ರಶ್ಮಿಕಾ ಮಂದಣ್ಣ ತೊಡಗಿಕೊಂಡಿದ್ದಾರೆ. ‘ಪುಷ್ಪ 2’ ಚಿತ್ರದ ಶೂಟಿಂಗ್ ಕೂಡ ಶೀಘ್ರವೇ ಆರಂಭ ಆಗಲಿದೆ. ದುಲ್ಖರ್ ಸಲ್ಮಾನ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ಅವರು ಕಾಶ್ಮೀರಿ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಹೀಗೆ ಅನೇಕ ಸಿನಿಮಾಗಳು ಅವರ ಕೈಯಲ್ಲಿವೆ.



















