Rashmika Mandanna: ತಮಗೆ ಸಿಕ್ಕ ದೊಡ್ಡ ಯಶಸ್ಸಿನ ಬಗ್ಗೆ ಹೆಮ್ಮೆಯಿಂದ ಮಾತನಾಡಿದ ರಶ್ಮಿಕಾ ಮಂದಣ್ಣ
ನಾನಾ ರೀತಿಯ ಪ್ರಾಜೆಕ್ಟ್ಗಳುರಶ್ಮಿಕಾ ಅವರನ್ನು ಹುಡುಕಿ ಬರುತ್ತಿವೆ. ಸಿನಿಮಾದಿಂದ ಸಿನಿಮಾಗೆ ಅವರು ಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಬಗ್ಗೆ ರಶ್ಮಿಕಾ ಮಾತನಾಡೋದು ಹೀಗೆ.
ರಶ್ಮಿಕಾ ಮಂದಣ್ಣ ಅವರು (Rashmika Mandanna) ಪ್ಯಾನ್ ಇಂಡಿಯಾ ನಟಿಯಾಗಿ ಮಿಂಚುತ್ತಿದ್ದಾರೆ. ಸ್ಯಾಂಡಲ್ವುಡ್ನಿಂದ ಬಣ್ಣದ ಬದುಕು ಆರಂಭಿಸಿದ ಅವರು ಈಗ ಬಾಲಿವುಡ್ ಕದವನ್ನು ತಟ್ಟಿದ್ದಾರೆ. ಅಲ್ಲು ಅರ್ಜುನ್, ಮಹೇಶ್ ಬಾಬು (Mahesh Babu), ಅಮಿತಾಭ್ ಬಚ್ಚನ್, ಸಿದ್ಧಾರ್ಥ್ ಮಲ್ಹೋತ್ರಾ, ರಣಬೀರ್ ಕಪೂರ್ ಜತೆ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ ಎಂದರೆ ಅದು ಸಣ್ಣ ವಿಚಾರ ಅಲ್ಲವೇ ಅಲ್ಲ. ತಮಗೆ ಸಿಕ್ಕ ಯಶಸ್ಸಿನ ಬಗ್ಗೆ ರಶ್ಮಿಕಾಗೆ ಸಾಕಷ್ಟು ಸಂತಸವಿದೆ. ಈ ಬಗ್ಗೆ ಅವರು ಅನೇಕ ಬಾರಿ ಮಾತನಾಡಿಕೊಂಡಿದ್ದಿದೆ. ಈ ವಿಚಾರದಲ್ಲಿ ರಶ್ಮಿಕಾ ಮತ್ತೆ ಸಂತಸ ಹಂಚಿಕೊಂಡಿದ್ದಾರೆ. ಅವರು ತಮ್ಮ ಯಶಸ್ಸನ್ನು ಸಂಭ್ರಮಿಸಿದ್ದಾರೆ.
ಚಿತ್ರರಂಗಕ್ಕೆ ಬಂದು 6 ವರ್ಷ ಕಳೆಯುವದುರಳೊಗೆ ರಶ್ಮಿಕಾ ಯಶಸ್ಸಿನ ಉತ್ತುಂಗಕ್ಕೆ ಏರಿದ್ದಾರೆ. ನಾನಾ ರೀತಿಯ ಪ್ರಾಜೆಕ್ಟ್ಗಳು ಅವರನ್ನು ಹುಡುಕಿ ಬರುತ್ತಿವೆ. ಸಿನಿಮಾದಿಂದ ಸಿನಿಮಾಗೆ ಅವರು ಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈ ಬಗ್ಗೆ ರಶ್ಮಿಕಾ ಮಾತನಾಡೋದು ಹೀಗೆ.
‘ಚಿತ್ರರಂಗ ನಿಜಕ್ಕೂ ಎಗ್ಸೈಟ್ಮೆಂಟ್ ನೀಡುತ್ತಿದೆ. ನಾನು ಹಲವು ಕ್ರೇಜಿ ಸಿನಿಮಾಗಳನ್ನು ಮಾಡುತ್ತಿದ್ದೇನೆ. ಎಲ್ಲಾ ಸಿನಿಮಾಗಳ ಪಾತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿದೆ. ಪ್ರತಿ ಸಿನಿಮಾದಲ್ಲಿ ಭಿನ್ನ ಪಾತ್ರಗಳನ್ನು ಮಾಡುವುದರಿಂದ, ಭಿನ್ನ ಜೀವನ ನಡೆಸಿದಂತೆ ಫೀಲ್ ಆಗುತ್ತದೆ. ಅದ್ಭುತ ನಟರು, ನಿರ್ದೇಶಕರು ಮತ್ತು ಇತರರಿಂದ ವಿಭಿನ್ನ ವಿಷಯಗಳನ್ನು ಕಲಿಯುತ್ತಿದ್ದೇನೆ’ ಎಂದಿದ್ದಾರೆ ರಶ್ಮಿಕಾ ಮಂದಣ್ಣ.
2016ರಲ್ಲಿ ತೆರೆಗೆ ಬಂದ ಕಿರಿಕ್ ಪಾರ್ಟಿ ಸಿನಿಮಾದಿಂದ ರಶ್ಮಿಕಾ ಮಂದಣ್ಣ ದೊಡ್ಡ ಯಶಸ್ಸು ಪಡೆದರು. ಆ ಬಳಿಕ ಅವರಿಗೆ ಟಾಲಿವುಡ್ನಿಂದ ಆಫರ್ಗಳು ಬಂದವು. ‘ಗೀತ ಗೋವಿಂದಂ’ ಸಿನಿಮಾದಿಂದ ಅವರಿಗೆ ಬೇಡಿಕೆ ಹೆಚ್ಚಿತು. ಸದ್ಯ ಹಲವು ಪ್ರಾಜೆಕ್ಟ್ಗಳು ಅವರ ಕೈಯಲ್ಲಿ ಇವೆ. ‘ಪುಷ್ಪ’ ಯಶಸ್ಸಿನಿಂದ ರಶ್ಮಿಕಾಗೆ ಬೇಡಿಕೆ ಹೆಚ್ಚಿದೆ. ‘ಪುಷ್ಪ 2’ ಚಿತ್ರದ ಕೆಲಸಗಳಲ್ಲಿ ಅವರು ಶೀಘ್ರವೇ ಪಾಲ್ಗೊಳ್ಳಲಿದ್ದಾರೆ. ಸಿದ್ದಾರ್ಥ್ ಮಲ್ಹೋತ್ರಾ ನಟನೆಯ ‘ಮಿಷನ್ ಮಜ್ನು’ ಚಿತ್ರ ಇನ್ನಷ್ಟೇ ತೆರೆಗೆ ಬರಬೇಕಿದೆ. ಅಮಿತಾಭ್ ಬಚ್ಚನ್ ಅಭಿನಯದ ‘ಗುಡ್ ಬೈ’ ಸಿನಿಮಾಗೂ ರಶ್ಮಿಕಾ ನಾಯಕಿ.
ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಬರ್ತ್ಡೇ ಆಚರಿಸಿಕೊಂಡಿದ್ದರು. ಈ ವೇಳೆ ಅವರ ಎರಡು ಹೊಸ ಸಿನಿಮಾಗಳು ಘೋಷಣೆ ಆದವು. ದಳಪತಿ ವಿಜಯ್ ಅವರ ಮುಂದಿನ ಚಿತ್ರಕ್ಕೆ ರಶ್ಮಿಕಾ ನಾಯಕಿ. ದುಲ್ಖರ್ ಸಲ್ಮಾನ್ ನಟಿಸುತ್ತಿರುವ ಹೊಸ ಸಿನಿಮಾದಲ್ಲಿ ರಶ್ಮಿಕಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ಹಿಜಾಬ್ ಧರಿಸಿ ಬಂದ ರಶ್ಮಿಕಾ ಮಂದಣ್ಣ; ಮುಸ್ಲಿಂ ಹುಡುಗಿ ಪಾತ್ರದಲ್ಲಿ ಕೊಡಗಿನ ಬೆಡಗಿ
ಹೊಸ ಗೆಟಪ್ನಲ್ಲಿ ರಶ್ಮಿಕಾ ಮಂದಣ್ಣ; ಕಾಶ್ಮೀರಿ ಮುಸ್ಲಿಂ ಹುಡುಗಿ ಪಾತ್ರದಲ್ಲಿ ಕಿರಿಕ್ ಬೆಡಗಿ
Published On - 6:41 am, Sat, 23 April 22