Puneeth Rajkumar: ಪುನೀತ್​ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ; ಸಮಾರಂಭದಲ್ಲಿ ಗದ್ಗದಿತರಾದ ಅಶ್ವಿನಿ

Basavashree Award | Ashwini Puneeth Rajkumar: ಮುರುಘಾಮಠದಿಂದ ಪುನೀತ್​ ರಾಜ್​ಕುಮಾರ್​ ಅವರಿಗೆ ಬಸವ ಜಯಂತಿಯ ದಿನವಾದ ಇಂದು ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವಶ್ರೀ ಪ್ರಶಸ್ತಿಯನ್ನು ಅಪ್ಪು ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಸ್ವೀಕರಿಸಿದರು.

Puneeth Rajkumar: ಪುನೀತ್​ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ; ಸಮಾರಂಭದಲ್ಲಿ ಗದ್ಗದಿತರಾದ ಅಶ್ವಿನಿ
ಪುನೀತ್ ರಾಜ್​ಕುಮಾರ್ (ಎಡ ಚಿತ್ರ), ‘ಬಸವಶ್ರೀ’ ಪ್ರಶಸ್ತಿ ಸ್ವೀಕರಿಸಿದ ಅಶ್ವಿನಿ ಪುನೀತ್ (ಬಲ ಚಿತ್ರ)
Follow us
TV9 Web
| Updated By: shivaprasad.hs

Updated on:May 03, 2022 | 2:29 PM

ಚಿತ್ರದುರ್ಗ: ಮುರುಘಾಮಠದಿಂದ ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರಿಗೆ ಬಸವ ಜಯಂತಿಯ ದಿನವಾದ ಇಂದು (ಮೇ.3) ಮರಣೋತ್ತರ ಬಸವಶ್ರೀ (Basavashree Award) ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಸವಶ್ರೀ ಪ್ರಶಸ್ತಿಯನ್ನು ಅಪ್ಪು ಪರವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಸ್ವೀಕರಿಸಿದರು. ಈ ವೇಳೆ ಅಶ್ವಿನಿಯವರು ಭಾವುಕರಾಗಿ ಗದ್ಗದಿತರಾದರು. ಡಾ.ಶಿವಮೂರ್ತಿ ಮುರುಘಾ ಶರಣರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಶಸ್ತಿಯು 5 ಲಕ್ಷ ರೂ ನಗದು, ಪ್ರಶಸ್ತಿ ಫಲಕ ಒಳಗೊಂಡಿದೆ. ವಚನ ಗಾಯನದೊಂದಿಗೆ ಬಸವಶ್ರೀ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಅಪ್ಪು ಅಭಿನಯದ ಸಿನಿಮಾ ಹಾಡಿಗೆ ಮಕ್ಕಳು ವೇದಿಕೆಯಲ್ಲಿ ನೃತ್ಯ ಮಾಡಿದರು.

ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ‘‘ಡಾ.ರಾಜಕುಮಾರ್ ಮುದ್ದಿನ ಮಗ ಪುನೀತ್‌ರಾಜಕುಮಾರ್. ಅಭಿನಯದ ಜತೆ ಹಾಡುಗಾರಿಕೆ ಮೈಗೂಡಿಸಿಕೊಂಡಿದ್ದರು. ಅಭಿನಯ, ಹಾಡುಗಾರಿಕೆಯಲ್ಲಿ ಪುನೀತರು ಪ್ರಣೀತರು. ತಂದೆಯ ಮಾರ್ಗದರ್ಶನ ಆಂತರ್ಯದಲ್ಲಿಟ್ಟುಕೊಂಡು ಆಕಾಶದ ಎತ್ತರಕ್ಕೆ ಬೆಳೆದರು. ಕನ್ನಡ ಚಲನಚಿತ್ರ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಪುನೀತ್​ರಂತ ಪ್ರತಿಭೆ ಪಡೆದ ನಾವು ನೀವು ಧನ್ಯರು’’ ಎಂದು ಹೇಳಿದರು. ಮುರುಘಾ ಶರಣರ ಕೋರಿಕೆ‌ ಮೇರೆಗೆ ಕಾರ್ಯಕ್ರಮದಲ್ಲಿ ಮಾತನಾಡಿದ ಅಶ್ವಿನಿ, ಪುನೀತ್​ಗೆ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿದ್ದಕ್ಕೆ ಮುರುಘಾಮಠಕ್ಕೆ ಧನ್ಯವಾದ ಸಲ್ಲಿಸಿದರು.

ಪ್ರಶಸ್ತಿ ಸ್ವೀಕಾರದ ವೇಳೆ ಗದ್ಗದಿತರಾದ ಅಶ್ವಿನಿ ಪುನೀತ್ ರಾಜ್​ಕುಮಾರ್:

ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ‘‘ಈ ದಿನ ಚಿತ್ರದುರ್ಗದ ಇತಿಹಾಸದಲ್ಲಿ ಸ್ವರ್ಣಾಕ್ಷರದಿ ಬರೆದಿಡುವ ದಿನ. ಪುನೀತ್ ಎಂಬ ಹೆಸರಿನಲ್ಲಿ ಎಂಥ ಶಕ್ತಿಯಿದೆ. ಇಷ್ಟೆಲ್ಲಾ ಜನ ಸೇರಿದ್ದೀರಿ ಎಂದರೆ ಪುನೀತ್ ಶಕ್ತಿ ಕಾರಣ. ಹುಟ್ಟು ಆಕಸ್ಮಿಕ, ಸಾವು ಶಾಶ್ವತ ಆದರೆ ಸಾಧನೆ ಮುಖ್ಯ. ಎಡಗೈಲಿ ಕೊಟ್ಟಿದ್ದು ಬಲಗೈಗೆ ಗೊತ್ತಿಲ್ಲದಂತೆ ಪುನೀತ್ ಕಾರ್ಯ ನಡೆಸಿದ್ದರು. ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ ಪುನೀತ್‌ ಕೇಳಿಸಿಕೊಳ್ಳುತ್ತಿದ್ದಾರೆ. ಪುನೀತ್​ಗೆ ಬಸವಶ್ರೀ ಪ್ರಶಸ್ತಿಯಿಂದ ಪ್ರಶಸ್ತಿಯ ಗೌರವ ಹೆಚ್ಚಿದೆ’’ ಎಂದರು.

ಪುನೀತ್ ಜತೆಗಿನ ಒಡನಾಟ ಸ್ಮರಿಸಿದ ಸಚಿವರ ಬಿಸಿ ಪಾಟೀಲ್, ‘‘ನಮ್ಮಮನೆಗೆ ಒಂದಿನ ಪುನೀತ್ ಊಟಕ್ಕೆ ಬಂದಿದ್ದರು. ಆ ಮೂರು ತಾಸು ನಾನು ಜೀವನದಲ್ಲಿ‌ ಮರೆಯಲು ಆಗದು. ಪುನೀತ್ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ಕರುಣಿಸಲಿ. ನನ್ನ ಉಸ್ತುವಾರಿ‌ ಜಿಲ್ಲೆಯಲ್ಲಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸ್ವ ಕ್ಷೇತ್ರದಲ್ಲಿ ಎಷ್ಟೇ ಕಾರ್ಯಕ್ರಮ ಇದ್ದರೂ ಭಾಗಿಯಾಗಲು ನಿರ್ಧರಿಸಿದೆ. ಕಾರ್ಯಕ್ರಮ ತಪ್ಪಿಸಿಕೊಂಡರೆ ಸ್ನೇಹಿತ ಪುನೀತ್​ಗೆ ದ್ರೋಹ ಎಂದು‌ ಭಾವಿಸಿ ಬಂದಿದ್ದೇನೆ. ಪುನೀತ್ ಸಾವಿನ ಸುದ್ದಿ ಕೇಳಿದಾಕ್ಷಣ ನಂಬಲು ಆಗಿರಲಿಲ್ಲ. ಈಗಲೂ ಸಹ ನಮಗೆ ಪುನೀತ್ ಇಲ್ಲ ಎಂಬುದು ನಂಬಲು ಆಗುತ್ತಿಲ್ಲ. ಹಳ್ಳಿ ಹಳ್ಳಿಗಳಲ್ಲಿ ಇಂದಿಗೂ ಪುನೀತ್ ಫೋಟೋ ಕಾಣಬಹುದು. ಬಸವ ಜಯಂತಿ ದಿನ ಬಸವಣ್ಣನವರ ಜತೆಗೆ ಪುನೀತ್ ಫೋಟೋಗಳಿವೆ. ಪುನೀತ್ ಅಷ್ಟೊಂದು ಜನಾನುರಾಗಿ ಆಗಿದ್ದರು’’ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಡಿಸಿ ಕವಿತಾ ಮನ್ನಿಕೇರಿ, ಎಸ್​ಪಿ ಕೆ.ಪರಶುರಾಮ್, ಜಿ.ಪಂ. ಸಿಇಒ ಡಾ.ನಂದಿನಿದೇವಿ ಉಪಸ್ಥಿತರಿದ್ದರು. ಶಿವಶರಣ ಮಾದಾರ ಚನ್ನಯ್ಯ ಮಠದ ಬಸವಮೂರ್ತಿ ಮಾದಾರ ಚನ್ನಯ್ಯಶ್ರೀ ಉಪಸ್ಥಿತರಿದ್ದರು.

ಇನ್ನಷ್ಟು ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Dr Rajkumar: ‘ನಿನದೇ ನೆನಪು ದಿನವೂ ಮನದಲ್ಲಿ..’: ಡಾ. ರಾಜ್​ ಜನ್ಮದಿನಕ್ಕೆ ಪುನೀತ್​ ವಿಶ್​ ಮಾಡಿದ್ದ ವಿಡಿಯೋ ವೈರಲ್​

ಬಾಲಿವುಡ್​ನಲ್ಲಿ ಈ ಸಾಧನೆ ಮಾಡಲು ‘ಕೆಜಿಎಫ್ 2’ಗೆ ಇನ್ನು ಕೆಲವೇ ಮೆಟ್ಟಿಲು ಬಾಕಿ; ಇಲ್ಲಿದೆ ವಿವರ

Published On - 1:29 pm, Tue, 3 May 22

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ