MET Gala 2022: ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಸೆಲೆಬ್ರಿಟಿಗಳು; ನಟಾಶಾ ಪೂನಾವಾಲಾ ಲುಕ್ ಹೇಗಿದೆ ನೋಡಿ
ಮೆಟ್ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್ನಲ್ಲಿ ನಡೆಯುವ ಒಂದು ಫ್ಯಾಷನ್ ಹಬ್ಬ. ಈ ಸಮಾರಂಭದಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ.
ಕೊವಿಡ್ (Covid) ಕಾರಣದಿಂದ ಕಳೆದ ಎರಡು ವರ್ಷಗಳಿಂದ ಚಿತ್ರರಂಗ ಸೊರಗಿತ್ತು. ಸಿನಿಮಾ ರಂಗ ಮಾತ್ರವಲ್ಲದೆ, ಇಲ್ಲಿ ನಡೆಯುವ ಅವಾರ್ಡ್ ಫಂಕ್ಷನ್ ಕೂಡ ಡಲ್ ಆಗಿತ್ತು. ಈಗ ಕೊವಿಡ್ ಕಡಿಮೆ ಆಗಿದ್ದು, ಮತ್ತೆ ಎಲ್ಲವೂ ಸಮ ಸ್ಥಿತಿಗೆ ಮರಳುತ್ತಿದೆ. ಅದೇ ರೀತಿ 2022ನೇ ಸಾಲಿನ ಮೆಟ್ ಗಲಾ ಕಾರ್ಯಕ್ರಮ (MET Gala 2022) ಅದ್ದೂರಿಯಾಗಿ ನೆರವೇರಿದೆ. ಈ ಸುಂದರ ಸಂಜೆಯಲ್ಲಿ ಬ್ಲೇಕ್ ಲೈವ್ಲಿ ಹಾಗೂ ಅವರ ಪತಿ ರಯಾನ್ ರೆನೋಲ್ಡ್ಸ್, ಕಿಮ್ ಕರ್ದಾಶಿಯಾನ್ ಸೇರಿ ಅನೇಕರು ಪಾಲ್ಗೊಂಡಿದ್ದರು. ಭಾರತದ ಉದ್ಯಮಿ ನಟಾಶಾ ಪೂನಾವಾಲಾ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು.
ಮೆಟ್ ಗಾಲಾ ಎಂಬುದು ಪ್ರತಿ ವರ್ಷ ನ್ಯೂಯಾರ್ಕ್ನಲ್ಲಿ ನಡೆಯುವ ಒಂದು ಫ್ಯಾಷನ್ ಹಬ್ಬ. ಈ ಸಮಾರಂಭದಲ್ಲಿ ಜಗತ್ತಿನ ಹಲವು ಖ್ಯಾತ ಸೆಲೆಬ್ರಿಟಿಗಳು ಭಾಗವಹಿಸುತ್ತಾರೆ. ಈ ಬಾರಿ ಅದ್ದೂರಿಯಾಗಿಯೇ ಮೆಟ್ ಗಾಲಾ ಆಯೋಜನೆಗೊಂಡಿದೆ. ಈ ಉತ್ಸವದಲ್ಲಿ ಸೆಲೆಬ್ರಿಟಿಗಳು ಧರಿಸುವ ಕಾಸ್ಟ್ಯೂಮ್ಗಳು ಸಖತ್ ಗಮನ ಸೆಳೆಯುತ್ತವೆ. ಇಲ್ಲಿ ಚಿತ್ರ ವಿಚಿತ್ರ ಬಟ್ಟೆಗಳನ್ನು ಧರಿಸಿ ಸೆಲೆಬ್ರಿಟಿಗಳು ಹೆಜ್ಜೆ ಹಾಕುತ್ತಾರೆ.
ನಟಾಶಾ ಅವರ ಉಡುಗೆ ತುಂಬಾನೇ ಗಮನ ಸೆಳೆದಿದೆ. ಅವರು ವಿಚಿತ್ರ ಬಟ್ಟೆಯನ್ನು ತೊಟ್ಟು ಕಾಣಿಸಿಕೊಂಡಿದ್ದಾರೆ. ಅವರ ದೇಹ ಹಾಗೂ ಬಟ್ಟೆ ಪೂರ್ತಿಯಾಗಿ ಚಿನ್ನದ ಬಣ್ಣದ ರೂಪದಲ್ಲಿದೆ. ಅವರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ನಟಾಶಾ ಅವರು ಭಾರತದ ಮಹಿಳಾ ಉದ್ಯಮಿ. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಅದಾರ್ ಪೂನಾವಾಲಾ ಅವರ ಪತ್ನಿ ಈ ನಟಾಶಾ. ಟ್ವಿಟರ್ನ ಹೊಸ ಮಾಲೀಕ ಎಲಾನ್ ಮಸ್ಕ್ ಕೂಡ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಭಾಗಿ ಆದರು. ಅವರ ತಾಯಿ ಮೇಯ್ ಮಸ್ಕ್ ಜತೆ ಕಾಣಿಸಿಕೊಂಡರು. ಈ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.
‘ಮೆಟ್ ಗಾಲಾ 2021’ ಕಾರ್ಯಕ್ರಮದಲ್ಲಿ ಕಿಮ್ ಕರ್ದಾಶಿಯನ್ ಕಾಣಿಸಿಕೊಂಡ ರೀತಿಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಅಂಗಾಲಿನಿಂದ ನೆತ್ತಿಯವರೆಗೆ ಕಪ್ಪು ಬಣ್ಣದ ದಿರಿಸಿನಲ್ಲಿ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಕಿಮ್ ಕರ್ದಾಶಿಯನ್ ಎಂಟ್ರಿ ನೀಡಿದ್ದರು. ಈ ವಿಚಿತ್ರ ವೇಷದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಾರಿ ಅಷ್ಟು ಚಿತ್ರವಿಚಿತ್ರವಾಗಿ ಯಾರೂ ಬಟ್ಟೆ ಧರಿಸಿಲ್ಲ. ಕೊವಿಡ್ ಕಾರಣದಿಂದ 2020ರ ಗಲಾ ಕಾರ್ಯಕ್ರಮ ರದ್ದಾಗಿತ್ತು.
ಇದನ್ನೂ ಓದಿ: Met Gala 2021: ಸದಾ ಮೈಮಾಟದಿಂದ ಸೆಳೆಯುತ್ತಿದ್ದ ಸುಂದರಿ ಕಿಮ್ ಇಂದು ಹೀಗೇಕೆ ಆದ್ರು? ಇದು ಸಿನಿಮಾ ಅಲ್ಲ ರಿಯಲ್
Met Gala 2021: 40 ಕೆಜಿ ತೂಕದ ಡ್ರೆಸ್ ತೊಟ್ಟ ಸಿಮೋನ್ ಬೈಲ್ಸ್; ಮೆಟ್ ಗಾಲಾದಲ್ಲಿ ಮಿರಿಮಿರಿ ಮಿಂಚಿದ ಅಥ್ಲೀಟ್
Published On - 11:39 am, Tue, 3 May 22