AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಪರೂಪದ ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ; ಇವರಿಗೆ ಸರಿಸಾಟಿ ಯಾರು?

2018ರಲ್ಲಿ ತೆರೆಗೆ ಬಂದ ‘ಗೀತ ಗೋವಿಂದಂ' ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜತೆ ತೆರೆ ಹಂಚಿಕೊಂಡರು. ಈ ಸಿನಿಮಾ ಹಿಟ್ ಆಗಿದ್ದರಿಂದ ರಶ್ಮಿಕಾ ಖ್ಯಾತಿ ಸಾಕಷ್ಟು ಹೆಚ್ಚಾಯಿತು.

ಅಪರೂಪದ ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ; ಇವರಿಗೆ ಸರಿಸಾಟಿ ಯಾರು?
ರಶ್ಮಿಕಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:May 02, 2022 | 5:04 PM

ನಟಿ ರಶ್ಮಿಕಾ ಮಂದಣ್ಣ ಅವರು (Rashmika Mandanna) ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಕನ್ನಡದಿಂದ ಬಣ್ಣದ ಬದುಕು ಆರಂಭಿಸಿದ ಅವರು, ತೆಲುಗು, ತಮಿಳಿನಲ್ಲಿ ಹೆಸರು ಮಾಡಿದ್ದಾರೆ. ಬಾಲಿವುಡ್ (Bollywood) ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಈ ಚಿತ್ರಗಳು ಇನ್ನಷ್ಟೇ ತೆರೆಗೆ ಬರಬೇಕಿದೆ. ಕನ್ನಡದ ನಟಿಯಾಗಿ ರಶ್ಮಿಕಾ ಮಂದಣ್ಣ ಅವರು ಅಪರೂಪದ ಸಾಧನೆ ಒಂದನ್ನು ಮಾಡಿದ್ದಾರೆ. ಈ ಸಾಧನೆಯನ್ನು ಸ್ಯಾಂಡಲ್​ವುಡ್​ನ (Sandalwood) ಯಾವ ನಟಿಯೂ ಮಾಡಿಲ್ಲ ಅನ್ನೋದು ವಿಶೇಷ. ಹಾಗಾದರೆ, ಅವರು ಮಾಡಿದ ಸಾಧನೆ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಕ್ಷಿತ್ ಶೆಟ್ಟಿ ನಟನೆಯ ‘ಕಿರಿಕ್​ ಪಾರ್ಟಿ’ ಮೂಲಕ ರಶ್ಮಿಕಾ ಮಂದಣ್ಣ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಅವರು ಪುನೀತ್ ರಾಜ್​ಕುಮಾರ್ (ಅಂಜನಿ ಪುತ್ರ), ಗಣೇಶ್​ (ಚಮಕ್) ಜತೆ ತೆರೆ ಹಂಚಿಕೊಂಡರು. ಆ ಬಳಿಕ ‘ಚಲೋ’ ಚಿತ್ರದ ಮೂಲಕ ತೆಲುಗಿನಲ್ಲಿ ಅವರು ಖಾತೆ ತೆಗೆದರು. 2018ರಲ್ಲಿ ತೆರೆಗೆ ಬಂದ ‘ಗೀತ ಗೋವಿಂದಂ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಜತೆ ತೆರೆ ಹಂಚಿಕೊಂಡರು. ಈ ಸಿನಿಮಾ ಹಿಟ್ ಆಗಿದ್ದರಿಂದ ರಶ್ಮಿಕಾ ಖ್ಯಾತಿ ಸಾಕಷ್ಟು ಹೆಚ್ಚಾಯಿತು.

ಅಕ್ಕಿನೇನಿ ನಾಗಾರ್ಜುನ ಹಾಗೂ ನಾನಿ ನಟನೆಯ ‘ದೇವದಾಸ್​’ ಸಿನಿಮಾದಲ್ಲಿ ರಶ್ಮಿಕಾ ನಟಿಸಿದರು. ‘ಭಿಷ್ಮ’ ಸಿನಿಮಾದಲ್ಲಿ ನಿತಿನ್ ಜತೆ ನಟಿಸಿದರು. ಕನ್ನಡದ ಧ್ರುವ ಸರ್ಜಾ (ಪೊಗರು), ತಮಿಳಲ್ಲಿ ಕಾರ್ತಿ (ಸುಲ್ತಾನ್) ತೆಲುಗಿನಲ್ಲಿ ಮಹೇಶ್ ಬಾಬು (ಸರಿಲೇರು ನೀಕೆವ್ವರು), ಅಲ್ಲು ಅರ್ಜುನ್ (ಪುಷ್ಪ) ಜತೆ ರಶ್ಮಿಕಾ ನಟಿಸಿದರು. ಇದಾದ ಬಳಿಕ ಬಾಲಿವುಡ್​ನಲ್ಲಿ ರಶ್ಮಿಕಾಗೆ ಬೇಡಿಕೆ ಹೆಚ್ಚಿತು.

ಸಿದ್ದಾರ್ಥ್​ ಮಲ್ಹೋತ್ರಾ (ಮಿಷನ್​ ಮಜ್ನು) ಹಾಗೂ ಅಮಿತಾಭ್​ ಬಚ್ಚನ್​ (ಗುಡ್​ಬೈ) ಚಿತ್ರಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಇವರ ಜತೆಗಿನ ಸಿನಿಮಾ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ರಿಲೀಸ್​ಗೆ ರೆಡಿ ಆಗಿದೆ. ಇದಲ್ಲದೆ, ಮಲಯಾಳಂ ನಟ ದುಲ್ಖರ್ ಸಲ್ಮಾನ್​, ತಮಿಳಿನ ದಳಪತಿ ವಿಜಯ್ ಚಿತ್ರಕ್ಕೂ ರಶ್ಮಿಕಾ ನಾಯಕಿ. ವೃತ್ತಿ ಬದುಕಿನಲ್ಲಿ ಕನ್ನಡದ ನಟಿಯೊಬ್ಬರು ಇಷ್ಟೊಂದು ಸ್ಟಾರ್ ನಟರ ಜತೆ ತೆರೆ ಹಂಚಿಕೊಂಡಿದ್ದು ಇದೇ ಮೊದಲು ಎನ್ನಬಹುದು. ಈ ವಿಚಾರ ಫ್ಯಾನ್ಸ್​ಗೆ ಖುಷಿ ನೀಡಿದೆ. ‘ಅವರಿಗೆ ಸರಿಸಾಟಿ ಯಾರೂ ಇಲ್ಲ’ ಎನ್ನುವ ಮಾತು ಅಭಿಮಾನಿಗಳ ಕಡೆಯಿಂದ ಕೇಳಿ ಬರುತ್ತಿದೆ.

ಇದನ್ನೂ ಓದಿ: ಶೀಘ್ರವೇ ಆರಂಭಗೊಳ್ಳಲಿದೆ ‘ಕಾಫಿ ವಿತ್ ಕರಣ್’ ಶೋ; ಅತಿಥಿಯಾಗಿ ಬರಲಿದ್ದಾರೆ ರಶ್ಮಿಕಾ ಮಂದಣ್ಣ

Rashmika Mandanna: ರಶ್ಮಿಕಾ ಮಂದಣ್ಣ ರಿಜೆಕ್ಟ್ ಮಾಡಿದ್ದ ಈ ಸಿನಿಮಾಗಳು ಸೋತಿದ್ದು ಹಾಗೀಗಲ್ಲ

Published On - 3:20 pm, Mon, 2 May 22