AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Met Gala 2021: 40 ಕೆಜಿ ತೂಕದ ಡ್ರೆಸ್​ ತೊಟ್ಟ ಸಿಮೋನ್​ ಬೈಲ್ಸ್​; ಮೆಟ್​ ಗಾಲಾದಲ್ಲಿ ಮಿರಿಮಿರಿ ಮಿಂಚಿದ ಅಥ್ಲೀಟ್​

ಫ್ಯಾಷನ್​ ಪ್ರಿಯರ ಕಣ್ಮನ ಸೆಳೆಯುವಂತಹ ಗೌನ್​ ಧರಿಸಿ ಸಿಮೋನ್​ ಬೈಲ್ಸ್​ ಅವರು ‘ಮೆಟ್​ ಗಾಲಾ 2021’ ವೇದಿಕೆಗೆ ಎಂಟ್ರಿ ನೀಡಿದರು. ಇದರ ತೂಕ ಬರೋಬ್ಬರಿ 88 ಪೌಂಡ್​. ಅಂದರೆ ಸುಮಾರು 40 ಕೆಜಿ!

Met Gala 2021: 40 ಕೆಜಿ ತೂಕದ ಡ್ರೆಸ್​ ತೊಟ್ಟ ಸಿಮೋನ್​ ಬೈಲ್ಸ್​; ಮೆಟ್​ ಗಾಲಾದಲ್ಲಿ ಮಿರಿಮಿರಿ ಮಿಂಚಿದ ಅಥ್ಲೀಟ್​
ಸಿಮೋನ್ ಬೈಲ್ಸ್
TV9 Web
| Edited By: |

Updated on:Sep 14, 2021 | 1:01 PM

Share

ಪ್ರತಿ ವರ್ಷದಂತೆ ಈ ವರ್ಷ ಕೂಡ ನ್ಯೂಯಾರ್ಕ್​ನಲ್ಲಿ ಅದ್ದೂರಿಯಾಗಿ ಮೆಟ್​ ಗಾಲಾ ಕಾರ್ಯಕ್ರಮ ನಡೆಯುತ್ತಿದೆ. ಫ್ಯಾಷನ್​ ಜಗತ್ತಿನಲ್ಲಿ ದೊಡ್ಡ ಹಬ್ಬವೆಂದೇ ಪರಿಗಣಿಸಲ್ಪಡುವ ಈ ಸಮಾರಂಭದಲ್ಲಿ ವಿಶ್ವದ ಅನೇಕ ಸೆಲೆಬ್ರಿಟಿಗಳು ಭಾಗಿ ಆಗುತ್ತವೆ. ಹಲವು ಪ್ರತಿಷ್ಠಿತ ಬ್ರ್ಯಾಂಡ್​ಗಳು ತಮ್ಮ ರಾಯಭಾರಿಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸುತ್ತವೆ. ಇದೇ ಮೊದಲ ಬಾರಿಗೆ ಅಮೆರಿಕದ ಅಥ್ಲೀಟ್​ ಸಿಮೋನ್​ ಬೈಲ್ಸ್​ ಅವರು ಮೆಟ್​ ಗಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ವೇಳೆ ಅವರು ಧರಿಸಿದ ಕಾಸ್ಟ್ಯೂಮ್​ ಎಲ್ಲರ ಗಮನ ಸೆಳೆದಿದೆ. ಅಭಿಮಾನಿಗಳ ವಲಯದಲ್ಲಿ ಈ ಡ್ರೆಸ್​ ಬಗ್ಗೆಯೇ ಚರ್ಚೆ ಆಗುತ್ತಿದೆ.

ಫ್ಯಾಷನ್​ ಪ್ರಿಯರ ಕಣ್ಮನ ಸೆಳೆಯುವಂತಹ ಗೌನ್​ ಧರಿಸಿ ಸಿಮೋನ್​ ಬೈಲ್ಸ್​ ಅವರು ‘ಮೆಟ್​ ಗಾಲಾ 2021’ ವೇದಿಕೆಗೆ ಎಂಟ್ರಿ ನೀಡಿದರು. ಹಾಗಾದರೆ ಈ ಗೌನ್ ವಿಶೇಷ ಏನು? ಇದರ ತೂಕ ಬರೋಬ್ಬರಿ 88 ಪೌಂಡ್​. ಅಂದರೆ ಸುಮಾರು 40 ಕೆಜಿ! ಇದೇ ಮೊದಲ ಬಾರಿಗೆ ಈ ಬೃಹತ್​ ಫ್ಯಾಷನ್​ ಹಬ್ಬದಲ್ಲಿ ಪಾಲ್ಗೊಳ್ಳುತ್ತಿರುವ ಸೂಪರ್​ ಸ್ಟಾರ್​ ಅಥ್ಲೀಟ್​ ಸಿಮೋನ್​ ಬೈಲ್ಸ್​ಗಾಗಿ ಈ ವಿಶೇಷ ಗೌನ್​ ತಯಾರಿಸಲಾಗಿದೆ.

ಸದ್ಯ ಈ ಫೋಟೋಗಳು ಎಲ್ಲ ಕಡೆ ವೈರಲ್​ ಆಗುತ್ತಿವೆ. ‘ಇಲ್ಲಿ ನನ್ನ ಡ್ರೆಸ್​ಗಿಂತಲೂ ಚೆನ್ನಾಗಿ ಬೇರೆ ಯಾರ ಡ್ರೆಸ್​ ಕೂಡ ಇಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಹುಡುಗಿಯರಿಗೆ ನಾನೊಂದು ಮಾತು ಹೇಳುತ್ತೇನೆ. ನೀವು ಸ್ಪೋರ್ಟ್ಸ್​ನಲ್ಲಿ ಟಫ್​ ಆಗಿರಬಹುದು. ಆದರೆ ಆ ಒಂದು ಕಂಫರ್ಟ್​ ಝೋನ್​ನಿಂದ ಹೊರಬಂದು ಈ ರೀತಿಯ ಸುಂದರವಾದ ಗೌನ್​ ಕೂಡ ಧರಿಸಬಹುದು. ಇದು ತುಂಬ ಸ್ಫೂರ್ತಿ ನೀಡುವಂತಿದೆ’ ಎಂದು ಸಿಮೋನ್​ ಬೈಲ್ಸ್​ ಹೇಳಿದ್ದಾರೆ.

ಗಮನ ಸೆಳೆದ ಕಿಮ್​ ಕರ್ದಾಶಿಯನ್​:

ಖ್ಯಾತ ಮಾಡೆಲ್​ ಕಿಮ್​ ಕರ್ದಾಶಿಯನ್​ ಹಲವು ಕಾರಣಗಳಿಂದಾಗಿ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅಮೆರಿಕದ ಈ ಸುಂದರಿ ಸದಾ ಕಾಲ ಹಾಟ್​ ಅವತಾರದಲ್ಲೇ ಅಭಿಮಾನಿಗಳನ್ನು ಎದುರುಕೊಳ್ಳುತ್ತಾರೆ. ಮೈ ಮಾಟ ಪ್ರದರ್ಶಿಸುವಂತಹ ಉಡುಗೆಗಳನ್ನೇ ಧರಿಸಿ ಅವರು ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುತ್ತಾರೆ. ಆದರೆ ಈಗ ಅವರು​ ‘ಮೆಟ್​ ಗಾಲಾ 2021’ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ರೀತಿಗೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಅಂಗಾಲಿನಿಂದ ನೆತ್ತಿಯವರೆಗೆ ಕಪ್ಪು ಬಣ್ಣದ ದಿರಿಸಿನಲ್ಲಿ ಸಂಪೂರ್ಣ ದೇಹವನ್ನು ಮುಚ್ಚಿಕೊಂಡು ಕಿಮ್​ ಕರ್ದಾಶಿಯನ್​ ಎಂಟ್ರಿ ನೀಡಿದ್ದಾರೆ. ಈ ವಿಚಿತ್ರ ವೇಷದ ಫೋಟೋ ಈಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅಂದಹಾಗೆ, ಕಿಮ್​ ಅವರು ಈ ರೀತಿ ಅಚ್ಚರಿ ಮೂಡಿಸಿದ್ದು ಇದೇ ಮೊದಲೇನಲ್ಲ. ಕಳೆದ ತಿಂಗಳು ಕೂಡ ಒಂದು ಕಾರ್ಯಕ್ರಮಕ್ಕೆ ಅವರು ಇದೇ ಮಾದರಿಯ ಬಟ್ಟೆ ಧರಿಸಿ ಬಂದಿದ್ದರು.

ಇದನ್ನೂ ಓದಿ:

ಕಸದ ಚೀಲವನ್ನೇ ಕಾಸ್ಟ್ಯೂಮ್​ ಮಾಡಿಕೊಂಡಿದ್ದ ನಟಿ ಊರ್ಫಿ ಬಿಗ್​ ಬಾಸ್​ನಿಂದ ಔಟ್​; ನಿಲ್ಲದ ಕಣ್ಣೀರು

ಲಕ್ಷಾಂತರ ರೂ. ಮೌಲ್ಯದ ಕಾಸ್ಟ್ಯೂಮ್​ಗಳು ಶೂಟಿಂಗ್​ ಮುಗಿದ ಬಳಿಕ ಏನಾಗುತ್ತವೆ? ಇಲ್ಲಿದೆ ಇಂಟರೆಸ್ಟಿಂಗ್ ವಿವರ!

Published On - 12:28 pm, Tue, 14 September 21

Follow Us
TV9 Web
TV9 Web

TV9 Kannada

Read More
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!
ಗೋಕಳ್ಳರು ಕರುವನ್ನು ಎಳೆದೊಯ್ಯುವಾಗ ಹಿಂದೆ ಓಡಿದ ತಾಯಿ!