ಬಾಲಿವುಡ್​ನಲ್ಲಿ ಈ ಸಾಧನೆ ಮಾಡಲು ‘ಕೆಜಿಎಫ್ 2’ಗೆ ಇನ್ನು ಕೆಲವೇ ಮೆಟ್ಟಿಲು ಬಾಕಿ; ಇಲ್ಲಿದೆ ವಿವರ

‘ಕೆಜಿಎಫ್ 2’ ಚಿತ್ರದ ಸೋಮವಾರದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಯಶ್ ಚಿತ್ರಕ್ಕೆ ಇದು ಮೂರನೇ ಸೋಮವಾರ. ಕಳೆದ ಎರಡು ಸೋಮವಾರದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದ್ದ ಈ ಸಿನಿಮಾ ಈ ವಾರವು ಉತ್ತೀರ್ಣವಾಗಿದೆ.

ಬಾಲಿವುಡ್​ನಲ್ಲಿ ಈ ಸಾಧನೆ ಮಾಡಲು ‘ಕೆಜಿಎಫ್ 2’ಗೆ ಇನ್ನು ಕೆಲವೇ ಮೆಟ್ಟಿಲು ಬಾಕಿ; ಇಲ್ಲಿದೆ ವಿವರ
ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:May 03, 2022 | 1:07 PM

‘ಕೆಜಿಎಫ್: ಚಾಪ್ಟರ್ 2’ ಸಿನಿಮಾ (KGF Chapter 2) ಬರೆದ ದಾಖಲೆಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಈ ಚಿತ್ರ ಬಾಲಿವುಡ್​ನಲ್ಲಿ ನಿತ್ಯ ಹೊಸ ಹೊಸ ಮೈಲಿಗಲ್ಲನ್ನು ಸೃಷ್ಟಿ ಮಾಡುತ್ತಾ ಮುಂದೆ ಸಾಗುತ್ತಿದೆ. ಈ ಚಿತ್ರ ಬಾಲಿವುಡ್  (Bollywood) ಬಾಕ್ಸ್ ಆಫೀಸ್​ನಿಂದ 373 ಕೋಟಿ ರೂಪಾಯಿ ಗಳಿಸಿದೆ. ಇಂದು (ಮೇ 3) ದೇಶಾದ್ಯಂತ ಈದ್ ಹಬ್ಬದ ಸಂಭ್ರಮಾಚರಣೆ ಜೋರಾಗಿದೆ. ಈ ಹಬ್ಬ ಮುಸ್ಲಿಮರ ಪಾಲಿಗೆ ವಿಶೇಷವಾಗಿದೆ. ಈ ದಿನ ಸಿನಿಮಾ ನೋಡೋಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಚಿತ್ರಮಂದಿರದತ್ತ ತೆರಳಲಿದ್ದಾರೆ. ಹೀಗಾಗಿ, ‘ಕೆಜಿಎಫ್ 2’ ಹೆಚ್ಚಿನ ಸಂಖ್ಯೆಯಲ್ಲಿ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ.

‘ಕೆಜಿಎಫ್ 2’ ಚಿತ್ರದ ಸೋಮವಾರದ ಕಲೆಕ್ಷನ್ ರಿಪೋರ್ಟ್ ಹೊರಬಿದ್ದಿದೆ. ಯಶ್ ಚಿತ್ರಕ್ಕೆ ಇದು ಮೂರನೇ ಸೋಮವಾರ. ಕಳೆದ ಎರಡು ಸೋಮವಾರದ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದ್ದ ಈ ಸಿನಿಮಾ ಈ ವಾರವು ಉತ್ತೀರ್ಣವಾಗಿದೆ. ಈ ಸೋಮವಾರ ಚಿತ್ರ 3.75 ಕೋಟಿ ರೂಪಾಯಿ ಗಳಿಸಿದೆ. ಸಿನಿಮಾ ರಿಲೀಸ್ ಆದ ಮೂರನೇ ವಾರವೂ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡುತ್ತದೆ ಎಂದರೆ ಅದು ಸಣ್ಣ ವಿಚಾರ ಅಲ್ಲವೇ ಅಲ್ಲ. ಈ ಮೂಲಕ ಚಿತ್ರದ ಕಲೆಕ್ಷನ್ 373.33 ಕೋಟಿ ರೂಪಾಯಿ ಆಗಿದೆ.

ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮಾ ಎಂಬ ಖ್ಯಾತು ‘ದಂಗಲ್​’ಗೆ ಇದೆ. ಈ ಚಿತ್ರವನ್ನು ‘ಕೆಜಿಎಫ್ 2’ ಈ ವಾರ ಹಿಂದಿಕ್ಕಲಿದೆ. ಈ ಮೂಲಕ ಶೀಘ್ರವೇ 400 ಕೋಟಿ ರೂಪಾಯಿ ಕ್ಲಬ್ ಸೇರಲಿದೆ. ‘ರನ್​ವೇ 34’ ಸಿನಿಮಾ ಸೋಮವಾರ ಮೂರು ಕೋಟಿ ರೂಪಾಯಿ ಗಳಿಸಿದೆ. ಇಂದು ಚಿತ್ರ ಉತ್ತಮ ಗಳಿಕೆ ಮಾಡುವ ನಿರೀಕ್ಷೆ ಇದೆ.

‘ಕೆಜಿಎಫ್’ ಸಿನಿಮಾ ಬಾಲಿವುಡ್​ನಲ್ಲಿ ಸಖತ್ ಹಿಟ್ ಆಗಿತ್ತು. ಈ ಚಿತ್ರದ ಸೀಕ್ವೆಲ್ ಆಗಿ ತೆರೆಗೆ ಬಂದಿದ್ದು ‘ಕೆಜಿಎಫ್ 2’ ಚಿತ್ರ. ಗರುಡನನ್ನು ಹತ್ಯೆ ಮಾಡಿದ ರಾಕಿ ಹೇಗೆ ತನ್ನ ಅಧಿಪತ್ಯ ಸಾಧಿಸುತ್ತಾನೆ ಅನ್ನೋದನ್ನು ‘ಕೆಜಿಎಫ್ 2’ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರಶಾಂತ್ ನೀಲ್ ಅವರು ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಡುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಬಾಲಿವುಡ್ ಮಂದಿ ಕೂಡ ಸಿನಿಮಾವನ್ನು ಸಖತ್ ಇಷ್ಟಪಟ್ಟಿದ್ದಾರೆ ಎಂಬುದಕ್ಕೆ ಚಿತ್ರದ ಕಲೆಕ್ಷನ್ ಸಾಕ್ಷಿ.

ಇದನ್ನೂ ಓದಿ: ‘ಬಾಹುಬಲಿಗೆ ಕಟ್ಟಪ್ಪ, ಕೆಜಿಎಫ್​​ಗೆ ಅಯ್ಯಪ್ಪ’ ಎಂದ ಸಾಯಿಕುಮಾರ್

18ನೇ ದಿನವೂ ಮುಂದುವರಿದ ‘ಕೆಜಿಎಫ್ 2’ ಅಬ್ಬರ; 400 ಕೋಟಿ ಕ್ಲಬ್ ಸೇರಲು ಇನ್ನೆಷ್ಟು ಬೇಕು?

Published On - 1:05 pm, Tue, 3 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ