‘ಬಾಹುಬಲಿಗೆ ಕಟ್ಟಪ್ಪ, ಕೆಜಿಎಫ್​​ಗೆ ಅಯ್ಯಪ್ಪ’ ಎಂದ ಸಾಯಿಕುಮಾರ್

‘ಕೆಜಿಎಫ್​’ನಲ್ಲಿಅಯ್ಯಪ್ಪ ಅವರು ಮಾಡಿದ ಪಾತ್ರ ಹೈಲೈಟ್ ಆಗಿದೆ. ಅವರು ವಾನರನಾಗಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಅಯ್ಯಪ್ಪ ಅವರ ಸಹೋದರ ಸಾಯಿ ಕುಮಾರ್ ಮಾತನಾಡಿದ್ದಾರೆ.

TV9kannada Web Team

| Edited By: Rajesh Duggumane

May 03, 2022 | 8:29 AM

‘ಬಾಹುಬಲಿ’ ಸರಣಿಯಲ್ಲಿ (Bahubali Movie) ಕಟ್ಟಪ್ಪನ ಪಾತ್ರ ಸಖತ್ ಹೈಲೈಟ್​ ಆಗಿತ್ತು. ನಿಯತ್ತಿಗೆ ಮತ್ತೊಂದು ಹೆಸರು ಕಟ್ಟಪ್ಪ. ಆಸ್ಥಾನದಲ್ಲಿ ಯಾರೇ ಬರಲಿ ಅವರಿಗೆ ನಿಯತ್ತನ್ನು ತೋರುವುದು ಆತನ ಸ್ವಭಾವ. ಅದೇ ರೀತಿ ‘ಕೆಜಿಎಫ್​’ನಲ್ಲಿ (KGF Movie) ಅಯ್ಯಪ್ಪ ಅವರು ಮಾಡಿದ ಪಾತ್ರ ಹೈಲೈಟ್ ಆಗಿದೆ. ಅವರು ವಾನರನಾಗಿ ಕಾಣಿಸಿಕೊಂಡಿದ್ದಾರೆ. ಯಾರು ಅಧಿಕಾರದಲ್ಲಿರುತ್ತಾರೋ ಅವರಿಗೆ ನಿಯತ್ತು ತೋರೋದು ಈ ವಾನರನ ಸ್ವಭಾವ. ಗರುಡ ಇದ್ದಾಗ ಆತನ ಪರವಾಗಿ ಕೆಲಸ ಮಾಡುತ್ತಿದ್ದ ವಾನರ, ರಾಕಿ ಬಂದಮೇಲೆ ಆತನಿಗೆ ನಿಯತ್ತು ತೋರಿದ್ದ. ಈ ಬಗ್ಗೆ ಅಯ್ಯಪ್ಪ ಅವರ ಸಹೋದರ ಸಾಯಿ ಕುಮಾರ್ ಮಾತನಾಡಿದ್ದಾರೆ. ‘ಅವತಾರ ಪುರುಷ’ ಸಿನಿಮಾದಲ್ಲಿ ಸಾಯಿಕುಮಾರ್ (Saikumar) ನಟಿಸಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಸಾಯಿ ಕುಮಾರ್ ಅವರು ಈ ಮಾತನ್ನು ಹೇಳಿದ್ದಾರೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಇದನ್ನೂ ಓದಿ: Ashika Ranganath: ‘ಅವತಾರ ಪುರುಷ’ ಬೆಡಗಿ ಆಶಿಕಾ ರಂಗನಾಥ್ ಕ್ಯೂಟ್ ಫೋಟೋ ಆಲ್ಬಂ 

Meghana Raj Birthday: ಮೇಘನಾ ರಾಜ್​ಗೆ ಜನ್ಮದಿನದ ಸಂಭ್ರಮ; ಪತಿ ಚಿರು ಜತೆ ವಯಸ್ಸಿನ ಅಂತರ ಎಷ್ಟಿತ್ತು?

Follow us on

Click on your DTH Provider to Add TV9 Kannada