ಮಧ್ಯರಾತ್ರಿ ಸಿನಿಮಾ ವೀಕ್ಷಿಸಿದ ಶ್ರೀನಿಧಿ ಶೆಟ್ಟಿ, ಗರುಡ, ವಿನಯ್ ರಾಜ್​ಕುಮಾರ್..; ಚಿತ್ರ ನೋಡಿ ಆಶಾ ಭಟ್ ಹೇಳಿದ್ದೇನು?

Asha Bhat | Yash | KGF Chapter 2: ಕೆಜಿಎಫ್ ಚಾಪ್ಟರ್ 2 ವೀಕ್ಷಣೆಯ ನಂತರ ಮಾತನಾಡಿದ ನಟಿ ಆಶಾ ಭಟ್, ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಒಬ್ಬ ಕಲಾವಿದೆಯಾಗಿ, ವೀಕ್ಷಕರಾಗಿ ಹೇಗೆ ನೋಡಿದರೂ ಕೆಜಿಎಫ್ 2 ಅದ್ಭುತವಾಗಿದೆ ಎಂದಿದ್ದಾರೆ.

TV9kannada Web Team

| Edited By: shivaprasad.hs

Apr 14, 2022 | 9:24 AM

ಕೆಜಿಎಫ್ 2 (KGF Chapter 2) ಚಿತ್ರದ ತಾರೆಯರಾದ ಶ್ರೀನಿಧಿ ಶೆಟ್ಟಿ, ಹರೀಶ್ ರೈ, ಗರುಡ, ಆಂಡ್ರು ಅವಿನಾಶ್, ಅಯ್ಯಪ್ಪ, ನಟಿ ಅರ್ಚನಾ ಸೇರಿದಂತೆ ಸ್ಯಾಂಡಲ್​ವುಡ್ ತಾರೆಯರಾದ ನಟಿ ಆಶಾ ಭಟ್, ವಿನಯ್ ರಾಜ್ ಕುಮಾರ್, ಗುರು ರಾಜ್ ಕುಮಾರ್ ಮೊದಲಾದವರು ಊರ್ವಶಿ ಚಿತ್ರಮಂದಿರದಲ್ಲಿ ಮಧ್ಯ ರಾತ್ರಿ ಸಿನಿಮಾ ವೀಕ್ಷಿಸಿದ್ದಾರೆ.

ಚಿತ್ರ ವೀಕ್ಷಣೆಯ ನಂತರ ಮಾತನಾಡಿದ ನಟಿ ಆಶಾ ಭಟ್, ಚಿತ್ರದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಒಬ್ಬ ಕಲಾವಿದೆಯಾಗಿ, ವೀಕ್ಷಕರಾಗಿ ಹೇಗೆ ನೋಡಿದರೂ ಕೆಜಿಎಫ್ 2 ಅದ್ಭುತವಾಗಿದೆ. ಇದು ನನ್ನ ಸ್ನೇಹಿತೆ ಶ್ರೀನಿಧಿ ಶೆಟ್ಟಿ ಚಿತ್ರ. ಹಾಗಾಗಿ ಮೊದಲ ದಿನವನ್ನು ಮಿಸ್ ಮಾಡಲು ಚಾನ್ಸೇ ಇಲ್ಲ. ಹೀಗಾಗಿ ಎಲ್ಲರೊಂದಿಗೆ ಮಧ್ಯರಾತ್ರಿ ಚಿತ್ರ ವೀಕ್ಷಿಸಿದ್ದೇನೆ. ಚಿತ್ರದಲ್ಲಿರುವ ತಾಯಿಯ ಸೆಂಟಿಮೆಂಟ್​ಅನ್ನು ಅದ್ಭುತವಾಗಿ ತೋರಿಸಿದ್ದಾರೆ. ಅದು ಎಲ್ಲರಿಗೂ ಕನೆಕ್ಟ್ ಆಗುತ್ತದೆ ಎಂದಿದ್ದಾರೆ ಆಶಾ ಭಟ್.

ಹೆಚ್ಚಿನ ಜನರು ಕನ್ನಡ ಸಿನಿಮಾವಾಗಿ ಗುರುತಿಸುತ್ತಿದ್ದಾರೆ. ಇದು ಕಲಾವಿದರಾಗಿ ನಮ್ಮ ಚಿತ್ರರಂಗದ ಮೇಲೆ ಹೆಮ್ಮೆ ಹಾಗೂ ಖುಷಿ ತರುವ ವಿಚಾಋ. ಜತೆಗೆ ದೊಡ್ಡ ಭರವಸೆ, ಅವಕಾಶಗಳನ್ನೂ ಇದು ಸೃಷ್ಟಿಸುತ್ತದೆ ಎಂದು ನುಡಿದಿದ್ದಾರೆ ಆಶಾ ಭಟ್.

ಇದನ್ನೂ ಓದಿ: KGF Chapter 2 Review: ಕೆಜಿಎಫ್​ ಚಾಪ್ಟರ್​ 2 ವಿಮರ್ಶೆ; ಪ್ರಶಾಂತ್ ನೀಲ್ ಕೈಚಳಕ, ಯಶ್ ಫ್ಯಾನ್ಸ್​ಗೆ ಧಮಾಕ

Yash Boss: ‘ಬಾಸ್’​ ಸ್ಥಾನ ಪಡೆದುಕೊಂಡ ಯಶ್​; ದೇಶಾದ್ಯಂತ ಟ್ರೆಂಡ್​ ಆಗಿದೆ ಈ ಹೆಸರು

Follow us on

Click on your DTH Provider to Add TV9 Kannada