ಭಾವೈಕ್ಯತೆ ಮೆರೆದ ಹಿಂದೂ ಮುಸ್ಲಿಮರು; ರಾಮನ ಮುತ್ತಿನ ಪಲ್ಲಕ್ಕಿ ಉತ್ಸವದಲ್ಲಿ ಮುಸ್ಲಿಮರಿಂದ ಪಾನಕ ವಿತರಣೆ

TV9 Web
| Updated By: ganapathi bhat

Updated on: Apr 14, 2022 | 11:46 AM

ಮುಸ್ಲಿಮರು ಕೂಡ ಕೇಸರಿ ಶಾಲು ಹಾಕಿಕೊಂಡು ಪಾನಕ, ಮಜ್ಜಿಗೆ ವಿತರಿಸಿದ್ದಾರೆ. ಧರ್ಮ ಧಂಗಲ್ ಮಧ್ಯೆ ಹಿಂದೂ - ಮುಸಲ್ಮಾನರ ಸೌಹಾರ್ದತೆಗೆ ಗುಬ್ಬಿ ಸಾಕ್ಷಿಯಾಗಿದೆ. ಶ್ರೀರಾಮನ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರು ಭಾವೈಕ್ಯತೆ ಮೆರೆದಿದ್ದಾರೆ.

ತುಮಕೂರು: ಇಲ್ಲಿನ ಗುಬ್ಬಿಯಲ್ಲಿ ಶ್ರೀರಾಮನ ಮುತ್ತಿನ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಸಲಾಗಿದೆ. ಉತ್ಸವದಲ್ಲಿ ಮುಸ್ಲಿಮರು ಕೂಡ ಭಾಗಿಯಾಗಿ ಭಾವೈಕ್ಯತೆ ಮೆರೆದಿದ್ದಾರೆ. ಮುಸ್ಲಿಮರು ಕೂಡ ಕೇಸರಿ ಶಾಲು ಹಾಕಿಕೊಂಡು ಪಾನಕ, ಮಜ್ಜಿಗೆ ವಿತರಿಸಿದ್ದಾರೆ. ಧರ್ಮ ಧಂಗಲ್ ಮಧ್ಯೆ ಹಿಂದೂ – ಮುಸಲ್ಮಾನರ ಸೌಹಾರ್ದತೆಗೆ ಗುಬ್ಬಿ ಸಾಕ್ಷಿಯಾಗಿದೆ. ಶ್ರೀರಾಮನ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರು ಭಾವೈಕ್ಯತೆ ಮೆರೆದಿದ್ದಾರೆ.

ಶ್ರೀರಾಮನ ಮುತ್ತಿನ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಪಾನಕ- ಮಜ್ಜಿಗೆ ವಿತರಿಸಿದ್ದಾರೆ. ಗುಬ್ಬಿ ಪಟ್ಟಣದಲ್ಲಿ ಭಜರಂಗದಳದ ಕಾರ್ಯಕರ್ತರು ನಡೆಸಿದ ಶ್ರೀರಾಮನ ಶೋಭಾಯಾತ್ರೆ ಧಾರ್ಮಿಕ ಸಾಮರಸ್ಯಕ್ಕೆ ವೇದಿಕೆ ಆಗಿದೆ. ಗುಬ್ಬಿ ವೀರಣ್ಣ ವೃತ್ತದಲ್ಲಿ ಕೇಸರಿ ಶಾಲು ಧರಿಸಿ ಮುಸ್ಲಿಂ ಬಂಧುಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಹನುಮಂತನ ವೇಷದಾರಿ ಮೆರವಣಿಗೆಯಲ್ಲಿ ಮೆರಗು ಮೂಡಿಸಿದ್ದಾರೆ.

ಇದನ್ನೂ ಓದಿ: ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳಂತೆ ಬಾಳಬೇಕು ಎಂಬುದು ನಮ್ಮ ಅಪೇಕ್ಷೆ- ಮಾಜಿ ಸಿಎಂ ಯಡಿಯೂರಪ್ಪ

ಇದನ್ನೂ ಓದಿ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಗಮ ಷರೀಫ್​ಗಿರಿಯಲ್ಲಿ ಗುರು ಶಿಷ್ಯ ಪರಂಪರೆ ಅದ್ದೂರಿ ರಥೋತ್ಸವ