ಬಸವ ಜಯಂತಿ ಕಾರ್ಯಕ್ರಮದಲ್ಲಿ ತುತ್ತೂರಿ ಊದಿದವರಿಗೆ ಇನಾಮು ನೀಡಿದರು ಬಿ ಎಸ್ ಯಡಿಯೂರಪ್ಪ
ಆಯೋಜಕರು ಬಿ ಎಸ್ ವೈ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವಾಗ ಕಾರ್ಯಕ್ರಮಕ್ಕೆ ಕರೆಸಲಾಗಿದ್ದ ತುತ್ತೂರಿ ಊದುವ ಇಬ್ಬರು ಅವರ ಮುಂದೆಯೂ ಅದನ್ನು ಊದುತ್ತಾರೆ. ಅವರು ಊದುವಾಗಲೇ ಅವರು ತಮ್ಮ ಕಿಸೆಯಿಂದ ರೂ. 500ರ ಎರಡು ನೋಟುಗಳನ್ನು ತೆಗೆದು ಅವರಿಗೆ ಉಡುಗೊರೆಯಾಗಿ ನೀಡುತ್ತಾರೆ.
Bengaluru: ಜಗಜ್ಯೋತಿ ಬಸವಣ್ಣನವರ (Basavanna) ಜಯಂತಿಯನ್ನು ಇಂದು ನಾಡಿನಾದ್ಯಂತ ಬಹು ವಿಜೃಂಭಣೆ ಮತ್ತು ಸಡಗರದಿಂದ ಆಚರಿಸಲಲಾಗುತ್ತಿದೆ. ಇಂದಿಗೆ ಸುಮಾರು ಒಂದು ಸಾವಿರ ವರ್ಷಗಳ ಹಿಂದೆ ತಮ್ಮ ಸರಳ ವಚನಗಳ ಮೂಲಕ ಸಮಾಜ ಸುಧಾರಣೆಗೆ (social reforms) ಶ್ರಮಿಸಿದ ಬಸವಣ್ಣನವರನ್ನು ಇಂದು ನಾಡಿನ ಜನತೆ ಭಕ್ತಿ ಮತ್ತು ಶ್ರದ್ಧೆಯಿಂದ ನೆನೆಯುತ್ತಿದೆ. ಬಸವಾನುಯಾಯಿಗಳ ಮನೆಗಳಲ್ಲಿ ಹಬ್ಬ ಮತ್ತು ಸಡಗರ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು (BS Yediyurappa) ಲಿಂಗಾಯತರು ಅಂತ ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಬೆಂಗಳೂರಲ್ಲಿ ಮಾಜಿ ಮುಖ್ಯಮಂತ್ರಿಗಳು ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆಯೋಜಕರು ಬಿ ಎಸ್ ವೈ ಅವರೊಂದಿಗೆ ಫೋಟೋ ತೆಗೆಸಿಕೊಳ್ಳುವಾಗ ಕಾರ್ಯಕ್ರಮಕ್ಕೆ ಕರೆಸಲಾಗಿದ್ದ ತುತ್ತೂರಿ ಊದುವ ಇಬ್ಬರು ಅವರ ಮುಂದೆಯೂ ಅದನ್ನು ಊದುತ್ತಾರೆ. ಅವರು ಊದುವಾಗಲೇ ಅವರು ತಮ್ಮ ಕಿಸೆಯಿಂದ ರೂ. 500ರ ಎರಡು ನೋಟುಗಳನ್ನು ತೆಗೆದು ಅವರಿಗೆ ಉಡುಗೊರೆಯಾಗಿ (ಇನಾಮು) ನೀಡುತ್ತಾರೆ.
ನಿಮಗೆ ಗೊತ್ತಿದೆ, ನಮ್ಮ ನೆರೆರಾಜ್ಯಗಳಾಗಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಲಿಂಗಾಯತ ಸಮುದಾಯದ ಜನ ಸಾಕಷ್ಟಿದ್ದಾರೆ. ಹಾಗಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅವರ ರಾಜ್ಯದಲ್ಲಿ ಪ್ರತಿವರ್ಷ ಬಸವ ಜಯಂತಿ ಆಚರಿಸುವ ಆದೇಶ ಹೊಡಿಸಿದ್ದಾರೆ.
ಬಸವ ಜಯಂತಿ ದಿನವಾಗಿರುವ ಇಂದು ಬಸವಣ್ಣನವರ ಕೆಲವು ವಚನಗಳನ್ನು ನೆನೆನಯುವುದು ಅತ್ಯಂತ ಪ್ರಸ್ತುತವಾಗಿದೆ ಮಾರಾಯ್ರೇ.
ಅಯ್ಯಾ, ನೀನು ನಿರಾಕಾರವಾದಲ್ಲಿ
ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ
ಅಯ್ಯಾ, ನೀನು ನಾಂಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ
ಅಯ್ಯಾ, ನೀನು ಸಾಕಾರವಾಗಿದ್ದಲ್ಲಿ
ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ
ಅಯ್ಯಾ, ನೀನೆನ್ನ ಭವವ ಕೊಂದಿಹೆನೆಂದು
ಜಂಗಮಲಾಂಛನವ ಧರಿಸಿ ಬಂದಲ್ಲಿ
ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ ಕೂಡಲಸಂಗಮದೇವ.
ನಾನೊಂದ ನೆನೆದರೆ, ತಾನೊಂದ ನೆನೆವುದು;
ನಾನಿತ್ತಲೆಳೆದರೆ, ತಾನತ್ತಲೆಳೆವುದು;
ತಾ ಬೇರೆ ಎನ್ನನಳಲಿಸಿ ಕಾಡಿತ್ತು;
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು;
ಕೂಡಲಸಂಗನ ಕೂಡಿಹೆನೆಂದರೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ.
ನೀನೊಲಿದರೆ ಕೊರಡು ಕೊನರುವುದಯ್ಯ
ನೀನೊಲಿದರೆ ಬರಡು ಹಯನಹುದಯ್ಯ
ನೀನೊಲಿದರೆ ವಿಷವಮೃತವಹುದಯ್ಯ
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವ
ಇದನ್ನೂ ಓದಿ: ಸರ್ಕಾರದ ವತಿಯಿಂದ ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ ಬಸವ ಜಯಂತಿ ಆಚರಣೆ; ಜನಸಾಮಾನ್ಯರ ಅಸಮಾಧಾನಕ್ಕೆ ಕಾರಣವೇನು?