AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಂಜಾನ್ ಮುನ್ನಾದಿನ ಬೇಡದ ಅತಿಥಿಯೊಬ್ಬ ಮನೆ ಸೇರಿಕೊಂಡ ಪ್ರಸಂಗ ತುಮಕೂರಿನ ಕುಣಿಗಲ್​ನಲ್ಲಿ!

ರಂಜಾನ್ ಮುನ್ನಾದಿನ ಬೇಡದ ಅತಿಥಿಯೊಬ್ಬ ಮನೆ ಸೇರಿಕೊಂಡ ಪ್ರಸಂಗ ತುಮಕೂರಿನ ಕುಣಿಗಲ್​ನಲ್ಲಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: May 03, 2022 | 6:32 PM

Share

ನಮಾಜ್ ಗೆ ಹೋದವರು ವಾಪಸ್ಸು ಬಂದಾಗ ಅವರಿಗೆ ವಿಷಯ ಗೊತ್ತಾಗಿದೆ. ಅವರು ಆತಂಕಕ್ಕೊಳಗಾಗದೆ ಊರಲ್ಲಿರುವ ಉರಗ ತಜ್ಞ ಮಹಾಂತೇಶ್ ಅವರಿಗೆ ಫೋನ್ ಮಾಡಿದ್ದಾರೆ.

ತುಮಕೂರು: ಬೆಳಗಿದರೆ ಹಬ್ಬ ರಂಜಾನ್ ಹಬ್ಬ (Ramadan festival). ಪವಿತ್ರ ರಂಜಾನ್ ತಿಂಗಳ ಕೊನೆಯ ಉಪವಾದ ಮುರಿದು ಮನೆಯಲ್ಲಿರುವ ಪುರುಷರೆಲ್ಲ ನಮಾಜ್ ಮಾಡಲು ಹೋಗಿದ್ದರೆ, ಮಹಿಳೆಯರು ಹಬ್ಬದೂಟ ಮತ್ತು ತಿಂಡಿಗಳಿಗಾಗಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ರಂಜಾನ್ ಮುಸಲ್ಮಾನರಿಗೆ (Muslim community) ಬಹಳ ದೊಡ್ಡ ಹಬ್ಬ. ಹಬ್ಬದಂದು ಅವರು ಮುಸ್ಲಿಮೇತರ (non-Muslims) ಸ್ನೇಹಿತರನ್ನು ಮನೆಗೆ ಆಹ್ವಾನಿಸಿ ಔತಣ ಬಡಿಸುತ್ತಾರೆ. ಹಿಂದಿಯಲ್ಲಿ ಬಿನ್ ಬುಲಾಯೆ ಮೆಹಮಾನ್ ಎಂಬ ಪದವಿದೆ. ತುಮಕೂರು ಜಿಲ್ಲೆ ಕುಣಿಗಲ್ ಪಟ್ಟಣದ 19 ನೇ ವಾರ್ಡ್​ನಲ್ಲಿರುವ ಅಮೀರ್ ಜಾನ್ ಅವರ ಮನೆಯಲ್ಲಿ ಹಬ್ಬಕ್ಕೆ ಒಂದು ದಿನ ಮೊದಲೇ ಆಮಂತ್ರಣವಿಲ್ಲದ ಒಬ್ಬ ಅತಿಥಿ ಬಂದು ಸೇರಿಕೊಂಡುಬಿಟ್ಟಿದ್ದಾನೆ. ಈ ಅತಿಥಿ ಅಂತಿಂಥವನಲ್ಲ ಮಾರಾಯ್ರೇ, ಎಂಟೆದೆಯುಳ್ಳವನನ್ನೂ ಹೆದರಿಸುವವವನು. ಹೌದು, ಮಿಸ್ಟರ್ ನೊಗ್ರಾಜ್ (ಹಂಬಲ್ ಪೊಲಿಟಿಶಿಯನ್ ಅಲ್ಲ) ಇವರ ಮನೆಯೊಳಗೆ ನುಸುಳಿ ಮನೆಯಲ್ಲಿದ್ದವರನ್ನು ಹೊರಗೋಡಿಸಿದ್ದಾನೆ.

ನಮಾಜ್ ಗೆ ಹೋದವರು ವಾಪಸ್ಸು ಬಂದಾಗ ಅವರಿಗೆ ವಿಷಯ ಗೊತ್ತಾಗಿದೆ. ಅವರು ಆತಂಕಕ್ಕೊಳಗಾಗದೆ ಊರಲ್ಲಿರುವ ಉರಗ ತಜ್ಞ ಮಹಾಂತೇಶ್ ಅವರಿಗೆ ಫೋನ್ ಮಾಡಿದ್ದಾರೆ. ಅವರು ಕೂಡಲೇ ಅಲ್ಲಿಗೆ ಧಾವಿಸಿ ಅಲ್ಮೆರಾವೊಂದರ ಕೆಳಗೆ ಅವಿತುಕೊಂಡಿದ್ದ ಸುಮಾರು 3-4 ಅಡಿ ಉದ್ದದ ನಾಗರಹಾವನ್ನು ಅನಾಯಾಸವಾಗಿ ಹಿಡಿದು ಕಾಡಿಗೆ ಒಯ್ದುಬಿಟ್ಟಿದ್ದಾರೆ.

ಈ ವರ್ಷದ ಬೇಸಿಗೆ ರಾಜ್ಯದೆಲ್ಲೆಡೆ ಬಹಳ ಪ್ರಖರವಾಗಿದೆ. ಸಾಮಾನ್ಯ ತಾಪಮಾನಕ್ಕಿಂತ ಒಂದೆರಡು ಡಿಗ್ರಿ ಸೆಲ್ಲಿಯಸ್ ನಷ್ಟು ಹೆಚ್ಚು ಉಷ್ಣಾಂಶ ಎಲ್ಲ ಕಡೆ ದಾಖಲಾಗುತ್ತಿದೆ. ಬಿಸಿಲಿನ ಆರ್ಭಟ ಜಾಸ್ತಿಯಾದಾಗ ಬಿಲಗಳಲ್ಲಿರುವ ಹಾವುಗಳು ಹೊರಬಂದು ತಂಪು ಪ್ರದೇಶವನ್ನು ಅರಸುತ್ತವೆ. ಹಾಗಾಗಿ ಮನೆಗಳ ಸಂಪಿನ ಪಕ್ಕ, ಬಾತ್ ರೂಮುಗಳಲ್ಲಿ, ಓಣಿಗಳ ಕಾಲುವೆ ಪಕ್ಕ ಆಶ್ರಯ ಪಡೆಯುತ್ತವೆ.

ಇದನ್ನೂ ಓದಿ:   ಬೆಕ್ಕಿಗೆ ಹಾಲು ಕುಡಿಯಬೇಕಿತ್ತು, ಆಗ ಅದು ಮಾಡಿದ್ದೇನು ಗೊತ್ತಾ..! ಇಲ್ಲಿದೆ ವೈರಲ್ ವಿಡಿಯೋ