ಬೆಕ್ಕಿಗೆ ಹಾಲು ಕುಡಿಯಬೇಕಿತ್ತು, ಆಗ ಅದು ಮಾಡಿದ್ದೇನು ಗೊತ್ತಾ..! ಇಲ್ಲಿದೆ ವೈರಲ್ ವಿಡಿಯೋ
ಸನ್ನೆಯನ್ನು ಅರ್ಥಮಾಡಿಕೊಂಡ ಆತ ಹಸುವಿನ ಕೆಚ್ಚಲುವಿನಿಂದ ನೆರವಾಗಿ ಬೆಕ್ಕಿಗೆ ಹಾಲು ಕುಡಿಸುತ್ತಾನೆ. ಈ ಮುದ್ದಾದ ವಿಡಿಯೋ ನೋಡಿದ ಬಳಕೆದಾರರ ಮುಖದಲ್ಲಿ ಮಂದಹಾಸ ಮೂಡಿದೆ.
Viral Video: ಪ್ರಾಣಿಗಳೇಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅನೇಕ ಪ್ರಾಣಿ ಪ್ರೀಯರು ಮನೆಗಳಲ್ಲಿ ಸಾಕುತ್ತಾರೆ. ಅದರಲ್ಲಿಯೂ ನಾಯಿ, ಬೆಕ್ಕನ್ನ ಜನರು ಹೆಚ್ಚಾಗಿ ಸಾಕುತ್ತಾರೆ. ಅವುಗಳು ಮಾಡುವ ತುಂಟ್ಟಾಟ, ತಮಾಷೆ ಮುದ್ದುಮುದ್ದಾಗಿ ವರ್ತಿಸುವ ಪರಿ ಎಷ್ಟು ಚಂದ ಅಲ್ವಾ. ನಮ್ಮಲ್ಲಿ ಅನೇಕರು ನಿರ್ದಿಷ್ಟವಾಗಿ ಬೆಕ್ಕುಗಳನ್ನು ಹೆಚ್ಚಾಗಿ ಸಾಕುತ್ತಾರೆ. ಅವು ಬಹುಶಃ ವಿಶ್ವದ ಎರಡನೇ ಅತಿ ಹೆಚ್ಚು ಸಾಕು ಪ್ರಾಣಿಗಳಲ್ಲಿ ಒಂದು ಎನ್ನಲಾಗುತ್ತೆ. ಬೆಕ್ಕಿನ ಕೆಲವೊಂದು ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಕಾಣಸಿಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದ್ದು, ವಿಡಿಯೋ ನೋಡಿ ನೆಟ್ಟಿಗರು ಖುಪಿಪಟ್ಟಿದ್ದಾರೆ.
ವಿಡಿಯೋದಲ್ಲಿ ಗೋಪಾಲಕನೊಬ್ಬ ಹಸುವಿನ ಹಾಲು ಕರೆಯುತ್ತಿದ್ದು, ಅದೇ ವೇಳೆಗೆ ಬೆಕ್ಕು ಅಲ್ಲಿಗೆ ಬಂದಿದೆ. ಹಾಲನ್ನು ನೋಡಿ ಬೆಕ್ಕಿಗೂ ಹಸಿವಾಗಿದ್ದು, ಹಸಿದ ಬೆಕ್ಕು ಗೋಪಾಲಕನಿಗೆ ಸನ್ನೆ ಮಾಡುತ್ತದೆ. ಸನ್ನೆಯನ್ನು ಅರ್ಥಮಾಡಿಕೊಂಡ ಆತ ಹಸುವಿನ ಕೆಚ್ಚಲುವಿನಿಂದ ನೆರವಾಗಿ ಬೆಕ್ಕಿಗೆ ಹಾಲು ಕುಡಿಸುತ್ತಾನೆ. ಈ ಮುದ್ದಾದ ವಿಡಿಯೋ ನೋಡಿದ ಬಳಕೆದಾರರ ಮುಖದಲ್ಲಿ ಮಂದಹಾಸ ಮೂಡಿದೆ. ನೀವೂ ಈ ಮುದ್ದಾದ ವಿಡಿಯೋ ನೋಡುವುದನ್ನು ಮರೆಯಬೇಡಿ.
बस सबके इशारे को समझने की ज़रूरत है.❤️ pic.twitter.com/2UrqPwS8Pv
— Awanish Sharan (@AwanishSharan) May 2, 2022
14ನೇ ಜೂನ್ 2021 ರಂದು, ತಾಜಾ ಪೂರ್ಣ ಕೆನೆ ಹಾಲು ಎಂಬ ಶೀರ್ಷಿಕೆಯ 1-ನಿಮಿಷದ ವಿಡಿಯೋವನ್ನು ಡಿನ್ ಸಿನ್ಸಿನ್ ಎನ್ನುವ ಫೇಸ್‌ಬುಕ್ ಖಾತೆ ಪೋಸ್ಟ್ ಮಾಡಿದೆ. ಇದೀಗ 2.6 ಮಿಲಿಯನ್ ವೀಕ್ಷಣೆಗಳು, 79,000 ಪ್ರತಿಕ್ರಿಯೆಗಳು ಮತ್ತು 4,600 ಕಾಮೆಂಟ್‌ಗಳೊಂದಿಗೆ ವೈರಲ್ ಆಗಿರುವ ವಿಡಿಯೋ ಹಸುವಿಗೆ ಹಾಲುಣಿಸುವಲ್ಲಿ ನಿರತರಾಗಿದ್ದ ವ್ಯಕ್ತಿಯನ್ನು ಬೆಕ್ಕು ತನ್ನ ಕಾಲಿನಿಂದ ತಟ್ಟುವ ಕ್ಷಣವನ್ನು ಸೆರೆಹಿಡಿಯಲಾಗಿದೆ. ಬೆಕ್ಕು ತನ್ನ ಕಾಲಿಗೆ ಎರಡು ಬಾರಿ ತಟ್ಟಿದಾಗ, ಮನುಷ್ಯನು ಹಸುವಿನ ಹಾಲನ್ನು ಬೆಕ್ಕಿ ನೀಡುತ್ತಾನೆ. ಮುದ್ದಾದ ಪುಟ್ಟ ಬೆಕ್ಕು ಎರಡನೇ ಸುತ್ತಿಗೆ ಹೋಗುವ ಮೊದಲು ಹಾಲನ್ನು ಕುಡಿಯುತ್ತದೆ. ಹೆಚ್ಚಿನ ಹಾಲಿಗಾಗಿ ಮತ್ತೊಮ್ಮೆ ಮನುಷ್ಯನ ಕಾಲಿಗೆ ಟ್ಯಾಪ್ ಮಾಡುತ್ತದೆ.
ಇನ್ನಷ್ಟು ಟ್ರೆಂಡಿಂಗ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.