Viral Video: ಅಪರೂಪದ ಬಿಳಿ ನವಿಲು ಹಾರುತ್ತಿರುವ ದೃಶ್ಯ ಸೆರೆ; ಮಂತ್ರಮುಗ್ಧರಾದ ನೆಟ್ಟಿಗರು
ಇಟಲಿಯ ಸ್ಟ್ರೆಸಾ ಬಳಿಯ ಮ್ಯಾಗಿಯೋರ್ ಸರೋವರದಲ್ಲಿರುವ ಬೊರೊಮಿಯನ್ ದ್ವೀಪಗಳಲ್ಲಿ ಒಂದಾದ ಐಸೊಲಾ ಬೆಲ್ಲಾದ ಸುಂದರವಾದ ಉದ್ಯಾನದಲ್ಲಿ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ.
ನವಿಲುಗಳು ವಿಶ್ವದ ಅತ್ಯಂತ ಸುಂದರವಾದ ಪಕ್ಷಿಗಳಲ್ಲಿ ಒಂದು. ನಾವು ಹಳ್ಳಿಗಳಲ್ಲಿ ನವಿಲುಗಳನ್ನು ನೋಡುತ್ತೇವೆ. ಸಾಮಾನ್ಯವಾಗಿ ನಾವು ನೀಲಿ ಬಣ್ಣದ ನವಿಲನ್ನು ನೋಡುದ್ದೇವೆ. ಆದರೆ ಇಲ್ಲಿ ಅಪರೂಪದ ಬಳಿ ನವಿಲೊಂದ್ದು (White Peacock) ಕಾಣಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ತಮ್ಮ ವರ್ಣವೈವಿಧ್ಯದ ಗರಿಗಳು, ಫ್ಯಾನ್-ಆಕಾರದ ಬಾಲ ಮತ್ತು ಪ್ರತಿ ರೆಕ್ಕೆಯ ಮೇಲೆ ಗರಿಗಳ ಎತ್ತರದ ಪ್ರದರ್ಶನದೊಂದಿಗೆ ನೋಡುಗರನ್ನು ಬೆರಗುಗೊಳಿಸುತ್ತದೆ. ಅಪರೂಪದ ಬಿಳಿ ನವಿಲೊಂದು ಪ್ರತಿಮೆಯ ಮೇಲಿಂದ ಹುಲ್ಲಿನೆಡೆಗೆ ಹಾರುತ್ತಿರುವ ವಿಡಿಯೋ ವೈರಲ್ ಆಗಿದ್ದು, ಈ ವಿಡಿಯೋವನ್ನು ಟ್ವಿಟರ್‌ನಲ್ಲಿ Yoda4ever ಖಾತೆ ಬಿಳಿ ನವಿಲು ಹಾರುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ.
White peacock in flight..?? pic.twitter.com/CnBNbSoprO
— ?o̴g̴ (@Yoda4ever) April 29, 2022
ಇಟಲಿಯ ಸ್ಟ್ರೆಸಾ ಬಳಿಯ ಮ್ಯಾಗಿಯೋರ್ ಸರೋವರದಲ್ಲಿರುವ ಬೊರೊಮಿಯನ್ ದ್ವೀಪಗಳಲ್ಲಿ ಒಂದಾದ ಐಸೊಲಾ ಬೆಲ್ಲಾದ ಸುಂದರವಾದ ಉದ್ಯಾನದಲ್ಲಿ ಈ ವಿಡಿಯೋವನ್ನು ಸೆರೆಹಿಡಿಯಲಾಗಿದೆ. ಇಲ್ಲಿನ ಉದ್ಯಾನವನಗಳಲ್ಲಿ ಬಿಳಿ ಮತ್ತು ಇತರೆ ಬಣ್ಣದ ನವಿಲುಗಳು ಮುಕ್ತವಾಗಿ ವಾಸಿಸುತ್ತವೆ. ಬೊರೊಮಿಯೊ ದ್ವೀಪಗಳು ಸರೋವರದ ಮಧ್ಯಭಾಗದಲ್ಲಿರುವ ಪುಟ್ಟ ಸ್ವರ್ಗ ಇದಾಗಿದೆ. ಈ ವಿಡಿಯೋ ಟ್ವಿಟರ್‌ನಲ್ಲಿ 21,000 ಕ್ಕೂ ಹೆಚ್ಚು ಲೈಕ್ಸ್ ಮತ್ತು 2.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.
ನಿಖರವಾಗಿ ಆ ಸ್ಥಳದಲ್ಲಿ, ಐಸೋಲಾ ಬೆಲ್ಲ, ನಾನು ಬಿಳಿ ನವಿಲು ನೋಡಿದ್ದೇನೆ ತುಂಬಾ ಸುಂದರವಾಗಿರುತ್ತದೆ ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಒಂದು ರೀತಿಯ ನನಗೆ ಫೀನಿಕ್ಸ್ನ್ನು ನೆನಪಿಸುತ್ತದೆ (ಅದು ಬಿಳಿ ಬಣ್ಣದಲ್ಲಿದೆ) ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ನಾನು ಸುಮಾರು 10 ವರ್ಷಗಳ ಹಿಂದೆ ಬಿಳಿ ನವಿಲನ್ನು ನೋಡಿದ ನೆನಪಿದೆ. ಆದರೂ ಹಾರುವುದನ್ನು ನೋಡಿಲ್ಲ. ಇದು ಸುಂದರವಾಗಿದೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಬಿಳಿ ನವಿಲುಗಳು ಲ್ಯೂಸಿಸಮ್ ಜೀನ್ ರೂಪಾಂತರದೊಂದಿಗೆ ನೀಲಿ ನವಿಲುಗಳ ಅಸಾಮಾನ್ಯ ಉಪ-ಜಾತಿಗಳಾಗಿವೆ. ಬಿಳಿ ಬಣ್ಣದಲ್ಲಿರುವ ನವಿಲುಗಳು ಹಳದಿಯಾಗಿ ಹುಟ್ಟುತ್ತವೆ ಮತ್ತು ವಯಸ್ಸಾದಂತೆ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಪೈಡ್ ನವಿಲುಗಳಲ್ಲಿ ಭಾಗಶಃ ಲ್ಯುಸಿಸಮ್ ಸಂಭವಿಸುತ್ತದೆ, ಇದರ ಪರಿಣಾಮವಾಗಿ ಅವುಗಳು ತನ್ನ ಮೂಲ ಸ್ವರೂಪದ ಬಣ್ಣವನ್ನು ಕಳೆದುಕೊಳ್ಳುತ್ತವೆ.
ಇನ್ನಷ್ಟು ಟ್ರೇಂಡಿಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.