Kichcha Sudeep: ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಸಮಾರೋಪ ಕಾರ್ಯಕ್ರಮದಲ್ಲಿ ಮೊಳಗಿದ ‘ಕಿಚ್ಚ ಕಿಚ್ಚ’ ಘೋಷಣೆ
Khelo India University Games: ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ ಆಗಮಿಸಿದ್ದರು. ಸುದೀಪ್ ಆಗಮನದ ವೇಳೆ ಸ್ಟೇಡಿಯಂನಲ್ಲಿ ಕಿಚ್ಚ ಕಿಚ್ಚ ಘೋಷಣೆ ಮೊಳಗಿತು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಒಂದು ಸುತ್ತು ಹಾಕಿದ ಕಿಚ್ಚ, ಅಭಿಮಾನಿಗಳತ್ತ ಕೈಬೀಸಿದರು.
ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ (Khelo India University Games) ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಿಚ್ಚ ಸುದೀಪ್ (Kichcha Sudeep) ಆಗಮಿಸಿದ್ದರು. ಸುದೀಪ್ ಆಗಮನದ ವೇಳೆ ಸ್ಟೇಡಿಯಂನಲ್ಲಿ ಕಿಚ್ಚ ಕಿಚ್ಚ ಘೋಷಣೆ ಮೊಳಗಿತು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಒಂದು ಸುತ್ತು ಹಾಕಿದ ಕಿಚ್ಚ, ಅಭಿಮಾನಿಗಳತ್ತ ಕೈಬೀಸಿದರು. ಫ್ಯಾನ್ಸ್ ಜತೆ ಸೆಲ್ಫಿಗೂ ಅವರು ಪೋಸ್ ನೀಡಿದರು. ಮಹಿಳಾ ಅಭಿಮಾನಿಗಳಿಗೆ ಸೆಲ್ಫಿಯನ್ನು ಸ್ವತಃ ಸುದೀಪ್ ಅವರೇ ತೆಗದುಕೊಟ್ಟಿದ್ದು ವಿಶೇಷ. ಈ ಘಟನೆಗಳು ಕ್ರೀಡಾಂಗಣದಲ್ಲಿ ಮತ್ತಷ್ಟು ಕಿಚ್ಚ ಕಿಚ್ಚ ಎಂಬ ಘೋಷಣೆ ಮೊಳಗಲು ಕಾರಣವಾದವು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಕೇಂದ್ರ ಕ್ರೀಡಾ ಇಲಾಖೆ ರಾಜ್ಯ ಸಚಿವ ನಿಶಿತ್ ಪ್ರಮಾಣಿಕ್, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಿಎಂ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಕ್ರೀಡಾ ಸಚಿವ ನಾರಾಯಣ ಗೌಡ, ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ, ಸಂಸದರಾದ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ ಮೊದಲಾದವರು ಉಪಸ್ಥಿತರಿದ್ದರು.
ಮತ್ತಷ್ಟು ವಿಡಿಯೋ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ನಟ ಕಿಚ್ಚ ಸುದೀಪ್ ಹೇಳಿರುವ ವಿಚಾರ ಸರಿಯಿದೆ; ಹಿಂದಿ ಬಗ್ಗೆ ಸುದೀಪ್ ಹೇಳಿಕೆಗೆ ಬೆಂಬಲ ಸೂಚಿಸಿ ಸಿಎಂ ಬೊಮ್ಮಾಯಿ