ನಟ ಕಿಚ್ಚ ಸುದೀಪ್ ಹೇಳಿರುವ ವಿಚಾರ ಸರಿಯಿದೆ; ಹಿಂದಿ ಬಗ್ಗೆ ಸುದೀಪ್ ಹೇಳಿಕೆಗೆ ಬೆಂಬಲ ಸೂಚಿಸಿ ಸಿಎಂ ಬೊಮ್ಮಾಯಿ

ನಟ ಕಿಚ್ಚ ಸುದೀಪ್ ಹೇಳಿರುವ ವಿಚಾರ ಸರಿಯಿದೆ; ಹಿಂದಿ ಬಗ್ಗೆ ಸುದೀಪ್ ಹೇಳಿಕೆಗೆ ಬೆಂಬಲ ಸೂಚಿಸಿ ಸಿಎಂ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಯೇ ಸಾರ್ವಭೌಮ. ನಟ ಕಿಚ್ಚ ಸುದೀಪ್ ಹೇಳಿರುವ ವಿಚಾರ ಸರಿಯಿದೆ. ಆಯಾ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ಇರುತ್ತದೆ. ಸುದೀಪ್ ಅದನ್ನ ಸರಿಯಾಗಿಯೇ ಹೇಳಿದ್ದಾರೆ ಎಂದು ಸುದೀಪ್ ಹೇಳಿಕೆಗೆ ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಸಿಎಂ ಬೊಮ್ಮಾಯಿ ಬೆಂಬಲ ಸೂಚಿಸಿದ್ದಾರೆ.

TV9kannada Web Team

| Edited By: Ayesha Banu

Apr 28, 2022 | 12:19 PM

ಬೆಂಗಳೂರು: ನಟ ಅಜಯ್ ದೇವಗನ್, ಕಿಚ್ಚ ಸುದೀಪ್ ಟ್ವೀಟ್ ವಾರ್ ವಿಚಾರ ಸಂಬಂಧ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದಿಂದ ಪ್ರತಿಭಟನೆ ನಡೆಯುತ್ತಿದೆ. ಇನ್ನು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ. ಮತ್ತೊಂದು ಕಡೆ ಟ್ವೀಟ್ ವಾರ್ ವಿಚಾರವಾಗಿ ಸಿಎಂ ಬೊಮ್ಮಾಯಿ, ಡಿಕೆ ಶಿವಕುಮಾರ್ ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ.

ನಟ ಕಿಚ್ಚ ಸುದೀಪ್ ಹೇಳಿರುವ ವಿಚಾರ ಸರಿಯಿದೆ ಆಯಾ ರಾಜ್ಯಗಳಲ್ಲಿ ಪ್ರಾದೇಶಿಕ ಭಾಷೆಯೇ ಸಾರ್ವಭೌಮ. ನಟ ಕಿಚ್ಚ ಸುದೀಪ್ ಹೇಳಿರುವ ವಿಚಾರ ಸರಿಯಿದೆ. ಆಯಾ ಪ್ರಾದೇಶಿಕ ಭಾಷೆಗಳಿಗೆ ಮನ್ನಣೆ ಇರುತ್ತದೆ. ಸುದೀಪ್ ಅದನ್ನ ಸರಿಯಾಗಿಯೇ ಹೇಳಿದ್ದಾರೆ ಎಂದು ಸುದೀಪ್ ಹೇಳಿಕೆಗೆ ಹುಬ್ಬಳ್ಳಿ ಏರ್ಪೋರ್ಟ್ನಲ್ಲಿ ಸಿಎಂ ಬೊಮ್ಮಾಯಿ ಬೆಂಬಲ ಸೂಚಿಸಿದ್ದಾರೆ.

ಹಿಂದಿ‌ ರಾಷ್ಟ್ರ ಭಾಷೆ ಅಲ್ಲ ನಟ ಅಜಯ್ ದೇವಗನ್ ಖ್ಯಾತ ನಟ. ಇಲ್ಲಿ ಸುದೀಪ್ ಕೂಡ ಕನ್ನಡದ ಖ್ಯಾತ ನಟ. ಅಜಯ್ ದೇವಗನ್ ಹಿಂದಿ ರಾಷ್ಟ್ರೀಯ ಭಾಷೆ ಅಂದಿದಾರೆ. ಹಿಂದಿ‌ ರಾಷ್ಟ್ರ ಭಾಷೆ ಅಲ್ಲ. ದೇಶದ 14 ಭಾಷೆಗಳಲ್ಲಿ ಹಿಂದಿ ಕೂಡ ಒಂದು. ಕರ್ನಾಟಕದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ ಭಾಷೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ರಾಮಲಿಂಗರೆಡ್ಡಿ ತಿಳಿಸಿದ್ದಾರೆ.

ಎಲ್ಲಾ ಭಾಷೆಗೂ ಈ ದೇಶದಲ್ಲಿ ಸಮಾನ ಮಾನ್ಯತೆ ಇದೆ ಇನ್ನು ಹಿಂದಿ ರಾಷ್ಟ್ರೀಯ ಭಾಷೆ ಎಂಬ ವಿಚಾರಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ನಾನು ಯಾರ ಟ್ವೀಟ್ಗೂ ರಿಪ್ಲೇ ಮಾಡಕ್ಕೆ ಸಿದ್ದ ಇಲ್ಲ. ನಮ್ಮ ದೇಶದಲ್ಲಿ ಯಾವ ಭಾಷೆ ಬೇಕು ಅಂತ ಸರ್ಕಾರ ತೀರ್ಮಾನ ಮಾಡಿದೆ. ಕನ್ನಡ ಇದೆ, ತೆಲುಗು ಇದೆ ಎಲ್ಲ ಭಾಷೆಗಳು ಇದೆ. ನೋಟಿನ ಮೇಲೆ ಎಲ್ಲಾ ಭಾಷೆಗಳು ಇವೆ. ನಮ್ಮ ನೆಲ, ನಮ್ಮ ಭಾಷೆ, ನಮ್ಮ ಜನ ರಕ್ಷಣೆ ಮಾಡಬೇಕಾದ್ದು ನಮ್ಮ ಕೆಲಸ. ಒಬ್ಬರಿಗೆ ಹಿಂದಿ ಬರುತ್ತೆ ಇಂಗ್ಲೀಷ್ ಬರುತ್ತೆ ಆದರೆ ಪಾರ್ಲಿಮೆಂಟ್ನಲ್ಲಿ ಕನ್ನಡದಲ್ಲಿ ಭಾಷಣ ಮಾಡಕ್ಕೆ ಅವಕಾಶ ಮಾಡಿಕೊಡಿ ಎಂದರು.

ನಮ್ಮ ದೇಶ ಅನೇಕ ಭಾಷೆಗಳ ಗೂಡಾಗಿದೆ. ಅವರವರಿಗೆ ಅವರವರ ಸ್ವಾಭಿಮಾನವಿದೆ. ನಮ್ಮ ರಾಜ್ಯದಲ್ಲೇ ಕೊಡಗಿಗೆ ಹೋದರೆ ಒಂದು, ಮಂಗಳೂರಿಗೆ ಹೋದರೆ ಒಂದು ಭಾಷೆ ಇದೆ. ಯಾವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ನಾವು ಕನ್ನಡಿಗರು, ನಮ್ಮದು ಧ್ವಜ‌ ಇದೆ. ಭಾಷೆ ಇದೆ. ನಮ್ಮದೇ ಆದ ಸ್ವಾಭಿಮಾನ ಇದೆ. ಐನೂರು ರೂಪಾಯಿ ನೋಟಿನಲ್ಲಿ ಎಲ್ಲಾ ಭಾಷೆಗಳು ಇವೆ. ಕನ್ನಡ, ತೆಲುಗು, ತಮಿಳು ಭಾಷೆ ಇದೆ ಎಂದು ಡಿಕೆಶಿ ಐನೂರರ ನೋಟು ಪ್ರದರ್ಶನ ಮಾಡಿದ್ರು. ದೇಶದ ಎಲ್ಲಾ ಕಡೆ ಈ ನೋಟು ಚಲಾವಣೆ ಆಗುತ್ತೆ ಅಂದಮೇಲೆ‌ ಎಲ್ಲಾ ಭಾಷೆಗೂ ಈ ದೇಶದಲ್ಲಿ ಸಮಾನ ಮಾನ್ಯತೆ ಇದೆ ಎಂದರು.

ಎಲ್ಲ ರಾಜ್ಯ ಒಮ್ಮತದಿಂದ ಹೇಳ್ಬೇಕು. ಯಾರೋ ಒಬ್ಬರು ಹೇಳಿದರು ಅಂತ ನಾವು ಮಾಡಕ್ಕಾಗಲ್ಲ. ನಮಗೆ ಕನ್ನಡ ಭಾಷೆಯೇ ಪ್ರಾಮುಖ್ಯತೆ. ರಾಷ್ಟ್ರಮಟ್ಟದಲ್ಲಿ ವಿಚಾರ ಚರ್ಚೆಯಾಗಬೇಕು. ಯಾರೊಬ್ಬರೂ ಹೇಳಿದ ತಕ್ಷಣ ನಾವು ಹಿಂದಿಯನ್ನು ರಾಷ್ಟ್ರಭಾಷೆ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಂದಿ ವಿವಾದ: ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಕಾಂಟ್ರವರ್ಸಿ ಶುರು ಆಗಿದ್ದು ಹೇಗೆ? ಇಲ್ಲಿದೆ ವಿವರ..

Follow us on

Related Stories

Most Read Stories

Click on your DTH Provider to Add TV9 Kannada