AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Meghana Raj Birthday: ಮೇಘನಾ ರಾಜ್​ಗೆ ಜನ್ಮದಿನದ ಸಂಭ್ರಮ; ಪತಿ ಚಿರು ಜತೆ ವಯಸ್ಸಿನ ಅಂತರ ಎಷ್ಟಿತ್ತು?

ಮೇಘನಾ ರಾಜ್​: 2009ರಲ್ಲಿ ತೆರೆಗೆ ಬಂದ ತೆಲುಗು ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು ಮೇಘನಾ ರಾಜ್. ಇದಾದ ಬಳಿಕ 2010ರ ‘ಪುಂಡ’ ಚಿತ್ರದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಯವಾದರು. ನಂತರ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಮೇಘನಾ ಭೇಷ್ ಎನಿಸಿಕೊಂಡರು.

Meghana Raj Birthday: ಮೇಘನಾ ರಾಜ್​ಗೆ ಜನ್ಮದಿನದ ಸಂಭ್ರಮ; ಪತಿ ಚಿರು ಜತೆ ವಯಸ್ಸಿನ ಅಂತರ ಎಷ್ಟಿತ್ತು?
ಮೇಘನಾ-ಚಿರು
TV9 Web
| Updated By: Digi Tech Desk|

Updated on:May 03, 2022 | 9:14 AM

Share

ಮೇಘನಾ ರಾಜ್​ ಅವರು (Meghana Raj) ಸ್ಯಾಂಡಲ್​ವುಡ್​ ಹಾಗೂ ಮಲಯಾಳಂನಲ್ಲಿ ಹೆಚ್ಚು ಚಿರಪರಿಚಿತರಾದವರು. ಅವರು ಜೀವನದಲ್ಲಿ ಸಾಕಷ್ಟು ಏಳುಬೀಳು ಕಂಡಿದ್ದಾರೆ. ಅವರ ಜೀವನ ಮತ್ತೆ ಸಮಸ್ಥಿತಿಗೆ ಮರಳುತ್ತಿದೆ. ಮೇಘನಾ ಪ್ರೀತಿಸಿ ಮದುವೆ ಆದ ಚಿರಂಜೀವಿ ಸರ್ಜಾ (Chiranjeevi Sarja) ಅವರು ಇಹಲೋಕ ತ್ಯಜಿಸಿ ಎರಡು ವರ್ಷ ಕಳೆಯುತ್ತಾ ಬಂದಿದೆ. ಈ ನೋವನ್ನು ಮೇಘನಾಗೆ ಈಗಲೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಜ್ಯೂ. ಚಿರು ಅವರ ಜೀವನದಲ್ಲಿ ಎಂಟ್ರಿ ಆದ ನಂತರದಲ್ಲಿ ಖುಷಿ ಕಾಣುತ್ತಿದ್ದಾರೆ. ಇಂದು (ಮೇ 3) ಮೇಘನಾ 32ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಎಲ್ಲ ಕಡೆಗಳಿಂದಲೂ ಶುಭಾಶಯಗಳು ಬರುತ್ತಿವೆ.

2009ರಲ್ಲಿ ತೆರೆಗೆ ಬಂದ ತೆಲುಗು ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದರು ಮೇಘನಾ ರಾಜ್. ಇದಾದ ಬಳಿಕ 2010ರ ‘ಪುಂಡ’ ಚಿತ್ರದ ಮೂಲಕ ಕನ್ನಡದ ಪ್ರೇಕ್ಷಕರಿಗೆ ಪರಿಚಯವಾದರು. ನಂತರ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿ ಮೇಘನಾ ಭೇಷ್ ಎನಿಸಿಕೊಂಡರು. 2013ರಲ್ಲಿ ತೆರೆಗೆ ಬಂದ ‘ರಾಜ ಹುಲಿ’ ಚಿತ್ರದಲ್ಲಿ ಯಶ್​ಗೆ ಜತೆಯಾಗಿ ಮೇಘನಾ ನಟಿಸಿದರು. ಈ ಸಿನಿಮಾದಿಂದ ಅವರ ಖ್ಯಾತಿ ಮತ್ತಷ್ಟು ಹೆಚ್ಚಿತು. ನಂತರ ಅವರಿಗೆ ಕನ್ನಡದಿಂದ ಹೆಚ್ಚು ಆಫರ್​ಗಳು ಬಂದವು.

ಮೇಘನಾ ರಾಜ್ ಹಾಗೂ ಚಿರು ಅವರದ್ದು ಪ್ರೇಮ ವಿವಾಹ. ಆರಂಭದಲ್ಲಿ ಗೆಳೆಯರಾಗಿದ್ದ ಇವರು ನಂತರ ಪ್ರೇಮಿಗಳಾದರು. 2018ರ ಏಪ್ರಿಲ್ 29 ಹಾಗೂ ಮೇ 2ರಂದು ಅನುಕ್ರಮವಾಗಿ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು. ಆ ಬಳಿಕ ಅವರು ಸಿನಿಮಾ ಕೆಲಸಗಳಿಂದ ಹಿಂದೆ ಸರಿಯಲಿಲ್ಲ. ‘ಇರುವುದೆಲ್ಲವ ಬಿಟ್ಟು’ ಸಿನಿಮಾದಲ್ಲಿ ಬೋಲ್ಡ್ ಪಾತ್ರ ಮಾಡಿ ಸೈ ಎನಿಸಿಕೊಂಡರು.

ದುರಾದೃಷ್ಟ ಎಂದರೆ 2020ರ ಜೂನ್ 7ರಂದು ಹೃದಯಾಘಾತದಿಂದ ಚಿರು ಅಗಲಿದರು. ಆಗ ಮೇಘನಾ ರಾಜ್​ ಗರ್ಭಿಣಿ. ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡು ಚಿರುವನ್ನು ಕಳುಹಿಸಿಕೊಟ್ಟರು ಮೇಘನಾ. ಆ ಬಳಿಕ ಜ್ಯೂ. ಚಿರು ಆಗಮನವಾಯಿತು. ನಂತರ ಅವರ ಕುಟುಂಬದಲ್ಲಿ ಮತ್ತೆ ನಗು ಅರಳಿದೆ.

View this post on Instagram

A post shared by Meghana Raj Sarja (@megsraj)

ಚಿರಂಜೀವಿ ಸರ್ಜಾ ಹಾಗೂ ಮೇಘನಾ ನಡುವೆ ಸುಮಾರು ಆರು ವರ್ಷಗಳ ವಯಸ್ಸಿನ ಅಂತರ ಇತ್ತು. ಮೇಘನಾ ಜನಿಸಿದ್ದು 1990ರ ಮೇ 3ರಂದು. ಚಿರಂಜೀವಿ ಹುಟ್ಟಿದ್ದು 1984ರ ಅಕ್ಟೋಬರ್ 17ರಂದು. ಈಗ ಚಿರು ಇಲ್ಲ ಎಂಬ ನೋವು ಮೇಘನಾಗೆ ಈಗಲೂ ಕಾಡುತ್ತಲೇ ಇದೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ‘ಡಾನ್ಸಿಂಗ್​ ಚಾಂಪಿಯನ್​’ ಶೋ​ ನಡುವೆ ಮೇಘನಾ ರಾಜ್​ ಫೋಟೋಶೂಟ್​; ಇಲ್ಲಿವೆ ಚೆಂದದ ಫೋಟೋಗಳು

ವೇದಿಕೆ ಮೇಲೆ ಜ್ಯೂ. ಚಿರುಗಾಗಿ ಹುಡುಕಾಡಿದ ಮೇಘನಾ ರಾಜ್

Published On - 6:55 am, Tue, 3 May 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ