ರಾಜಮೌಳಿ ಜತೆ ಕೆಲಸ ಮಾಡಿದ್ದಕ್ಕೆ ರಾಮ್​ಚರಣ್ ಹೊಸ​ ಚಿತ್ರಕ್ಕೆ ಸೋಲು?; ಆತಂಕದಲ್ಲಿ ಜ್ಯೂ.ಎನ್​ಟಿಆರ್​ ಫ್ಯಾನ್ಸ್

TV9 Digital Desk

| Edited By: Rajesh Duggumane

Updated on: May 02, 2022 | 10:15 PM

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಸಿನಿಮಾದಲ್ಲಿ ರಾಮ್​ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ತೆರೆಗೆ ಬಂದ ರಾಮ್​ ಚರಣ್ ಸಿನಿಮಾ ‘ಆಚಾರ್ಯ’. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮಕಾಡೆ ಮಲಗಿದೆ.

ರಾಜಮೌಳಿ ಜತೆ ಕೆಲಸ ಮಾಡಿದ್ದಕ್ಕೆ ರಾಮ್​ಚರಣ್ ಹೊಸ​ ಚಿತ್ರಕ್ಕೆ ಸೋಲು?; ಆತಂಕದಲ್ಲಿ ಜ್ಯೂ.ಎನ್​ಟಿಆರ್​ ಫ್ಯಾನ್ಸ್
ರಾಮ್ ಚರಣ್​-ರಾಜಮೌಳಿ

ನಿರ್ದೇಶಕ ರಾಜಮೌಳಿ ಅವರು (SS Rajamouli) ಬಣ್ಣದ ಲೋಕದಲ್ಲಿ ಮಾಡಿದ ಮೋಡಿ ತುಂಬಾನೇ ದೊಡ್ಡದು. ಅವರ ಜತೆ ಕೆಲಸ ಮಾಡಬೇಕು ಎಂಬುದು ಅನೇಕರ ಕನಸು. ಆದರೆ, ಎಲ್ಲರಿಗೂ ಆ ಅವಕಾಶ ಸಿಗುವುದಿಲ್ಲ. ರಾಜಮೌಳಿ ನಿರ್ದೇಶನದ ಸಿನಿಮಾ ತೆರೆಗೆ ಬಂತು ಎಂದಾದರೆ ಗೆಲುವು ಖಚಿತ. ಆದರೆ, ಈ ನಿರ್ದೇಶಕನ ಜತೆ ಕೆಲಸ ಮಾಡಿದ ನಂತರ ಬೇರೆ ನಿರ್ದೇಶಕರ ಜತೆ ಕೈ ಜೋಡಿಸಿದರೆ ಸೋಲು ಉಣ್ಣಬೇಕಾಗುತ್ತದೆ ಎನ್ನುವ ಮೂಢನಂಬಿಕೆ ಟಾಲಿವುಡ್​ನಲ್ಲಿದೆ (Tollywood). ಕಾಕತಾಳಿಯವೋ ಎಂಬಂತೆ, ಪ್ರತಿ ಬಾರಿಯೂ ಇದು ಸಾಬೀತಾಗುತ್ತಿದೆ. ಈಗ ಈ ವಿಚಾರ ಮತ್ತೆ ಮುನ್ನೆಲೆಗೆ ಬರಲು ಕಾರಣ ‘ಆಚಾರ್ಯ’ ಸಿನಿಮಾ (Acharya Movie).

2001ರಲ್ಲಿ ರಾಜಮೌಳಿ ನಿರ್ದೇಶಿಸಿದ ‘ಸ್ಟೂಡೆಂಟ್​ ನಂಬರ್​ 1’ ಚಿತ್ರಕ್ಕೆ ಜ್ಯೂ. ಎನ್​ಟಿಆರ್​ ಹೀರೋ ಆಗಿದ್ದರು. ಆ ಸಿನಿಮಾದಲ್ಲಿ ಜ್ಯೂ. ಎನ್​ಟಿಆರ್​​ಗೆ ದೊಡ್ಡ ಗೆಲುವು ಸಿಕ್ಕಿತು. ಆದರೆ ನಂತರ ಅವರು ನಟಿಸಿದ ‘ಸುಬ್ಬ’ ಸಿನಿಮಾ ಫ್ಲಾಪ್​ ಆಯಿತು. ಬಳಿಕ ರಾಜಮೌಳಿ ಮತ್ತು ಜ್ಯೂ. ಎನ್​ಟಿಆರ್ ಜೊತೆಯಾಗಿ ‘ಸಿಂಹಾದ್ರಿ’ ಸಿನಿಮಾ ಮಾಡಿ ಯಶಸ್ಸು ಕಂಡರು. ಆ ಬಳಿಕ ಜ್ಯೂ. ಎನ್​ಟಿಆರ್ ನಟಿಸಿದ ‘ಆಂಧ್ರಾವಾಲ’ ಸೋತು ಸುಣ್ಣವಾಯಿತು. ರಾಜಮೌಳಿ ಜೊತೆ ‘ಮಗಧೀರ’ ಚಿತ್ರ ಮಾಡಿ ಗೆದ್ದಿದ್ದ ರಾಮ್​ ಚರಣ್​ ಅವರು ನಂತರ ‘ಆರೆಂಜ್’​ ಸಿನಿಮಾದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದರು. ಪ್ರಭಾಸ್​ ವಿಚಾರದಲ್ಲೂ ಈ ನಂಬಿಕೆ ನಿಜವಾಗಿದೆ. ರಾಜಮೌಳಿ ನಿರ್ದೇಶಿಸಿದ ‘ಚತ್ರಪತಿ’ ಸಿನಿಮಾದಲ್ಲಿ ಪ್ರಭಾಸ್​ಗೆ ಗೆಲುವು ಸಿಕ್ಕಿತ್ತು. ನಂತರ ಮಾಡಿದ ‘ಪೌರ್ಣಮಿ’ ಚಿತ್ರದಲ್ಲಿ ಅವರು ಸೋಲು ಕಂಡರು. ‘ಬಾಹುಬಲಿ’ ಬಳಿಕ ಪ್ರಭಾಸ್​ ನಟಿಸಿದ ‘ಸಾಹೋ’, ‘ರಾಧೆ ಶ್ಯಾಮ್​’ ಚಿತ್ರ ಫ್ಲಾಪ್ ಆಯಿತು.

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಸಿನಿಮಾದಲ್ಲಿ ರಾಮ್​ ಚರಣ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ತೆರೆಗೆ ಬಂದ ರಾಮ್​ ಚರಣ್ ಸಿನಿಮಾ ‘ಆಚಾರ್ಯ’. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮಕಾಡೆ ಮಲಗಿದೆ. ಬುಕ್​ ಮೈ ಶೋನಲ್ಲಿ ಕೇವಲ 59 ರೇಟಿಂಗ್ ಪಡೆದುಕೊಂಡಿದೆ. ರಾಮ್​ ಚರಣ್ ಹಾಗೂ ಚಿರಂಜೀವಿ ಒಟ್ಟಾಗಿ ನಟಿಸಿದ ಈ ಸಿನಿಮಾ ಹೀನಾಯವಾಗಿ ಸೋತಿತಲ್ಲ ಎನ್ನುವ ಬೇಸರ ಫ್ಯಾನ್ಸ್​ಗೆ ಇದೆ. ಈ ಮಧ್ಯೆ ಎಲ್ಲರೂ ರಾಜಮೌಳಿ ನೆನಪಿಸಿಕೊಳ್ಳುತ್ತಿದ್ದಾರೆ. ‘ರಾಮ್​ ಚರಣ್ ಸೋಲಿಗೆ ರಾಜಮೌಳಿ ಜತೆ ಕೆಲಸ ಮಾಡಿದ್ದೇ ಕಾರಣ’ ಎಂದು ಫ್ಯಾನ್ಸ್ ಶಪಿಸುತ್ತಿದ್ದಾರೆ.

ಜ್ಯೂ.ಎನ್​ಟಿಆರ್​ ಕೂಡ ‘ಆರ್​ಆರ್​ಆರ್’ ಸಿನಿಮಾದಲ್ಲಿ ನಟಿಸಿದ್ದರು. ಅವರ ಮುಂದಿನ ಸಿನಿಮಾಗೆ ಸದ್ಯ ಸಿದ್ಧತೆ ನಡೆಯುತ್ತಿದೆ. ಈಗ ರಾಮ್​ ಚರಣ್​ ವಿಚಾರದಲ್ಲಿ ಇತಿಹಾಸ ಮರುಕಳಿಸಿರುವುದರಿಂದ ಜ್ಯೂ.ಎನ್​ಟಿಆರ್​ ಫ್ಯಾನ್ಸ್ ಆತಂಕಗೊಂಡಿದ್ದಾರೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಬಂಕಿಮ್​ ಚಂದ್ರ ಚಟರ್ಜಿ ಬಯೋಪಿಕ್​​: ಸ್ಕ್ರಿಪ್ಟ್​ ಕೆಲಸ ಒಪ್ಪಿಕೊಂಡ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ 

‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada