- Kannada News Photo gallery Farhan Akhtar wife Shibani Dandekar refuses pregnant rumours and posts pic
Shibani Dandekar: ಮದುವೆಯಾಗಿ ಕೆಲವೇ ದಿನಕ್ಕೆ ಪ್ರೆಗ್ನೆನ್ಸಿ ಗಾಸಿಪ್; ನಟಿಯ ಉತ್ತರ ಏನು?
Farhan Akhtar: ಬಾಲಿವುಡ್ನ ಖ್ಯಾತ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಹಾಗೂ ಶಿಬಾನಿ ದಂಡೇಕರ್ ಇತ್ತೀಚೆಗೆ ವಿವಾಹವಾಗಿದ್ದರು. ಈ ಸಂದರ್ಭದ ಫೋಟೋ ನೋಡಿದ ಫ್ಯಾನ್ಸ್, ಶಿಬಾನಿ ಪ್ರೆಗ್ನಂಟ್ ಆಗಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿಬಾನಿ, ಎಲ್ಲಾ ಗಾಸಿಪ್ಗಳನ್ನು ತಳ್ಳಿ ಹಾಕಿದ್ದು, ಅವೆಲ್ಲಾ ಸುಳ್ಳು ಎಂದಿದ್ದಾರೆ.
Updated on: Mar 03, 2022 | 7:00 AM

ಬಾಲಿವುಡ್ನಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿರುವ ತಾರಾ ಜೋಡಿಯೆಂದರೆ ಅದು ಫರ್ಹಾನ್ ಅಖ್ತರ್ ಹಾಗೂ ಶಿಬಾನಿ ದಂಡೇಕರ್.

ನಟ, ನಿರ್ದೇಶಕನಾಗಿರುವ ಫರ್ಹಾನ್, ಖ್ಯಾತ ಸಾಹಿತಿ ಜಾವೇದ್ ಅಖ್ತರ್ ಪುತ್ರ. ಫರ್ಹಾನ್ಗೆ ಇದು ಎರಡನೇ ಮದುವೆ. ಮೂರು ವರ್ಷಗಳಿಂದ ಜತೆಯಾಗಿ ಸುತ್ತಾಡುತ್ತಿದ್ದ ಫರ್ಹಾನ್- ಶಿಬಾನಿ ಇತ್ತೀಚೆಗಷ್ಟೇ ವಿವಾಹವಾಗಿದ್ದರು.

ಫೆಬ್ರವರಿ 19ರಂದು ಸರಳ ಸಮಾರಂಭದಲ್ಲಿ ಫರ್ಹಾನ್- ಶಿಬಾನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಈರ್ವರ ಮದುವೆಯ ಚಿತ್ರಗಳು ವೈರ;ಲ್ ಆಗಿದ್ದವು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಹೊಸ ವಿಷಯವೊಂದರ ಚರ್ಚೆ ನಡೆಸಿದ್ದು.

ಮದುವೆಗೂ ಮುನ್ನ ಫರ್ಹಾನ್ ಜತೆ ಲವ್ ಇನ್ ಸಂಬಂಧದಲ್ಲಿದ್ದ ಶಿಬಾನಿ, ಪ್ರೆಗ್ನೆಂಟ್ ಆಗಿದ್ದಾರೆಯೇ ಎಂದು ಫ್ಯಾನ್ಸ್ ಕೇಳತೊಡಗಿದ್ದರು. ಇದಕ್ಕೆ ವಿವಾಹದ ಸಂದರ್ಭದಲ್ಲಿ ಅವರ ಹೊಟ್ಟೆ ಬೇಬಿ ಬಂಪ್ ರೀತಿ ಕಂಡಿದ್ದು ಕಾರಣವಾಗಿತ್ತು.

ಈ ರೂಮರ್ಗೆ ಉತ್ತರಿಸಿರುವ ಶಿಬಾನಿ, ತಮ್ಮ ಜಿಮ್ ಫೋಟೋ ಹಂಚಿಕೊಂಡಿದ್ದಾರೆ. ನಾನು ಮಹಿಳೆ, ನಾನು ಪ್ರೆಗ್ನೆಂಟ್ ಅಲ್ಲ ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ ಎಲ್ಲಾ ಗಾಸಿಪ್ಗಳಿಗೆ ಶಿಬಾನಿ ತೆರೆ ಎಳೆದಿದ್ದಾರೆ.



















