ಭಾರತದಲ್ಲಿ ಮೂರು ದಿನಕ್ಕೆ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಡಾಕ್ಟರ್​ ಸ್ಟ್ರೇಂಜ್’ ಸೀಕ್ವೆಲ್

TV9 Digital Desk

| Edited By: Rajesh Duggumane

Updated on: May 09, 2022 | 2:28 PM

ಮೊದಲ ದಿನ ಈ ಸಿನಿಮಾ 28.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಶನಿವಾರ (ಮೇ 7) 25.75 ಕೋಟಿ ರೂಪಾಯಿ ಹಾಗೂ ಭಾನುವಾರ (25.40) ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 80 ಕೋಟಿ ರೂಪಾಯಿ ಸಮೀಪಿಸಿದೆ.

ಭಾರತದಲ್ಲಿ ಮೂರು ದಿನಕ್ಕೆ 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಡಾಕ್ಟರ್​ ಸ್ಟ್ರೇಂಜ್’ ಸೀಕ್ವೆಲ್
‘ಡಾಕ್ಟರ್​ ಸ್ಟ್ರೇಂಜ್’

ಮಾರ್ವೆಲ್​ ಸಿನಿಮಾಗಳನ್ನು (Marvel Studio) ಭಾರತದ ಸಿನಿಪ್ರಿಯರು ನೋಡೋಕೆ ಹೆಚ್ಚು ಆಸಕ್ತಿ ತೋರುತ್ತಾರೆ. ಈಗ ‘ಡಾಕ್ಟರ್​ ಸ್ಟ್ರೇಂಜ್ ಇನ್ ದಿ ಮಲ್ಟಿವರ್ಸ್​ ಆಫ್​ ಮ್ಯಾಡ್​ನೆಸ್​’ ಸಿನಿಮಾ (Doctor Strange in the Multiverse of Madness) ಭಾರತದಲ್ಲಿ ಮೂರು ದಿನಕ್ಕೆ ಒಳ್ಳೆಯ ಕಲೆಕ್ಷನ್ ಮಾಡಿದೆ. ಮೇ 6ರಂದು ರಿಲೀಸ್​ ಆದ ಈ ಚಿತ್ರ 79.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಮೊದಲ ವಾರಾಂತ್ಯಕ್ಕೆ ಒಳ್ಳೆಯ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ‘ಡಾಕ್ಟರ್​ ಸ್ಟ್ರೇಂಜ್’ ಸಿನಿಮಾದ ಸೀಕ್ವೆಲ್ ಇದಾಗಿದೆ.

ಮೊದಲ ದಿನ ಈ ಸಿನಿಮಾ 28.35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಶನಿವಾರ (ಮೇ 7) 25.75 ಕೋಟಿ ರೂಪಾಯಿ ಹಾಗೂ ಭಾನುವಾರ (25.40) ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 80 ಕೋಟಿ ರೂಪಾಯಿ ಸಮೀಪಿಸಿದೆ. ಶೀಘ್ರವೇ ಚಿತ್ರ 100 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

ಇದನ್ನೂ ಓದಿ

ಮೊದಲ ದಿನ ಈ ಸಿನಿಮಾ ಒಳ್ಳೆಯ ಓಪನಿಂಗ್ ಪಡೆದುಕೊಂಡಿತ್ತು. ಈ ಮೊದಲು ತೆರೆಗೆ ಬಂದಿದ್ದ ಮಾರ್ವೆಲ್​ ಸ್ಟುಡಿಯೋಸ್​ನ ‘ಸ್ಪೈಡರ್​ ಮ್ಯಾನ್: ನೋ ವೇ ಹೋಂ’ ಸಿನಿಮಾ ಮೊದಲ ದಿನ 33 ಕೋಟಿ ರೂಪಾಯಿ ಬಾಚಿಕೊಂಡಿತ್ತು. ಈ ಸಿನಿಮಾಗಿಂತ ಸುಮಾರು ಆರು ಕೋಟಿ ರೂಪಾಯಿ ಕಡಿಮೆ ಗಳಿಕೆ ಮಾಡಿದೆ. ‘ಡಾಕ್ಟರ್​ ಸ್ಟ್ರೇಂಜ್’ ಸೀಕ್ವೆಲ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ದಿನ ಕಳೆದಂತೆ ಕಲೆಕ್ಷನ್ ತಗ್ಗಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ತಗ್ಗಬಹುದು.

ಬೆನೆಡಿಕ್ಟ್​ ಕಂಬರ್​​ಬ್ಯಾಚ್ ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ಅತಿ ಉತ್ತಮ ಓಪನಿಂಗ್ ಪಡೆದ ನಾಲ್ಕನೇ ಹಾಲಿವುಡ್​ ಸಿನಿಮಾ ಇದಾಗಿದೆ. ‘ಅವೆಂಜರ್ಸ್​: ಎಂಡ್​ಗೇಮ್​’ (53.10 ಕೋಟಿ ರೂಪಾಯಿ), ‘ಸ್ಪೈಡರ್​ ಮ್ಯಾನ್​: ನೋ ವೇ ಹೋಂ’ (32.67 ಕೋಟಿ ರೂಪಾಯಿ) ಮತ್ತು ‘ಅವೆಂಜರ್ಸ್​: ಇನ್​​ಫಿನಿಟಿ ವಾರ್’ (31.30 ಕೋಟಿ ರೂಪಾಯಿ) ಈ ಮೊದಲು ಒಳ್ಳೆಯ ಓಪನಿಂಗ್​ ಪಡೆದ ಹಾಲಿವುಡ್​ ಚಿತ್ರಗಳಾಗಿವೆ.

‘ಡಾಕ್ಟರ್ ಸ್ಟ್ರೇಂಜ್’ ಸೀಕ್ವೆಲ್​ನಿಂದ ಯಶ್ ನಟನೆಯ ‘ಕೆಜಿಎಫ್ 2’ ಕಲೆಕ್ಷನ್​ಗೆ ಕೊಂಚ ಹೊಡೆತ ಬೀಳುವ ಸಾಧ್ಯತೆ ಇದೆ. ಈಗಾಗಲೇ ‘ಕೆಜಿಎಫ್ 2’ ಹಿಂದಿಯಲ್ಲಿ 400 ಕೋಟಿ ರೂಪಾಯಿ ಕ್ಲಬ್​ ಸೇರಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada