ಮಕ್ಕಳ ಜತೆಗಿನ ವಿಶೇಷ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್; ಇದಕ್ಕಿದೆ ಮಹತ್ವದ ಕಾರಣ
2016ರ ಆಗಸ್ಟ್ 12ರಂದು ರಾಧಿಕಾ ಪಂಡಿತ್ ಹಾಗೂ ಯಶ್ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅದೇ ವರ್ಷ ಡಿಸೆಂಬರ್ 9ರಂದು ಈ ಜೋಡಿಯ ವಿವಾಹ ನೆರವೇರಿತು. 2018ರ ಡಿಸೆಂಬರ್ನಲ್ಲಿ ಆಯ್ರಾ ಜನಿಸಿದರೆ, 2019ರ ಅಕ್ಟೋಬರ್ 30ರಂದು ಯಥರ್ವ್ ಹುಟ್ಟಿದ.
ನಟಿ ರಾಧಿಕಾ ಪಂಡಿತ್ (Radhika Pandit) ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್. ಇನ್ಸ್ಟಾಗ್ರಾಮ್ನಲ್ಲಿ ವಾರಕ್ಕೆ ಒಂದಾದರೂ ಫೋಟೋ ಹಂಚಿಕೊಳ್ಳುವ ಅಭ್ಯಾಸವನ್ನು ಅವರು ಬೆಳೆಸಿಕೊಂಡಿದ್ದಾರೆ. ಕುಟುಂಬದ ಜತೆ ಹಬ್ಬ ಆಚರಿಸಿಕೊಂಡಿದ್ದು ಅಥವಾ ಮಕ್ಕಳ ತುಂಟಾಟಿಕೆ ಹೀಗೆ ಹತ್ತು ಹಲವು ರೀತಿಯ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ. ಒಟ್ಟಿನಲ್ಲಿ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ನಟನೆಯಿಂದ ಅವರ ದೂರ ಉಳಿದಿದ್ದಾರೆ ಎನ್ನುವ ಬೇಸರ ಅವರ ಫ್ಯಾನ್ಸ್ಗೆ ಯಾವಾಗಲೂ ಕಾಡುತ್ತಿರುತ್ತದೆ. ಆದರೆ, ಅವರು ಸೋಶಿಯಲ್ ಮೀಡಿಯಾ (Social Media) ಮೂಲಕ ಸಂಪರ್ಕದಲ್ಲಿದ್ದಾರೆ ಎನ್ನುವ ಖುಷಿ ಅಭಿಮಾನಿಗಳದ್ದು. ಈಗ ಅವರು ಮಕ್ಕಳು ಹಾಗೂ ತಾಯಿಯ ಜತೆ ಇರುವ ಪ್ರತ್ಯೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಮಹತ್ವದ ಕಾರಣವೂ ಇದೆ. ಈ ಫೋಟೋಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ವಿಶ್ವ ತಾಯಂದಿರ ದಿನವನ್ನು (ಮೇ 8) ಎಲ್ಲೆಡೆ ಆಚರಿಸಲಾಯಿತು. ಸೆಲೆಬ್ರಿಟಿಗಳು ಕೂಡ ಇದಕ್ಕೆ ಹೊರತಾಗಿಲ್ಲ. ಅಮ್ಮನ ಫೋಟೋ ಹಂಚಿಕೊಂಡು ಎಲ್ಲರೂ ಸಂಭ್ರಮಿಸಿದ್ದಾರೆ. ಇನ್ನೂ ಕೆಲ ಸೆಲೆಬ್ರಿಟಿಗಳಿಗೆ ತಾಯಿಯ ಸ್ಥಾನ ಸಿಕ್ಕಿದೆ. ಅಂಥವರು ಮಕ್ಕಳ ಫೋಟೋ ಹಂಚಿಕೊಂಡು ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ರಾಧಿಕಾ ಪಂಡಿತ್ ಕೂಡ ವಿಶ್ವ ತಾಯಂದಿರ ದಿನವನ್ನು ನೆನಪಿಸಿಕೊಂಡಿದ್ದಾರೆ.
2016ರ ಆಗಸ್ಟ್ 12ರಂದು ರಾಧಿಕಾ ಪಂಡಿತ್ ಹಾಗೂ ಯಶ್ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಅದೇ ವರ್ಷ ಡಿಸೆಂಬರ್ 9ರಂದು ಈ ಜೋಡಿಯ ವಿವಾಹ ನೆರವೇರಿತು. 2018ರ ಡಿಸೆಂಬರ್ನಲ್ಲಿ ಆಯ್ರಾ ಜನಿಸಿದರೆ, 2019ರ ಅಕ್ಟೋಬರ್ 30ರಂದು ಯಥರ್ವ್ ಹುಟ್ಟಿದ. ರಾಧಿಕಾ ತಾಯಿ ಆಗಿ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಆಯ್ರಾ ಹಾಗೂ ಯಥರ್ವ್ ಜತೆ ಬೀಚ್ನಲ್ಲಿ ಆಟ ಆಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ಮತ್ತೊಂದು ಫೋಟೋದಲ್ಲಿ ಅವರು ತಾಯಿ ಜತೆ ನಿಂತಿದ್ದಾರೆ. ರಾಧಿಕಾ ತಾಯಿ ಹೆಸರು ಮಂಗಳಾ ಪಂಡಿತ್. ರಾಧಿಕಾಗೆ ತಾಯಿ ಮೇಲೆ ವಿಶೇಷ ಗೌರವ ಹಾಗೂ ಪ್ರೀತಿ ಇದೆ. ರಾಧಿಕಾ ವೃತ್ತಿ ಬದುಕಿಗೆ ಅವರು ಬೆಂಬಲವಾಗಿ ನಿಂತಿದ್ದರು. ಹೀಗಾಗಿ, ರಾಧಿಕಾ ಪಂಡಿತ್ ಅವರು ಮಂಗಳಾ ಫೋಟೋವನ್ನು ಹಂಚಿಕೊಳ್ಳುವ ಮೂಲಕ ವಿಶೇಷ ಪ್ರೀತಿ ತೋರಿದ್ದಾರೆ. ಈ ಫೋಟೋಗೆ ನಾನಾ ರೀತಿಯಲ್ಲಿ ಕಮೆಂಟ್ಗಳು ಬರುತ್ತಿವೆ.