AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಶಿಯಲ್ ಮೀಡಿಯಾದಲ್ಲಿ ಹೀಟ್ ಹೆಚ್ಚಿಸಿದ ಸಮಂತಾ; ಹೊಸ ಫೋಟೋ ಇಲ್ಲಿದೆ

ಈ ಬಾರಿ ಪಿಕಾಕ್ ಹೆಸರಿನ ಮ್ಯಾಗಜಿನ್​ ಫೋಟೋಶೂಟ್​ನಲ್ಲಿ ಸಮಂತಾ ಅವರು ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಸಖತ್​ ಹಾಟ ಅವತಾರ ತಾಳಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹೀಟ್ ಹೆಚ್ಚಿಸಿದ ಸಮಂತಾ; ಹೊಸ ಫೋಟೋ ಇಲ್ಲಿದೆ
ಸಮಂತಾ Picture Credit: Peacock Magazine
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 07, 2022 | 5:08 PM

ನಟಿ ಸಮಂತಾ ಅವರ (Samantha) ವೃತ್ತಿ ಜೀವನ ಹೊಸ ಹಾದಿಯಲ್ಲಿ ಸಾಗುತ್ತಿದೆ. ಅವರಿಗೆ ಇರುವ ಬೇಡಿಕೆ ದಿನ ಕಳೆದಂತೆ ಹೆಚ್ಚುತ್ತಿದೆ. ಸಮಂತಾ ಮದುವೆ ನಂತರದಲ್ಲಿ ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆದರು. ವಿಚ್ಛೇದನದ ನಂತರ ಅವರಿಗೆ ನಾನಾ ರೀತಿಯ ಆಫರ್​ಗಳು ಬರೋಕೆ ಆರಂಭ ಆದವು. ಸಿಕ್ಕ ಎಲ್ಲಾ ಪಾತ್ರಕ್ಕೆ ನ್ಯಾಯ ಒದಗಿಸುತ್ತಿದ್ದಾರೆ ಸಮಂತಾ. ‘ದಿ ಫ್ಯಾಮಿಲಿ ಮ್ಯಾನ್ 2’ (The Family Man 2) ವೆಬ್​ ಸೀರಿಸ್​​ನಲ್ಲಿ ಬೋಲ್ಡ್ ಪಾತ್ರ ಮಾಡಿದ್ದ ಅವರು ‘ಪುಷ್ಪ’ ಚಿತ್ರದಿಂದ (Pushpa Movie) ಹೀಟ್ ಹೆಚ್ಚಿಸಿದರು. ‘ಹೂ ಅಂತೀಯಾ ಮಾವ..’ ಹಾಡಿನಲ್ಲಿ ಅವರ ಮಾದಕ ಲುಕ್ ಕಂಡು ಪಡ್ಡೆಗಳು ಹುಚ್ಚೆದ್ದು ಕುಣಿದರು. ಸೋಶಿಯಲ್​ ಮೀಡಿಯಾದಲ್ಲಿ ಸಮಂತಾ ಹೊಸಹೊಸ ಫೋಟೋ ಮೂಲಕ ಮಿಂಚುತ್ತಿದ್ದಾರೆ.

ಸಮಂತಾ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸಿನಿಮಾದಿಂದ ಸಿನಿಮಾಗೆ ಅವರು ಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದಲ್ಲದೆ, ಹಲವು ಮ್ಯಾಗಜಿನ್​​ ಫೋಟೋಶೂಟ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಪಿಕಾಕ್ ಹೆಸರಿನ ಮ್ಯಾಗಜಿನ್​ ಫೋಟೋಶೂಟ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇದಕ್ಕಾಗಿ ಸಖತ್​ ಹಾಟ್ ಅವತಾರ ತಾಳಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿವೆ.

1 ಕೋಟಿ ವೀಕ್ಷಣೆ ಕಂಡ ಯಶೋದ ಫಸ್ಟ್​ ಗ್ಲಿಂಪ್ಸ್ 

ಇದನ್ನೂ ಓದಿ
Image
ವೃತ್ತಿಜೀವನದಲ್ಲೂ ಮಾಜಿ ಗಂಡನಿಗೆ ಎದುರಾಳಿಯಾಗಿ ನಿಂತ ಸಮಂತಾ; ನಾಗ ಚೈತನ್ಯ ಚಿತ್ರಕ್ಕೆ ‘ಯಶೋದ’ ಫೈಟ್​
Image
‘ಹೂ ಅಂತಿಯಾ ಮಾವ’ ಹಾಡಿಗೆ ವಿರಾಟ್ ಕೊಹ್ಲಿ ಡ್ಯಾನ್ಸ್ ನೋಡಿ ಸಮಂತಾ ಹೇಳಿದ್ದೇನು?  
Image
‘ಸ್ಟ್ರಾಂಗ್​ ಬಾಡಿ, ಸ್ಟ್ರಾಂಗ್​ ಮನಸ್ಸು’; ವಿಡಿಯೋ ಸಹಿತ ಸಾಕ್ಷಿ ತೋರಿಸಿದ ನಟಿ ಸಮಂತಾ
Image
ಏಪ್ರಿಲ್ 3ಕ್ಕಾಗಿ ಕಾದಿದ್ದಾರೆ ಕೃತಿ ಶೆಟ್ಟಿ; ಇದಕ್ಕಿದೆ ಮಹತ್ವದ ಕಾರಣ

ಏಪ್ರಿಲ್ 4ರಂದು ಸಮಂತಾ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ‘ಯಶೋದ’ ಸಿನಿಮಾದ ಫಸ್ಟ್​ ಗ್ಲಿಂಪ್ಸ್ ವಿಡಿಯೋ ಹಂಚಿಕೊಂಡಿದ್ದರು. ಈ ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಭಿನ್ನ ಶೈಲಿಯಲ್ಲಿ ಈ ವಿಡಿಯೋ ಮೂಡಿ ಬಂದಿದೆ. ಇದು 1 ಕೋಟಿಗೂ ಅಧಿಕಬಾರಿ ವೀಕ್ಷಣೆ ಕಂಡಿದೆ. ಚಿತ್ರದ ಮುಖ್ಯ ಪಾತ್ರಧಾರಿ (ಸಮಂತಾ) ಒಂದು ಕೊಠಡಿಯಲ್ಲಿ ಮಲಗಿದ್ದಾಳೆ. ಆಕೆ ಬೆಡ್​ನಿಂದ ಎದ್ದ ತಕ್ಷಣ ತಾನು ತೊಟ್ಟ ಬಟ್ಟೆಯನ್ನು ನೋಡಿಕೊಳ್ಳುತ್ತಾಳೆ. ಕೈಗೆ ಏನೋ ಬೆಲ್ಟ್​ ಕಟ್ಟಲಾಗಿದೆ. ಆಕೆಗೆ ಎಲ್ಲವೂ ಹೊಸ ರೀತಿಯಲ್ಲಿ ಕಾಣುತ್ತಿದೆ. ಬೆಡ್​ನಿಂದ ಇಳಿದು ಬರುವ ಅವಳು, ಕಿಟಕಿಯ ಹೊರ ಭಾಗದಲ್ಲಿರುವ ಪಾರಿವಾಳ ಮುಟ್ಟೋಕೆ ತೆರಳುತ್ತಾಳೆ. ತಕ್ಷಣ ಕ್ಯಾಮೆರಾ ಜೂಮ್​ಔಟ್ ಆಗುತ್ತದೆ. ಗಲ್ಲಿ ರೀತಿಯ ದಾರಿಯಲ್ಲಿ ಕ್ಯಾಮೆರಾ ಸಾಗುತ್ತದೆ. ನಂತರ ‘ಯಶೋದ’ ಎಂದು ಟೈಟಲ್ ಕಾರ್ಡ್ ತೋರಿಸಲಾಗುತ್ತದೆ.

‘ಯಶೋದ’ ಸಿನಿಮಾವನ್ನು ಹರಿ ಶಂಕರ್ ಹಾಗೂ ಹರೀಶ್ ನಾರಾಯಣ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀದೇವಿ ಮೂವೀಸ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಉನ್ನಿ ಮುಕುಂದನ್​ ಮತ್ತು ವರಲಕ್ಷ್ಮೀ ಶರತ್​ಕುಮಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಯಶೋದ’ ಆಗಸ್ಟ್ 12ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಯಾವ ವಿಚಾರವನ್ನು ಹೇಳಲಾಗುತ್ತಿದೆ ಎನ್ನುವ ಕುತೂಹಲ ಸದ್ಯದ್ದು.

ಸಮಂತಾ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಕಾತುವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ. ವಿಜಯ್​ ಸೇತುಪತಿ ಹಾಗೂ ನಯನತಾರಾ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಹಲವು ಸಿನಿಮಾಗಳಲ್ಲಿ ಸಮಂತಾ ನಟಿಸುತ್ತಿದ್ದಾರೆ.