Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃತ್ತಿಜೀವನದಲ್ಲೂ ಮಾಜಿ ಗಂಡನಿಗೆ ಎದುರಾಳಿಯಾಗಿ ನಿಂತ ಸಮಂತಾ; ನಾಗ ಚೈತನ್ಯ ಚಿತ್ರಕ್ಕೆ ‘ಯಶೋದ’ ಫೈಟ್​

ಗಲ್ಲಾಪೆಟ್ಟಿಗೆಯಲ್ಲಿ ನಾಗ ಚೈತನ್ಯ ಹಾಗೂ ಸಮಂತಾ ಮುಖಾಮುಖಿ ಆಗುತ್ತಿದ್ದಾರೆ. ಯಾರ ಸಿನಿಮಾ ಹೆಚ್ಚು ಕಲೆಕ್ಷನ್​ ಮಾಡಲಿದೆ ಎಂಬ ಕೌತುಕ ಮೂಡಿದೆ.

ವೃತ್ತಿಜೀವನದಲ್ಲೂ ಮಾಜಿ ಗಂಡನಿಗೆ ಎದುರಾಳಿಯಾಗಿ ನಿಂತ ಸಮಂತಾ; ನಾಗ ಚೈತನ್ಯ ಚಿತ್ರಕ್ಕೆ ‘ಯಶೋದ’ ಫೈಟ್​
ಸಮಂತಾ - ನಾಗ ಚೈತನ್ಯ
Follow us
TV9 Web
| Updated By: ಮದನ್​ ಕುಮಾರ್​

Updated on:May 06, 2022 | 11:31 AM

ನಟಿ ಸಮಂತಾ ರುತ್​ ಪ್ರಭು (Samantha) ಅವರು ಈಗ ಸಂಪೂರ್ಣವಾಗಿ ಅಕ್ಕಿನೇನಿ ಕುಟುಂಬದ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ. ಮಾಜಿ ಪತಿ ನಾಗ ಚೈತನ್ಯ (Naga Chaitanya) ಜೊತೆಗಿನ ದಾಂಪತ್ಯಕ್ಕೆ ವಿದಾಯ ಹೇಳಿದ ಬಳಿಕ ಅವರ ಬದುಕು ಸಾಕಷ್ಟು ಬದಲಾಗಿದೆ. ನಾಗ ಚೈತನ್ಯಗೆ ಸಂಬಂಧಿಸಿದ ಎಲ್ಲ ಪೋಸ್ಟ್​ಗಳನ್ನು ಕೂಡ ಅವರು ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಿಂದ ಡಿಲೀಟ್​ ಮಾಡಿದ್ದಾರೆ. ಅಷ್ಟರಮಟ್ಟಿಗೆ ಅವರು ದೂರ ಬಂದಿದ್ದಾರೆ. ಇಬ್ಬರ ನಡುವೆ ಯಾವುದೇ ರೀತಿಯ ಒಡನಾಟ ಉಳಿದಿಲ್ಲ. ಆದರೆ ಅವರಿಬ್ಬರು ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದರಿಂದ ಆಗಾಗ ಮುಖಾಮುಖಿ ಆಗಬೇಕಾದ್ದು ಅನಿವಾರ್ಯ. ಈಗ ಅಂಥ ಒಂದು ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಚಿತ್ರರಂಗದಲ್ಲಿ ನಾಗ ಚೈತನ್ಯ ನಟನೆಯ ಸಿನಿಮಾಗೆ ಫೈಟ್​ ನೀಡಲು ಸಮಂತಾ ಸಜ್ಜಾಗಿದ್ದಾರೆ. ಒಂದು ದಿನದ ಅಂತರದಲ್ಲಿ ಈ ಮಾಜಿ ಪತಿ-ಪತ್ನಿಯ ಸಿನಿಮಾ ರಿಲೀಸ್​ ಆಗಲಿದೆ. ಹೌದು, ನಾಗ ಚೈತನ್ಯ ನಟಿಸಿರುವ ‘ಲಾಲ್​ ಸಿಂಗ್​ ಚಡ್ಡಾ’ ಹಾಗೂ ಸಮಂತಾ ರುತ್​ ಪ್ರಭು ಅಭಿನಯದ ‘ಯಶೋದ’ ಸಿನಿಮಾ (Yashoda Movie) ಬಾಕ್ಸ್​ ಆಫೀಸ್​ನಲ್ಲಿ ಫೈಟ್​ ಮಾಡಲು ಬರುತ್ತಿವೆ. ಮುಂದೇನಾಗುತ್ತದೆ ಎಂಬ ಕೌತುಕ ಸಿನಿಪ್ರಿಯರಲ್ಲಿ ಮೂಡಿದೆ.

‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾಗೆ ಆಮಿರ್​ ಖಾನ್​ ಹೀರೋ. ಅದರಲ್ಲಿ ನಾಗ ಚೈತನ್ಯ ಕೂಡ ಒಂದು ಮುಖ್ಯ ಪಾತ್ರ ಮಾಡಿದ್ದಾರೆ. ಅದು ಅತಿಥಿ ಪಾತ್ರ ಆಗಿದ್ದರೂ ಕೂಡ ಅದಕ್ಕೆ ಪ್ರಾಮುಖ್ಯತೆ ಇದೆ. ಹಾಗಾಗಿ ನಾಗ ಚೈತನ್ಯ ಅಭಿಮಾನಿಗಳು ಈ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಸಿನಿಮಾ ಆಗಸ್ಟ್​ 11ರಂದು ಬಿಡುಗಡೆ ಆಗುತ್ತಿದೆ. ಒಂದು ದಿನದ ನಂತರ, ಅಂದರೆ ಆಗಸ್ಟ್​ 12ರಂದು ಸಮಂತಾ ನಟನೆಯ ‘ಯಶೋದ’ ಸಿನಿಮಾ ರಿಲೀಸ್​ ಆಗಲಿದೆ. ಆ ಮೂಲಕ ಮಾಜಿ ಗಂಡ-ಹೆಂಡತಿಯ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಮುಖಾಮುಖಿ ಆಗಲಿವೆ.

ಗುರುವಾರ (ಏಪ್ರಿಲ್ 4) ಸಮಂತಾ ಇನ್​ಸ್ಟಾಗ್ರಾಮ್ ಖಾತೆಯಲ್ಲಿ 37 ಸೆಕೆಂಡ್​ನ ವಿಡಿಯೋ ಹಂಚಿಕೊಂಡಿದ್ದಾರೆ. ಇದು ‘ಯಶೋದ’ ಸಿನಿಮಾದ ಫಸ್ಟ್​ ಗ್ಲಿಂಪ್ಸ್ ವಿಡಿಯೋ. ಈ ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಭಿನ್ನ ಶೈಲಿಯಲ್ಲಿ ಈ ವಿಡಿಯೋ ಮೂಡಿ ಬಂದಿದೆ. ‘ಯಶೋದ’ ಸಿನಿಮಾವನ್ನು ಹರಿ ಶಂಕರ್ ಹಾಗೂ ಹರೀಶ್ ನಾರಾಯಣ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀದೇವಿ ಮೂವೀಸ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಉನ್ನಿ ಮುಕುಂದನ್​ ಮತ್ತು ವರಲಕ್ಷ್ಮೀ ಶರತ್​ಕುಮಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಮಂತಾ ಅವರು ಭರ್ಜರಿ ಆ್ಯಕ್ಷನ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ
Image
ಸಮಂತಾ ನಟನೆಯ ‘ಯಶೋದ’ ಸಿನಿಮಾ ಹೇಗಿರಲಿದೆ?; ಇಲ್ಲಿದೆ ಝಲಕ್
Image
‘ಹೂ ಅಂತಿಯಾ ಮಾವ’ ಹಾಡಿಗೆ ವಿರಾಟ್ ಕೊಹ್ಲಿ ಡ್ಯಾನ್ಸ್ ನೋಡಿ ಸಮಂತಾ ಹೇಳಿದ್ದೇನು?  
Image
‘ಸ್ಟ್ರಾಂಗ್​ ಬಾಡಿ, ಸ್ಟ್ರಾಂಗ್​ ಮನಸ್ಸು’; ವಿಡಿಯೋ ಸಹಿತ ಸಾಕ್ಷಿ ತೋರಿಸಿದ ನಟಿ ಸಮಂತಾ
Image
3 ವರ್ಷದ ಹಿಂದಿನ ಘಟನೆ ನೆನೆದು ಖುಷಿಪಟ್ಟ ಸಮಂತಾ; ಇದು ಮಾಜಿ ಪತಿ ನಾಗ ಚೈತನ್ಯ ಕುರಿತ ವಿಷಯ

‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಲ್ಲಿ ನಾಗ ಚೈತನ್ಯ ಅವರು ಆಮಿರ್​ ಖಾನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ಅವರಿಗೆ 6 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ ಎಂದು ಸುದ್ದಿ ಆಗಿದೆ. ಈ ಸಿನಿಮಾದ ಶೂಟಿಂಗ್ ಮುಗಿದ​ ಬಳಿಕ ಆಮಿರ್​ ಖಾನ್​ ಮತ್ತು ನಾಗ ಚೈತನ್ಯ ನಡುವೆ ಆಪ್ತತೆ ಹೆಚ್ಚಿದೆ. ಈ ಸಿನಿಮಾ ಮೇಲೆ ಆಮಿರ್​ ಖಾನ್​ ಫ್ಯಾನ್ಸ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದು ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಸಿನಿಮಾದ ಹಿಂದಿ ರಿಮೇಕ್​.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:31 am, Fri, 6 May 22