ಸಮಂತಾ ನಟನೆಯ ‘ಯಶೋದ’ ಸಿನಿಮಾ ಹೇಗಿರಲಿದೆ?; ಇಲ್ಲಿದೆ ಝಲಕ್
ಗುರುವಾರ (ಏಪ್ರಿಲ್ 4) ಸಮಂತಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ 37 ಸೆಕೆಂಡ್ನ ವಿಡಿಯೋ ಹಂಚಿಕೊಂಡಿದ್ದಾರೆ. ಇದು ‘ಯಶೋದ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ವಿಡಿಯೋ.

2021ರಲ್ಲಿ ಸಮಂತಾ ಅವರ (Samantha) ಬಾಳಲ್ಲಿ ಒಂದು ಬಿರುಗಾಳಿ ಬೀಸಿತು. ಅವರು ಪತಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದರು. ಇದಾದ ಬಳಿಕ ಸಮಂತಾ ವೃತ್ತಿ ಜೀವನ ಸಂಪೂರ್ಣವಾಗಿ ಬದಲಾಯಿತು. ಅವರು ಭಿನ್ನ ಸಿನಿಮಾಗಳನ್ನು ಒಪ್ಪಿಕೊಳ್ಳೋಕೆ ಆರಂಭಿಸಿದರು. ಸಮಂತಾ ಸಾಕಷ್ಟು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ನಟಿಸೋಕೆ ಆದ್ಯತೆ ನೀಡುತ್ತಿದ್ದಾರೆ. ಆ ಪೈಕಿ ‘ಯಶೋದ’ ಸಿನಿಮಾ (Yashoda Movie) ಕೂಡ ಒಂದು. ಸೈಂಟಿಫಿಕ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿರುವ ಸಿನಿಮಾದ ಝಲಕ್ಅನ್ನು ಚಿತ್ರತಂಡ ಅನಾವರಣ ಮಾಡಿದೆ. ಈ ವಿಡಿಯೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸಿನಿಮಾ ಹೇಗಿರಬಹುದು ಎನ್ನುವ ಒಂದು ಸಣ್ಣ ಝಲಕ್ ವಿಡಿಯೋದಲ್ಲಿ ಸಿಕ್ಕಿದೆ.
ಗುರುವಾರ (ಏಪ್ರಿಲ್ 4) ಸಮಂತಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ 37 ಸೆಕೆಂಡ್ನ ವಿಡಿಯೋ ಹಂಚಿಕೊಂಡಿದ್ದಾರೆ. ಇದು ‘ಯಶೋದ’ ಸಿನಿಮಾದ ಫಸ್ಟ್ ಗ್ಲಿಂಪ್ಸ್ ವಿಡಿಯೋ. ಈ ವಿಡಿಯೋ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಭಿನ್ನ ಶೈಲಿಯಲ್ಲಿ ಈ ವಿಡಿಯೋ ಮೂಡಿ ಬಂದಿದೆ. ಹಾಗಾದರೆ, ಈ ಫಸ್ಟ್ ಗ್ಲಿಂಪ್ಸ್ನಲ್ಲಿ ಏನೆಲ್ಲ ಹೇಳಲಾಗಿದೆ ಎಂಬುದಕ್ಕೆ ಇಲ್ಲಿದೆ ಮಾಹಿತಿ.
Very excited to present to you the first glimpse of our film #Yashoda#Yashoda #YashodaFirstGlimpse @varusarath5 @Iamunnimukundan @dirharishankar @hareeshnarayan #ManiSharma @krishnasivalenk @SrideviMovieOff @PulagamOfficial pic.twitter.com/7QabzACDcL
— Samantha (@Samanthaprabhu2) May 5, 2022
ಚಿತ್ರದ ಮುಖ್ಯ ಪಾತ್ರಧಾರಿ (ಸಮಂತಾ) ಒಂದು ಕೊಠಡಿಯಲ್ಲಿ ಮಲಗಿದ್ದಾಳೆ. ಆಕೆ ಬೆಡ್ನಿಂದ ಎದ್ದ ತಕ್ಷಣ ತಾನು ತೊಟ್ಟ ಬಟ್ಟೆಯನ್ನು ನೋಡಿಕೊಳ್ಳುತ್ತಾಳೆ. ಕೈಗೆ ಏನೋ ಬೆಲ್ಟ್ ಕಟ್ಟಲಾಗಿದೆ. ಆಕೆಗೆ ಎಲ್ಲವೂ ಹೊಸ ರೀತಿಯಲ್ಲಿ ಕಾಣುತ್ತಿದೆ. ಬೆಡ್ನಿಂದ ಇಳಿದು ಬರುವ ಅವಳು, ಕಿಟಕಿಯ ಹೊರ ಭಾಗದಲ್ಲಿರುವ ಪಾರಿವಾಳ ಮುಟ್ಟೋಕೆ ತೆರಳುತ್ತಾಳೆ. ತಕ್ಷಣ ಕ್ಯಾಮೆರಾ ಜೂಮ್ಔಟ್ ಆಗುತ್ತದೆ. ಗಲ್ಲಿ ರೀತಿಯ ದಾರಿಯಲ್ಲಿ ಕ್ಯಾಮೆರಾ ಸಾಗುತ್ತದೆ. ನಂತರ ‘ಯಶೋದ’ ಎಂದು ಟೈಟಲ್ ಕಾರ್ಡ್ ತೋರಿಸಲಾಗುತ್ತದೆ.
‘ಯಶೋದ’ ಸಿನಿಮಾವನ್ನು ಹರಿ ಶಂಕರ್ ಹಾಗೂ ಹರೀಶ್ ನಾರಾಯಣ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀದೇವಿ ಮೂವೀಸ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಉನ್ನಿ ಮುಕುಂದನ್ ಮತ್ತು ವರಲಕ್ಷ್ಮೀ ಶರತ್ಕುಮಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಯಶೋದ’ ಆಗಸ್ಟ್ 12ರಂದು ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಯಾವ ವಿಚಾರವನ್ನು ಹೇಳಲಾಗುತ್ತಿದೆ ಎನ್ನುವ ಕುತೂಹಲ ಸದ್ಯದ್ದು.
ಸಮಂತಾ ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಕಾತುವಾಕುಲ ರೆಂಡು ಕಾದಲ್’ ಸಿನಿಮಾದಲ್ಲಿ. ವಿಜಯ್ ಸೇತುಪತಿ ಹಾಗೂ ನಯನತಾರಾ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಹಲವು ಸಿನಿಮಾಗಳಲ್ಲಿ ಸಮಂತಾ ನಟಿಸುತ್ತಿದ್ದಾರೆ.
ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.