AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ನಟಿಯ ಜೀವನ ಡೇಂಜರ್​ನಲ್ಲಿದೆ ಎಂದ ನಿರ್ದೇಶಕ ಪೊಲೀಸರ ವಶಕ್ಕೆ

ಗುರುವಾರ (ಮೇ 5) ಸನಲ್ ಅವರು ತಿರುವನಂತಪುರಂನಲ್ಲಿದ್ದರು. ಅಲ್ಲಿಯೇ ಪೊಲೀಸರು ಸನಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ‘ಬ್ಲಾಕ್​ಮೇಲ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಅಪಖ್ಯಾತಿ ತರುವ ಪ್ರಯತ್ನ ನಡೆದಿದೆ’ ಎಂದು ಮಂಜು ವಾರಿಯರ್ ಆರೋಪಿಸಿದ್ದರು.

ಖ್ಯಾತ ನಟಿಯ ಜೀವನ ಡೇಂಜರ್​ನಲ್ಲಿದೆ ಎಂದ ನಿರ್ದೇಶಕ ಪೊಲೀಸರ ವಶಕ್ಕೆ
ಸನಲ್-ಮಂಜು ವಾರಿಯರ್
TV9 Web
| Edited By: |

Updated on:May 05, 2022 | 3:16 PM

Share

ಮಲಯಾಳಂ (Malayalam) ನಿರ್ದೇಶಕ ಸನಲ್ ಕುಮಾರ್ ಶಶಿಧರನ್ (Sanal Kumar Sasidharan) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಟಿ ಮಂಜು ವಾರಿಯರ್​ ಅವರ (Manju Warrier) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ವರದಿ ಆಗಿದೆ. ಪೊಲೀಸರು ವಶಕ್ಕೆ ಪಡೆಯುತ್ತಿರುವುದನ್ನು ಸನಲ್ ಅವರು ಫೇಸ್​ಬುಕ್​ನಲ್ಲಿ ಲೈವ್ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಮಂಜು ಅವರು ಸನಲ್ ವಿರುದ್ಧ ದೂರು ದಾಖಲು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಗುರುವಾರ (ಮೇ 5) ಸನಲ್ ಅವರು ತಿರುವನಂತಪುರಂನಲ್ಲಿದ್ದರು. ಅಲ್ಲಿಯೇ ಪೊಲೀಸರು ಸನಲ್ ಅವರನ್ನು ವಶಕ್ಕೆ ಪಡೆದಿದ್ದಾರೆ. ‘ಬ್ಲಾಕ್​ಮೇಲ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಅಪಖ್ಯಾತಿ ತರುವ ಪ್ರಯತ್ನ ನಡೆದಿದೆ’ ಎಂದು ಮಂಜು ವಾರಿಯರ್ ಆರೋಪಿಸಿದ್ದರು. ಇದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಸನಲ್ ಅವರು ಹಲವು ಸಿನಿಮಾಗಳನ್ನು ನಿರ್ದೇಶನ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಕೆಲವು ಚಿತ್ರಗಳು ಹಿಟ್ ಆಗಿವೆ. ‘ಕಯಟ್ಟಮ್​’ ಸಿನಿಮಾದಲ್ಲಿ ಮಂಜು ವಾರಿಯರ್ ಜತೆ ಸನಲ್ ಕೆಲಸ ಮಾಡಿದ್ದರು. ಆ ಬಳಿಕ ಮಂಜು ವಾರಿಯರ್ ವಿರುದ್ಧ ಹಲವು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ‘ಮಂಜು ವಾರಿಯರ್ ಜೀವನ ಡೇಂಜರ್​ನಲ್ಲಿ ಎಂದು ಸನಲ್ ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸಿದ್ದರು.

ಇದನ್ನೂ ಓದಿ
Image
‘ಹೂ ಅಂತಿಯಾ ಮಾವ’ ಹಾಡಿಗೆ ವಿರಾಟ್ ಕೊಹ್ಲಿ ಡ್ಯಾನ್ಸ್ ನೋಡಿ ಸಮಂತಾ ಹೇಳಿದ್ದೇನು?  
Image
ಮಧ್ಯ ರಾತ್ರಿ ಸಮಂತಾಗೆ ಸರ್ಪ್ರೈಸ್​ ನೀಡಿದ ವಿಜಯ್​ ದೇವರಕೊಂಡ; ಸತ್ಯ ತಿಳಿದಾಗ ನಟಿಯ ಪ್ರತಿಕ್ರಿಯೆ ಏನು?
Image
ನಾಗಚೈತನ್ಯ 2ನೇ ಮದುವೆ ಗಾಸಿಪ್​: ಸಮಂತಾ ರೀತಿ ಹೆಣ್ಣು ಬೇಡವೇ ಬೇಡ ಅಂತಿದೆಯಾ ಅಕ್ಕಿನೇನಿ ಕುಟುಂಬ?
Image
ಮತ್ತೆ ಚಿಕ್ಕ ಬಟ್ಟೆ ಧರಿಸಿ ಬಂದ ಸಮಂತಾ; ಆದ್ರೆ ಟ್ರೋಲ್​ ಆಗಿದ್ದು ನಯನತಾರಾ ಪ್ರಿಯಕರ: ಕಾರಣ ಏನು?

‘ತುಂಬಾ ಗಂಭೀರವಾದ ವಿಚಾರ. ಮಲಯಾಳಂನ ಖ್ಯಾತ ನಟಿ ಮಂಜು ವಾರಿಯರ್ ಅವರ ಜೀವಕ್ಕೆ ಅಪಾಯವಿದೆ. ಅವರು ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಶದಲ್ಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ನಾಲ್ಕು ದಿನಗಳಾಗಿವೆ. ಆದರೆ ಇದುವರೆಗೂ ಮಂಜು ವಾರಿಯರ್ ಆಗಲಿ ಅಥವಾ ಸಂಬಂಧಪಟ್ಟವರಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಂಜು ವಾರಿಯರ್ ಅವರ ಮೌನ ನನ್ನ ಅನುಮಾನವನ್ನು ಬಲಪಡಿಸುತ್ತದೆ’ ಎಂದು ಬರೆದುಕೊಂಡಿದ್ದರು.

‘ನಿನ್ನೆ ನಾನು wcc_cinemaಗೆ ಇಮೇಲ್ ಕಳುಹಿಸಿದ್ದೇನೆ. ಮಲಯಾಳಂ ಚಿತ್ರರಂಗದಲ್ಲಿ ಲಿಂಗ ಸಮಾನತೆಗಾಗಿ ಕೆಲಸ ಮಾಡುವ ಸಂಸ್ಥೆ ಇದು. ಅವರೂ ಈ ವಿಚಾರದಲ್ಲಿ ಮೌನ ವಹಿಸಿದ್ದಾರೆ. ನಾನು ಈ ವಿಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹೇಳಿದಾಗ ಅನೇಕ ಜನರು ಈ ಗಂಭೀರ ಸಮಸ್ಯೆಯನ್ನು ತಮಾಷೆಯಾಗಿ ನೋಡಲು ಪ್ರಯತ್ನಿಸಿದ್ದಾರೆ. ನಾನು ಎತ್ತಿರುವ ವಿಷಯ ರಾಷ್ಟ್ರ ಮಟ್ಟದಲ್ಲಿ ಮೆಚ್ಚುಗೆ ಪಡೆದ ನಟಿಯ ಜೀವನ ಮತ್ತು ಸ್ವಾತಂತ್ರ್ಯದ ಬಗ್ಗೆ ಆಗಿದೆ. ಹೀಗಾಗಿ, ರಾಷ್ಟ್ರೀಯ ಮಾಧ್ಯಮಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ನಾನು ಕೋರುತ್ತೇನೆ’ ಎಂದು ಅವರು ಹೇಳಿದ್ದರು.

Published On - 3:15 pm, Thu, 5 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್