ಮತ್ತೆ ಚಿಕ್ಕ ಬಟ್ಟೆ ಧರಿಸಿ ಬಂದ ಸಮಂತಾ; ಆದ್ರೆ ಟ್ರೋಲ್​ ಆಗಿದ್ದು ನಯನತಾರಾ ಪ್ರಿಯಕರ: ಕಾರಣ ಏನು?

Vignesh Shivan | Samantha: ಕಲರ್​ಫುಲ್​ ಕಾಸ್ಟ್ಯೂಮ್​ ಧರಿಸಿ ಸಮಂತಾ ಮಿಂಚಿದ್ದಾರೆ. ಗುಲಾಬಿ ಬಣ್ಣದ ಶಾರ್ಟ್​ ಡ್ರೆಸ್​ ತೊಟ್ಟು ಅವರು ಡ್ಯಾನ್ಸ್​ ಮಾಡಿದ್ದಾರೆ.

ಮತ್ತೆ ಚಿಕ್ಕ ಬಟ್ಟೆ ಧರಿಸಿ ಬಂದ ಸಮಂತಾ; ಆದ್ರೆ ಟ್ರೋಲ್​ ಆಗಿದ್ದು ನಯನತಾರಾ ಪ್ರಿಯಕರ: ಕಾರಣ ಏನು?
ನಯನತಾರ, ವಿಜಯ್ ಸೇತುಪತಿ, ಸಮಂತಾ
Follow us
| Edited By: ಮದನ್​ ಕುಮಾರ್​

Updated on: Apr 15, 2022 | 3:49 PM

ನಟಿ ಸಮಂತಾ (Samantha) ಅವರು ಈಗ ಬಗೆಬಗೆಯ ಪಾತ್ರಗಳ ಮೂಲಕ ಜನರಿಗೆ ಮನರಂಜನೆ ನೀಡುತ್ತಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಅವರು ಯಾವುದೇ ಹಿಂಜರಿಕೆ ಇಟ್ಟುಕೊಂಡಿಲ್ಲ. ಬೋಲ್ಡ್​ ಆದಂತಹ ಗೆಟಪ್​ ಮೂಲಕ ಅವರು ಅಭಿಮಾನಿಗಳನ್ನು ರಂಜಿಸುತ್ತಾರೆ. ‘ಪುಷ್ಪ’ ಸಿನಿಮಾದಲ್ಲಿ ‘ಹು ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡಿಗೆ ಹೆಜ್ಜೆ ಹಾಕಿದ ಅವರು ಗ್ಲಾಮರಸ್​ ಆಗಿ ಕಾಣಿಸಿಕೊಂಡಿದ್ದರು. ಅದಕ್ಕೂ ಮುನ್ನ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿಯಲ್ಲಿ ರಾಜಿ ಎಂಬ ಬೋಲ್ಡ್​ ಪಾತ್ರ ಮಾಡಿದ್ದರು. ಈಗ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ. ಆ ಪೈಕಿ ‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ನಯನತಾರಾ (Nayanthara) ಮತ್ತು ವಿಜಯ್​ ಸೇತುಪತಿ ಕೂಡ ಮುಖ್ಯಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ನಯನತಾರಾ ಬಾಯ್​ಫ್ರೆಂಡ್​ ವಿಘ್ನೇಶ್​ ಶಿವನ್​ (Vignesh Shivan) ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಿಂದ ಒಂದು ಹಾಡಿನ ಗ್ಲಿಂಪ್ಸ್​ ರಿಲೀಸ್​ ಆಗಿದೆ. ಅದನ್ನು ನೋಡಿದ ನೆಟ್ಟಿಗರು ಹಲವು ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾದ ಹಾಡುಗಳಿಗೆ ಅನಿರುದ್ಧ್​ ರವಿಚಂದರ್​ ಸಂಗೀತ ನೀಡಿದ್ದಾರೆ. ಅವರ ಬತ್ತಳಿಕೆಯಿಂದ ‘ಟು ಟು ಟು..’ ಹಾಡು ಮೂಡಿಬಂದಿದೆ. ಅದರ ಗ್ಲಿಂಪ್ಸ್​ ಈಗ ಬಿಡುಗಡೆ ಆಗಿದೆ. ಇದರಲ್ಲಿ ಸಮಂತಾ ಅವರು ಬಣ್ಣ ಬಣ್ಣದ ಕಾಸ್ಟ್ಯೂಮ್​ ಧರಿಸಿ ಮಿಂಚಿದ್ದಾರೆ. ಗುಲಾಬಿ ಬಣ್ಣದ ಶಾರ್ಟ್​ ಡ್ರೆಸ್​ ತೊಟ್ಟು ಅವರು ಡ್ಯಾನ್ಸ್​ ಮಾಡಿರುವ ಪರಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಆದರೆ ಒಂದು ವರ್ಗದ ನೆಟ್ಟಿಗರು ಈ ಹಾಡಿನಲ್ಲಿ ಒಂದು ಮುಖ್ಯ ಸಂಗತಿ ಗಮನಿಸಿದ್ದಾರೆ.

ಇದೇ ಹಾಡಿನಲ್ಲಿ ವಿಜಯ್​ ಸೇತುಪತಿ ಮತ್ತು ನಯನತಾರಾ ಕೂಡ ಹೆಜ್ಜೆ ಹಾಕಿದ್ದಾರೆ. ಆದರೆ ನಯನತಾರಾ ಅವರು ಸಮಂತಾ ರೀತಿ ಚಿಕ್ಕ ಬಟ್ಟೆ ಧರಿಸಿಲ್ಲ, ಗ್ಲಾಮರಸ್​ ಆಗಿ ಕಾಣಿಸಿಕೊಂಡಿಲ್ಲ. ಇದರ ಹಿಂದಿರುವ ಉದ್ದೇಶ ಏನು ಎಂಬುದನ್ನು ನೆಟ್ಟಿಗರು ಪತ್ತೆ ಹಚ್ಚುತ್ತಿದ್ದಾರೆ. ಈಗಾಗಲೇ ಹೇಳಿರುವಂತೆ ವಿಘ್ನೇಶ್​ ಶಿವನ್​ ಮತ್ತು ನಯನತಾರಾ ಅವರು ರಿಲೇಷನ್​ಶಿಪ್​ನಲ್ಲಿ ಇದ್ದಾರೆ. ಹಾಗಾಗಿ ವಿಘ್ನೇಶ್​ ಶಿವನ್​ ಅವರು ತಮ್ಮ ಪ್ರೇಯಸಿಗೆ ಸೀರೆ ತೊಡಿಸಿ, ಸಮಂತಾಗೆ ಮಾತ್ರ ಶಾರ್ಟ್​ ಡ್ರೆಸ್​ ಹಾಕಿಸಿದ್ದಾರೆ ಎಂದು ನೆಟ್ಟಿಗರು ಟೀಕೆ ಮಾಡಿದ್ದಾರೆ.

​ಆದರೆ ಈ ವಾದವನ್ನು ಇನ್ನೊಂದು ವರ್ಗದ ನೆಟ್ಟಿಗರು ತಳ್ಳಿ ಹಾಕಿದ್ದಾರೆ. ಪಾತ್ರಕ್ಕೆ ತಕ್ಕಂತೆ ಕಾಸ್ಟ್ಯೂಮ್​ ಹಾಕಿಸಲಾಗಿರುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ನಯನತಾರಾ ಅವರು ಗ್ಲಾಮರ್​ ಪಾತ್ರಗಳಿಗೆ ಈಗಾಗಲೇ ಗುಡ್​ ಬೈ ಹೇಳಿದ್ದಾರೆ. ಈ ವಿಚಾರದಲ್ಲಿ ಸಮಂತಾ ಯಾವುದೇ ನಿರ್ಬಂಧಗಳನ್ನು ಹಾಕಿಕೊಂಡಿಲ್ಲ. ಆ ಕಾರಣಕ್ಕಾಗಿಯೇ ಈ ಹಾಡಿನಲ್ಲಿ ಅವರಿಬ್ಬರಿಗೆ ಈ ಬಗೆಯ ಕಾಸ್ಟ್ಯೂಮ್​ ನೀಡಲಾಗಿದೆ. ಇದರಲ್ಲಿ ವಿಘ್ನೇಶ್​ ಶಿವನ್​ ಯಾವುದೇ ರೀತಿಯ ತಾರತಮ್ಯ ಮಾಡಿಲ್ಲ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಸಮಂತಾ ಕೈಯಲ್ಲಿ ಅನೇಕ ಆಫರ್​ಗಳಿವೆ. ‘ಶಾಕುಂತಲಂ’, ‘ಯಶೋಧ’, ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಮುಂತಾದ ಚಿತ್ರಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ಕಾದು ವಾಕುಲ ರೆಂಡು ಕಾದಲ್​’ ಸಿನಿಮಾ ಏ.28ಕ್ಕೆ ಬಿಡುಗಡೆ ಆಗಲಿದೆ.

ಇದನ್ನೂ ಓದಿ:

ಮಾಜಿ ಗಂಡನ ಫ್ಯಾಮಿಲಿ ಕಡೆಗೆ ಮತ್ತೆ ಒಲವು ತೋರಿದ ಸಮಂತಾ; ಏನಿದು ಹೊಸ ಸಮಾಚಾರ?

3 ವರ್ಷದ ಹಿಂದಿನ ಘಟನೆ ನೆನೆದು ಖುಷಿಪಟ್ಟ ಸಮಂತಾ; ಇದು ಮಾಜಿ ಪತಿ ನಾಗ ಚೈತನ್ಯ ಕುರಿತ ವಿಷಯ

ತಾಜಾ ಸುದ್ದಿ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಹೆದ್ದಾರಿಯಲ್ಲಿ ಕಾಡಾನೆ ಹಿಂಡು: ಶೃಂಗೇರಿ ತೆರಳುವ ವಾಹನ ಸವಾರರಿಗೆ ಎಚ್ಚರಿಕೆ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಬಾಗಲಕೋಟೆ: ಬರಿಗೈಯಿಂದ ಕುದಿಯುವ ಹುಗ್ಗಿ ತೆಗೆದ ಸ್ವಾಮೀಜಿ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
ಮಂಗಳವಾರದ ಬೆಂಗಳೂರು ಬಂದ್ ಗೆ ಪ್ರಾಯಶಃ ಹೋಟೆಲ್ ಮಾಲೀಕರ ಬೆಂಬಲವಿಲ್ಲ
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
13 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿದ್ದ ಗೋದಾಮು ಅರ್ಧಕ್ಕೆ ನಿಂತಿದೆ!
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಕುಮಾರಸ್ವಾಮಿ ದೇವತಾ ಮನುಷ್ಯ, ನಾವೆಲ್ಲ ಪಾಪಿಗಳು: ಭೈರತಿ ಸುರೇಶ್, ಸಚಿವ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸಹಕಾರ ಸಚಿವ ಕೆಎನ್ ರಾಜಣ್ಣನಿಗೆ ಮೈತುಂಬಾ ದುರಹಂಕಾರ: ಹೆಚ್ ಡಿ ಕುಮಾರಸ್ವಾಮಿ
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
ಸರ್ಕಾರದ ಬೇಜವಾಬ್ದಾರಿ ಕಾವೇರಿ ನೀರಿನ ಸಮಸ್ಯೆ ಸೃಷ್ಟಿಸಿದೆ: ಕುಮಾರಸ್ವಾಮಿ 
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
‘ರೈತನ ಮಗನಾಗಿ ಕಾವೇರಿ ಹೋರಾಟಕ್ಕೆ ನನ್ನ ಬೆಂಬಲ ಇದೆ’: ಧ್ರುವ ಸರ್ಜಾ
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
ಜೆಡಿಎಸ್-ಬಿಜೆಪಿ ಮೈತ್ರಿಗೆ ಮುಸಲ್ಮಾನರ ವೋಟು ಬೇಕಿಲ್ಲ: ಬಸನಗೌಡ ಯತ್ನಾಳ್
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ
91ನೇ ಇಳಿವಯಸ್ಸಿನಲ್ಲಿ ಕನ್ನಡಿಗರನ್ನು ಉಳಿಸಲು ಹೋರಾಡುತ್ತಿದ್ದೇನೆ: ದೇವೇಗೌಡ