ಮಧ್ಯ ರಾತ್ರಿ ಸಮಂತಾಗೆ ಸರ್ಪ್ರೈಸ್​ ನೀಡಿದ ವಿಜಯ್​ ದೇವರಕೊಂಡ; ಸತ್ಯ ತಿಳಿದಾಗ ನಟಿಯ ಪ್ರತಿಕ್ರಿಯೆ ಏನು?

ಮಧ್ಯ ರಾತ್ರಿ ಸಮಂತಾಗೆ ಸರ್ಪ್ರೈಸ್​ ನೀಡಿದ ವಿಜಯ್​ ದೇವರಕೊಂಡ; ಸತ್ಯ ತಿಳಿದಾಗ ನಟಿಯ ಪ್ರತಿಕ್ರಿಯೆ ಏನು?
ಸಮಂತಾ, ವಿಜಯ್ ದೇವರಕೊಂಡ

Vijay Deverakonda | Samantha: ಸತ್ಯ ತಿಳಿದ ಬಳಿಕ ಏನು ಹೇಳಬೇಕು ಎಂಬುದೇ ಸಮಂತಾಗೆ ತೋಚಲಿಲ್ಲ. ಒಂದು ಕ್ಷಣ ಖುಷಿಯಿಂದ ಭಾವುಕರಾದ ಅವರನ್ನು ತಬ್ಬಿಕೊಂಡು ವಿಜಯ್​ ದೇವರಕೊಂಡ ವಿಶ್​ ಮಾಡಿದರು.

TV9kannada Web Team

| Edited By: Madan Kumar

Apr 29, 2022 | 1:36 PM

ನಟಿ ಸಮಂತಾ (Samantha) ಅವರು ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ. ಹಲವು ಖ್ಯಾತನಾಮರ ಜೊತೆ ಅವರು ಕೆಲಸ ಮಾಡುತ್ತಿದ್ದಾರೆ. ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಅವರ ವೃತ್ತಿಜೀವನಕ್ಕೆ ಹೊಸ ವೇಗ ಸಿಕ್ಕಿದೆ. ಗುರುವಾರ (ಏ.28) ಸಮಂತಾ ಹುಟ್ಟುಹಬ್ಬ (Samantha Birthday) ಆಚರಿಸಿಕೊಂಡರು. 35ನೇ ವಸಂತಕ್ಕೆ ಕಾಲಿಟ್ಟ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಸ್ನೇಹಿತರು, ಸೆಲೆಬ್ರಿಟಿಗಳು ಹಾಗೂ ಆಪ್ತರು ವಿವಿಧ ಗಿಫ್ಟ್​ಗಳನ್ನು ನೀಡಿ ವಿಶ್​ ಮಾಡಿದ್ದಾರೆ. ಈ ನಡುವೆ ನಟ ವಿಜಯ್​ ದೇವರಕೊಂಡ (Vijay Devarakonda) ಅವರು ಸಮಂತಾಗೆ ಮಧ್ಯರಾತ್ರಿ ಸರ್ಪ್ರೈಸ್​ ನೀಡಿದ್ದಾರೆ. ಹುಟ್ಟುಹಬ್ಬ ಆಚರಿಸಿಕೊಂಡ ಸಮಂತಾಗೆ ಅಚ್ಚರಿ ನೀಡುವ ಸಲುವಾಗಿ ಅವರು ದೊಡ್ಡ ನಾಟಕವನ್ನೇ ಮಾಡಿದ್ದಾರೆ. ಆ ನಾಟಕಕ್ಕೆ ಇಡೀ ಸಿನಿಮಾ ತಂಡ ಸಾಥ್​ ನೀಡಿದೆ. ಒಟ್ಟಾರೆ ಅವರು ನೀಡಿದ್ದ ಸರ್ಪ್ರೈಸ್​ ಹೇಗಿತ್ತು ಎಂಬುದು ವಿಡಿಯೋದಲ್ಲಿ ಸೆರೆ ಆಗಿದೆ. ಆ ವಿಡಿಯೋವನ್ನು ಇಂದು (ಏ.29) ಸಮಂತಾ ಅವರು ಬಹಿರಂಗ ಪಡಿಸಿದ್ದಾರೆ. ಅದನ್ನು ಕಂಡು ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ.

ಸಮಂತಾ ಮತ್ತು ವಿಜಯ್​ ದೇವರಕೊಂಡ ಅವರು ಎರಡನೇ ಬಾರಿಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಈ ಮೊದಲು ಅವರು ‘ಮಹಾನಟಿ’ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈಗ ಅವರ ಹೊಸ ಸಿನಿಮಾದ ಶೂಟಿಂಗ್​ ಕಾಶ್ಮೀರದಲ್ಲಿ ನಡೆಯುತ್ತಿದೆ. ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್​ ಬಂಡವಾಳ ಹೂಡುತ್ತಿದ್ದು, ಶಿವ ನಿರ್ವಾಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇಡೀ ತಂಡದವರು ಸೇರಿಕೊಂಡು ಸಮಂತಾಗೆ ಬರ್ತ್​ಡೇ ಸರ್ಪ್ರೈಸ್​ ನೀಡಿದ್ದಾರೆ.

ಏ.27ರ ರಾತ್ರಿ ಶೂಟಿಂಗ್​ ಇದೆ ಎಂದು ಸಮಂತಾ ಅವರನ್ನು ನಂಬಿಸಲಾಯಿತು. ಒಂದು ನಕಲಿ ದೃಶ್ಯವನ್ನು ನಿರ್ದೇಶಕರು ವಿವರಿಸಿದರು. ಈ ಬಗ್ಗೆ ಏನೂ ತಿಳಿದಿರದ ಸಮಂತಾ ಅವರು ಸ್ಥಳದಲ್ಲೇ ರಿಹರ್ಸಲ್​ ಮಾಡಿ ಸಿದ್ಧರಾದರು. ಅವರ ಜೊತೆ ವಿಜಯ್​ ದೇವರಕೊಂಡ ಕೂಡ ನಾಟಕ ಮಾಡಿದರು. ರಿಹರ್ಸಲ್​ ಆದ ಬಳಿಕ ಶೂಟಿಂಗ್​ ಶುರು ಆಯಿತು. ಎಲ್ಲವೂ ನಿಜ ಎಂಬ ರೀತಿಯೇ ನಡೆಯುತ್ತಿತ್ತು. ಸಮಂತಾ ಅವರು ಒಂದು ಡೈಲಾಗ್​ ಹೇಳಿದರು. ಅದಕ್ಕೆ ಪ್ರತಿಯಾಗಿ ಡೈಲಾಗ್​ ಹೊಡೆಯುವಾಗ ಪಾತ್ರದ ಹೆಸರನ್ನು ಹೇಳುವುದು ಬಿಟ್ಟು ಸಮಂತಾ ಎಂದೇ ಕರೆದರು ವಿಜಯ್​ ದೇವರಕೊಂಡ. ಅದನ್ನು ಕೇಳಿ ಸಮಂತಾ ಜೋರಾಗಿ ನಕ್ಕರು. ಕ್ಯಾಮೆರಾ ಇನ್ನೂ ರನ್​ ಆಗುತ್ತಿರುವಾಗಲೇ ಹ್ಯಾಪಿ ಬರ್ತ್​ಡೇ ಸಮಂತಾ ಎಂದು ವಿಜಯ್​ ದೇವರಕೊಂಡು ವಿಶ್​ ಮಾಡಿದರು.

ಇಡೀ ತಂಡವೇ ಸೇರಿಕೊಂಡು ಈ ಪರಿ ಪ್ಲ್ಯಾನ್​ ಮಾಡಿ ತಮಗೆ ಅಚ್ಚರಿ ನೀಡಿದ್ದನ್ನು ಕಂಡು ಸಮಂತಾ ಭಾವುಕರಾದರು. ಇದು ನಿಜವಾದ ಶೂಟಿಂಗ್​ ಅಲ್ಲ ಎಂಬ ಸತ್ಯ ತಿಳಿದು ಅವರಿಗೆ ಏನು ಹೇಳಬೇಕು ಎಂಬುದೇ ತೋಚಲಿಲ್ಲ. ಒಂದು ಕ್ಷಣ ಅವರು ಖುಷಿಯಿಂದ ಭಾವುಕರಾದರು. ಅವರನ್ನು ತಬ್ಬಿಕೊಂಡು ವಿಜಯ್​ ದೇವರಕೊಂಡ ವಿಶ್​ ಮಾಡಿದರು. ಆ ಸ್ಥಳದಲ್ಲೇ ಕೇಕ್​ ಕತ್ತರಿಸುವ ಮೂಲಕ ಚಿತ್ರತಂಡದವರು ಸಮಂತಾ ಹುಟ್ಟುಹಬ್ಬವನ್ನು ಆಚರಿಸಿದರು.

ಹಲವು ಬಗೆಯ ಪಾತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಚಿತ್ರರಂಗದಲ್ಲಿ ಸಮಂತಾ ಮುನ್ನುಗ್ಗುತ್ತಿದ್ದಾರೆ. ಅವರ ಚಾರ್ಮ್​ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹುಟ್ಟುಹಬ್ಬದ ಪ್ರಯುಕ್ತ ‘ಶಾಕುಂತಲಂ’ ಸಿನಿಮಾದ ಹೊಸ ಪೋಸ್ಟರ್​ ರಿಲೀಸ್​ ಆಯಿತು. ‘ಯಶೋದಾ’, ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಮುಂತಾದ ಪ್ರಾಜೆಕ್ಟ್​ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

ನಾಗಚೈತನ್ಯ 2ನೇ ಮದುವೆ ಗಾಸಿಪ್​: ಸಮಂತಾ ರೀತಿ ಹೆಣ್ಣು ಬೇಡವೇ ಬೇಡ ಅಂತಿದೆಯಾ ಅಕ್ಕಿನೇನಿ ಕುಟುಂಬ?

‘ಸ್ಟ್ರಾಂಗ್​ ಬಾಡಿ, ಸ್ಟ್ರಾಂಗ್​ ಮನಸ್ಸು’; ವಿಡಿಯೋ ಸಹಿತ ಸಾಕ್ಷಿ ತೋರಿಸಿದ ನಟಿ ಸಮಂತಾ

Follow us on

Related Stories

Most Read Stories

Click on your DTH Provider to Add TV9 Kannada