AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಗಚೈತನ್ಯ 2ನೇ ಮದುವೆ ಗಾಸಿಪ್​: ಸಮಂತಾ ರೀತಿ ಹೆಣ್ಣು ಬೇಡವೇ ಬೇಡ ಅಂತಿದೆಯಾ ಅಕ್ಕಿನೇನಿ ಕುಟುಂಬ?

Naga Chaitanya 2nd Marriage: ಶೀಘ್ರದಲ್ಲೇ ನಾಗ ಚೈತನ್ಯ ಎರಡನೇ ಮದುವೆ ಆಗುತ್ತಾರೆ ಎಂಬ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಎಲ್ಲೆಲ್ಲೂ ಈ ಗಾಸಿಪ್​ ಹಬ್ಬಿದೆ.

ನಾಗಚೈತನ್ಯ 2ನೇ ಮದುವೆ ಗಾಸಿಪ್​: ಸಮಂತಾ ರೀತಿ ಹೆಣ್ಣು ಬೇಡವೇ ಬೇಡ ಅಂತಿದೆಯಾ ಅಕ್ಕಿನೇನಿ ಕುಟುಂಬ?
ಸಮಂತಾ, ನಾಗ ಚೈತನ್ಯ
TV9 Web
| Edited By: |

Updated on: Apr 20, 2022 | 9:24 AM

Share

ಚಿತ್ರರಂಗದಲ್ಲಿ ಸೆಲೆಬ್ರಿಟಿಗಳು ವಿಚ್ಛೇದನ ಪಡೆಯುವುದು ಹೊಸದೇನೂ ಅಲ್ಲ. ಆದರೆ ಹಲವು ವರ್ಷಗಳ ಕಾಲ ಪ್ರೀತಿಸಿ, ಮದುವೆಯಾಗಿ, ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದವರು ಏಕಾಏಕಿ ಡಿವೋರ್ಸ್​ ಪಡೆದುಕೊಂಡರೆ ಅಭಿಮಾನಿಗಳಿಗೆ ನಿಜಕ್ಕೂ ಬೇಸರ ಆಗುತ್ತದೆ. ನಟಿ ಸಮಂತಾ (Samantha) ಮತ್ತು ನಾಗ ಚೈತನ್ಯ ವಿಚಾರದಲ್ಲಿ ಅದೇ ರೀತಿ ಆಯಿತು. ಅವರಿಬ್ಬರದ್ದು ಲವ್​ ಕಮ್​ ಅರೇಂಜ್​ ಮ್ಯಾರೇಜ್​. ಆದರೆ ಮದುವೆಯಾಗಿ ನಾಲ್ಕು ವರ್ಷ ಕಳೆಯುವುದರೊಳಗೆ ಇಬ್ಬರ ನಡುವೆ ಮನಸ್ತಾಪ ಬೆಳೆಯಿತು. ವಿಚ್ಛೇದನ ಪಡೆಯುವ ಮೂಲಕ ಅವರಿಬ್ಬರೂ ಬೇರೆ ಆದರು. ಕಳೆದ ವರ್ಷ ಸಮಂತಾ ಹಾಗೂ ನಾಗ ಚೈತನ್ಯ (Naga Chaitanya) ಅವರು ಡಿವೋರ್ಸ್​ ಘೋಷಿಸಿದ್ದು ಅವರ ಅಭಿಮಾನಿ ಬಳಗಕ್ಕೆ ಸಖತ್​ ಬೇಸರ ತಂದಿತ್ತು. ಈಗ ನಾಗ ಚೈತನ್ಯ ಅವರ ಎರಡನೇ ಮದುವೆ (Naga Chaitanya 2nd Marriage) ಬಗ್ಗೆ ಗುಸುಗುಸು ಹಬ್ಬಿದೆ. ಶೀಘ್ರದಲ್ಲೇ ಅವರು ಇನ್ನೊಂದು ಮದುವೆ ಆಗುತ್ತಾರೆ ಎಂಬ ಮಾತು ಕೇಳಿಬರುತ್ತಿವೆ. ಈ ಕುರಿತಂತೆ ಕೆಲವು ಮಾಧ್ಯಮಗಳು ವರದಿ ಪ್ರಕಟ ಮಾಡಿವೆ. ಆದರೆ ನಾಗ ಚೈತನ್ಯ ಅಥವಾ ಅವರ ಕುಟುಂಬದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ನಾಗ ಚೈತನ್ಯ ಮತ್ತು ಸಮಂತಾ ಅವರು ಒಂದೇ ಕ್ಷೇತ್ರದಲ್ಲಿ ಇರುವವರು. ವೃತ್ತಿಜೀವನದ ಕಷ್ಟ-ನಷ್ಟಗಳ ಬಗ್ಗೆ ಪರಸ್ಪರ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಆದರೂ ಕೂಡ ಅವರ ನಡುವೆ ಬಿರುಕು ಮೂಡಿದ್ದು ಯಾಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸಮಂತಾ ಅವರು ವಿಚ್ಛೇದನ ಪಡೆದುಕೊಂಡು ಹೊರಬಂದ ಬಳಿಕ ನಾಗ ಚೈತನ್ಯ ಅವರು ತೀವ್ರ ಬೇಸರದಲ್ಲಿದ್ದರು ಎನ್ನುತ್ತಿವೆ ಅವರ ಆಪ್ತ ಮೂಲಗಳು. ಈಗ 2ನೇ ಮದುವೆ ಬಗ್ಗೆ ನಾಗ ಚೈತನ್ಯ ಆಲೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಮೊದಲ ಮದುವೆಯಲ್ಲಿ ಆದ ತಪ್ಪನ್ನು ಎರಡನೇ ಮದುವೆಯಲ್ಲಿ ಮಾಡಬಾರದು ಎಂದು ಅವರು ನಿರ್ಧರಿಸಿದ್ದಾರಂತೆ!

ಸಮಂತಾ ರೀತಿ ಚಿತ್ರರಂಗದಲ್ಲಿ ಇರುವ ಹುಡುಗಿಯನ್ನು ಮದುವೆ ಆಗಬಾರದು ಎಂದು ನಾಗ ಚೈತನ್ಯ ನಿರ್ಧರಿಸಿದ್ದಾರೆ ಎಂದು ‘ಎಬಿಪಿ ಲೈವ್​ ಹಿಂದಿ’ ವರದಿ ಮಾಡಿದೆ. ಬೇರೆ ಕ್ಷೇತ್ರದಲ್ಲಿ ಇರುವ ಹುಡುಗಿಯ ಜೊತೆ ಹೊಸ ಜೀವನ ಆರಂಭಿಸಲು ನಾಗ ಚೈತನ್ಯ ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ ಅವರಿಗೆ ಈಗಾಗಲೇ ಜೋಡಿ ಸಿಕ್ಕಿರಬಹುದೇ? ಯಾರ ಜೊತೆ ಅವರು ಎರಡನೇ ಬಾರಿಗೆ ಹಸೆಮಣೆ ಏರುತ್ತಾರೆ? ಇದಕ್ಕೆ ಅಕ್ಕಿನೇನಿ ಕುಟುಂಬ ಏನು ಹೇಳುತ್ತಿದೆ? ಈ ಯಾವ ಪ್ರಶ್ನೆಗಳಿಗೂ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.

ವಿಚ್ಛೇದನ ಪಡೆದ ಬಳಿಕ ಸಮಂತಾ ಮತ್ತು ನಾಗ ಚೈತನ್ಯ ಅವರವರ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಮಂತಾ ಅವರಿಗೆ ಕೈ ತುಂಬ ಆಫರ್​ಗಳು ಬರುತ್ತಿವೆ. ‘ಯಶೋದಾ’, ‘ಶಾಕುಂತಲಂ’, ‘ಕಾದು ವಾಕುಲ ರೆಂಡು ಕಾದಲ್​’, ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ‘ಪುಷ್ಟ 2’ ಸಿನಿಮಾದಲ್ಲಿ ‘ಹು ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡಿನಲ್ಲಿ ನರ್ತಿಸಿ ಫೇಮಸ್​ ಆದ ನಂತರ ಅವರ ಚಾರ್ಮ್​ ಹೆಚ್ಚಿತು. ಅನೇಕ ಸಿನಿಮಾಗಳಲ್ಲಿ ಇದೇ ರೀತಿಯ ಐಟಂ ಡ್ಯಾನ್ಸ್​ ಮಾಡುವಂತೆ ಆಫರ್​ಗಳು ಬರುತ್ತಿವೆ. ಆದರೆ ಆ ಬಗ್ಗೆ ಅವರು ತಮ್ಮ ತೀರ್ಮಾನ ತಿಳಿಸಿಲ್ಲ.

ಇದನ್ನೂ ಓದಿ:

‘ಸ್ಟ್ರಾಂಗ್​ ಬಾಡಿ, ಸ್ಟ್ರಾಂಗ್​ ಮನಸ್ಸು’; ವಿಡಿಯೋ ಸಹಿತ ಸಾಕ್ಷಿ ತೋರಿಸಿದ ನಟಿ ಸಮಂತಾ

ಮತ್ತೆ ಚಿಕ್ಕ ಬಟ್ಟೆ ಧರಿಸಿ ಬಂದ ಸಮಂತಾ; ಆದ್ರೆ ಟ್ರೋಲ್​ ಆಗಿದ್ದು ನಯನತಾರಾ ಪ್ರಿಯಕರ: ಕಾರಣ ಏನು?

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್