‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​

ಮಾಜಿ ಪತ್ನಿಯರಾದ ರೀನಾ ದತ್ತ ಹಾಗೂ ಕಿರಣ್​ ರಾವ್​ ಬಗ್ಗೆ ಆಮಿರ್​ ಖಾನ್ ಮಾತನಾಡಿದ್ದಾರೆ. ವಿಚ್ಛೇದನದ ಬಳಿಕ ತಮ್ಮ ಸಂಬಂಧ ಹೇಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​
ಆಮಿರ್ ಖಾನ್, ಕಿರಣ್ ರಾವ್, ರೀನಾ ದತ್ತ
Follow us
TV9 Web
| Updated By: ಮದನ್​ ಕುಮಾರ್​

Updated on: Mar 14, 2022 | 9:20 AM

ನಟ ಆಮಿರ್​ ಖಾನ್​ (Aamir Khan) ಅವರು ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಜೀವನದ ಕಾರಣದಿಂದಲೂ ಆಗಾಗ ಸುದ್ದಿ ಆಗುತ್ತಾರೆ. ಕಳೆದ ವರ್ಷ ಜುಲೈನಲ್ಲಿ ಎರಡನೇ ಪತ್ನಿ ಕಿರಣ್​ ರಾವ್​ (Kiran Rao) ಅವರಿಗೆ ಆಮಿರ್​ ಖಾನ್​ ವಿಚ್ಛೇದನ ನೀಡಿದ್ದು ಅವರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಹಲವು ವರ್ಷಗಳಿಂದ ಅನ್ಯೋನ್ಯವಾಗಿ ಸಂಸಾರ ಮಾಡಿಕೊಂಡಿದ್ದ ಈ ದಂಪತಿ ನಡುವೆ ಅದೆಂಥ ಮನಸ್ತಾಪ ಮೂಡಿತು ಎಂಬ ಪ್ರಶ್ನೆ ಎದುರಾಯಿತು. ಆಮಿರ್​ ಖಾನ್​ ಅವರು ಬೇರೆ ಹುಡುಗಿ ಜೊತೆ ಡೇಟಿಂಗ್​ ಮಾಡುತ್ತಿರುವುದೇ ಈ ಡಿವೋರ್ಸ್​ಗೆ (Aamir Khan Divorce) ಕಾರಣ ಎಂದು ಗಾಸಿಪ್​ ಹಬ್ಬಿತ್ತು. ಆ ಎಲ್ಲ ವಿಚಾರಗಳ ಬಗ್ಗೆ ಆಮಿರ್​ ಈಗ ಸ್ಪಷ್ಟನೆ ನೀಡಿದ್ದಾರೆ. ಅವರು ನಟಿಸಿರುವ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈ ವೇಳೆ ಅವರು ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಡಿವೋರ್ಸ್​ ಬಗ್ಗೆ ಕೂಡ ಪ್ರಶ್ನೆ ಎದುರಾಯಿತು. ಅವುಗಳಿಗೆ ಉತ್ತರಿಸಿದ ಆಮಿರ್​ ಖಾನ್​ ಅವರು ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಸಂಸಾರ ಮತ್ತು ವಿಚ್ಛೇದನದ ಬಗ್ಗೆ ಅವರು ಮೌನ ಮುರಿದಿದ್ದಾರೆ.

‘ಕಿರಣ್​ ಮತ್ತು ನನ್ನ ನಡುವೆ ಪ್ರೀತಿ ಇದೆ. ಪರಸ್ಪರ ಗೌರವ ಇದೆ. ಈ ಸಂಬಂಧವನ್ನು ಜನರು ಅರ್ಥ ಮಾಡಿಕೊಳ್ಳೋಕೆ ಆಗಲ್ಲ. ಯಾಕೆಂದರೆ ಬೇರ್ಪಟ್ಟ ಬಳಿಕ ಯಾವುದೇ ಜೋಡಿಯ ನಡುವೆ ಈ ರೀತಿ ಸಂಬಂಧ ಇರುವುದಿಲ್ಲ. ಗಂಡ-ಹೆಂಡತಿ ರೂಪದಲ್ಲಿ ನಮ್ಮ ಸಂಬಂಧ ಇಲ್ಲ. ಆದರೆ ನಾವು ಒಂದೇ ಕುಟುಂಬದವರ ರೀತಿ ಇದ್ದೇವೆ. ಅವರು ನಮ್ಮದೇ ಬಿಲ್ಡಿಂಗ್​ನ ಇನ್ನೊಂದು ಫ್ಲೋರ್​ನಲ್ಲಿ ವಾಸವಾಗಿದ್ದಾರೆ’ ಎಂದು ಆಮಿರ್​ ಖಾನ್​ ಹೇಳಿದ್ದಾರೆ.

ಅದೇ ರೀತಿ ಮೊದಲ ಪತ್ನಿ ರೀನಾ ದತ್ತ ಬಗ್ಗೆಯೂ ಆಮಿರ್​ ಖಾನ್​ ಮಾತಾಡಿದ್ದಾರೆ. 1986ರಲ್ಲಿ ಆಮಿರ್​ ಖಾನ್​ ಮತ್ತು ರೀನಾ ದತ್ತ ಮದುವೆ ಮಾಡಿಕೊಂಡಿದ್ದರು. 2002ರಲ್ಲಿ ವಿಚ್ಛೇದನ ಪಡೆದುಕೊಂಡರು. ಬಳಿಕ ಕಿರಣ್​ ರಾವ್​ ಅವರನ್ನು ಆಮಿರ್​ ಮದುವೆ ಆದರು. ‘ನಾನು ತುಂಬ ಲಕ್ಕಿ. ನನ್ನ ಮೊದಲ ಹೆಂಡತಿ ರೀನಾ ಮತ್ತು ನಾನು ಆ ಸಮಯದಲ್ಲಿ ಚಿಕ್ಕವರಾಗಿದ್ದೆವು. ಇಬ್ಬರೂ ಜೊತೆಯಾಗಿ ಬೆಳೆದೆವು. ಪರಸ್ಪರ ಬೇರೆ ಆದ ಬಳಿಕವೂ ನಾವು ಜೊತೆಯಾಗಿ ಇದ್ದೇವೆ’ ಎಂದು ಆಮಿರ್ ಖಾನ್​ ಹೇಳಿದ್ದಾರೆ.

ಮೊದಲ ಪತ್ನಿ ರೀನಾ ಅವರಿಂದ ಸಾರಾ ಖಾನ್​ ಮತ್ತು ಜುನೈದ್​ ಖಾನ್​ ಎಂಬಿಬ್ಬರು ಮಕ್ಕಳನ್ನು ಆಮಿರ್​ ಖಾನ್​ ಪಡೆದರು. ಎರಡನೇ ಪತ್ನಿ ಕಿರಣ್​ ರಾವ್​ ಅವರಿಂದ ಪಡೆದ ಮಗನಿಗೆ ಆಜಾದ್​ ರಾವ್​ ಖಾನ್​ ಎಂದು ಹೆಸರು ಇಟ್ಟಿದ್ದಾರೆ. ಇಬ್ಬರು ಪತ್ನಿಯರಿಂದ ವಿಚ್ಛೇದನ ಪಡೆಯಲು ಮೂರನೇ ವ್ಯಕ್ತಿಗಳು ಕಾರಣ ಅಲ್ಲ ಎಂದು ಆಮಿರ್​ ಖಾನ್​ ಹೇಳಿದ್ದಾರೆ.

‘ನಾನು ರೀನಾ ಅವರಿಗೆ ವಿಚ್ಛೇದನ ನೀಡಿದಾಗ ನನ್ನ ಬದುಕಿನಲ್ಲಿ ಬೇರೆ ಯಾರೂ ಇರಲಿಲ್ಲ. ಆ ಸಂದರ್ಭದಲ್ಲಿ ನಾನು ಕಿರಣ್​ ಅವರ ಜೊತೆ ಡೇಟಿಂಗ್​ ಮಾಡುತ್ತಿದ್ದೆ ಅಂತ ಜನರು ನಂಬಿದ್ದಾರೆ. ಆದರೆ ಅದು ನಿಜವಲ್ಲ. ನಾನು ಕಿರಣ್​ ಅವರನ್ನು ‘ಲಗಾನ್​’ ಶೂಟಿಂಗ್​ ಸಮಯದಲ್ಲಿ ಭೇಟಿಯಾಗಿದ್ದು ನಿಜ. ಆದ್ರೂ ಪರಸ್ಪರರ ಬಗ್ಗೆ ನಮಗೆ ಏನೂ ತಿಳಿದಿರಲಿಲ್ಲ. ಸೆಟ್​ನಲ್ಲಿ ಇದ್ದ 300 ಜನರಲ್ಲಿ ಕಿರಣ್​ ಕೂಡ ಒಬ್ಬರಾಗಿದ್ದರು’ ಎಂದಿದ್ದಾರೆ ಆಮಿರ್​ ಖಾನ್​.

ಇದನ್ನೂ ಓದಿ:

ಆಮಿರ್​ ಖಾನ್​ ವಿರುದ್ಧ ರವೀನಾ ಟಂಡನ್​ ಸೇಡು; ದಶಕಗಳ ಬಳಿಕ ಬಾಯ್ಬಿಟ್ಟ ‘ಕೆಜಿಎಫ್​ 2’ ನಟಿ

ಮತ್ತೆ ಒಂದಾದ ಆಮಿರ್​ ಖಾನ್-ಕಿರಣ್​ ರಾವ್​; ಅಚ್ಚರಿ ತಂದ ಮಾಜಿ ದಂಪತಿಯ ನಿರ್ಧಾರ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ