The Kashmir Files: ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಾಣುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’; ಚಿತ್ರದ ಕಲೆಕ್ಷನ್ ಎಷ್ಟು ಗೊತ್ತಾ?
The Kashmir Files Box Office | Vivek Agnihotri: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮವಾಗಿ ಗಳಿಸುತ್ತಿದೆ. ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ನಲ್ಲಿ ದೊಡ್ಡ ಮಟ್ಟದ ಏರಿಕೆಯಾಗುತ್ತಿದೆ. ಚಿತ್ರದ ಗಳಿಕೆಯ ವಿವರ ಇಲ್ಲಿದೆ.
‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಪ್ರಸ್ತುತ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿರುವ ಚಿತ್ರ. ವಿವೇಕ್ ಅಗ್ನಿಹೋತ್ರಿ (Vivek Agnihotri) ನಿರ್ದೇಶನದ ಈ ಚಿತ್ರ ಹಿಂದಿಯಲ್ಲಿ ತಯಾರಾಗಿದ್ದು, ಮಾರ್ಚ್ 11ರಂದು ತೆರೆಕಂಡಿತ್ತು. ಅಂದೇ ‘ರಾಧೆ ಶ್ಯಾಮ್’ ಚಿತ್ರವೂ ರಿಲೀಸ್ ಆಗಿತ್ತು. ಪ್ರಭಾಸ್ ಚಿತ್ರದ ಬಗ್ಗೆ ಬಹಳ ಹಿಂದಿನಿಂದಲೂ ನಿರೀಕ್ಷೆ ಇದ್ದ ಕಾರಣ, ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ತೀವ್ರ ಪೈಪೋಟಿ ಏರ್ಪಡಬಹುದು ಎಂಬ ಅನುಮಾನಗಳಿದ್ದವು. ಆದರೆ ಎಲ್ಲರ ಲೆಕ್ಕಾಚಾರ ತಲೆಕೆಳಗಾಗಿದ್ದು, ದೇಶದಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ಜನರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನ 630 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡ ‘ದಿ ಕಾಶ್ಮೀರ್ ಫೈಲ್ಸ್’ ನಂತರ 2000 ಸ್ಕ್ರೀನ್ಗಳಿಗೆ ವಿಸ್ತಾರಗೊಂಡಿತು. ಇದೀಗ ಪ್ರದರ್ಶನಗಳಲ್ಲಿ ಮತ್ತಷ್ಟು ಏರಿಕೆಯಾಗಿದ್ದು, ಜನರು ಸರತಿ ಸಾಲಿನಲ್ಲಿ ನಿಂತು ಚಿತ್ರವನ್ನು ವೀಕ್ಷಿಸಲು ಮುಂದಾಗುತ್ತಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ಗೆ ಸಿಕ್ಕಿರುವ ಭರ್ಜರಿ ಪ್ರತಿಕ್ರಿಯೆಗೆ ಸಾಕ್ಷಿಯಾಗಿ ಗಳಿಕೆಯಲ್ಲೂ (The Kashmir Files Box Office) ತೀವ್ರ ಏರಿಕೆಯಾಗುತ್ತಿದೆ. ಈ ಕುರಿತ ವಿವರ ಇಲ್ಲಿದೆ.
‘ದಿ ಕಾಶ್ಮೀರ್ ಫೈಲ್ಸ್’ ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋಸ್ ಟ್ವಿಟರ್ನಲ್ಲಿ ವಿಶ್ವಾದ್ಯಂತ ಚಿತ್ರವು ಗಳಿಸಿರುವ ಮೊತ್ತದ ಕುರಿತು ಮಾಹಿತಿ ನೀಡಿದೆ. ಮೊದಲ ದಿನ 4.25 ಕೋಟಿ ರೂ ಮೊತ್ತವನ್ನು ಚಿತ್ರ ಗಳಿಸಿತ್ತು. ಎರಡನೇ ದಿನ 10.10 ಕೋಟಿ ರೂಗಳನ್ನು ಬಾಚಿಕೊಂಡಿತ್ತು. ವೀಕೆಂಡ್ ಕಾರಣ ಭಾನುವಾರ ಚಿತ್ರದ ಗಳಿಕೆ ಮತ್ತಷ್ಟು ಏರಿಕೆಯಾಗಿದ್ದು, 17.25 ಕೋಟಿ ರೂ ಗಳಿಸಿದೆ. ಈ ಮೂಲಕ ಮೂರೂ ದಿನದ ಗಳೆಕೆಯೂ ಏರುಗತಿಯಲ್ಲೇ ಸಾಗಿದ ಅಪರೂಪದ ಚಿತ್ರವಾಗಿ ‘ದಿ ಕಾಶ್ಮೀರ್ ಫೈಲ್ಸ್’ ದಾಖಲಾಗಿದೆ.
ಜೀ ಸ್ಟುಡಿಯೋಸ್ ಹಂಚಿಕೊಂಡ ಮಾಹಿತಿ:
The story of #TheKashmirFiles is uncovering the truth and breaking records worldwide! The movie is in cinemas now, book your tickets.https://t.co/LHqmDwPasGhttps://t.co/6cXZEj1iJc@mithunda_off @AnupamPKher @DarshanKumaar #ChinmayMandlekar #PallaviJoshi @vivekagnihotri pic.twitter.com/4UpEBUvmdl
— Zee Studios (@ZeeStudios_) March 14, 2022
ಬಾಕ್ಸಾಫೀಸ್ ತಜ್ಞ ತರಣ್ ಆದರ್ಶ್ ‘ದಿ ಕಾಶ್ಮೀರ್ ಫೈಲ್ಸ್’ ಭಾರತೀಯ ಮಾರುಕಟ್ಟೆಯಲ್ಲಿ ಗಳಿಸಿರುವ ಮೊತ್ತವನ್ನು ಗಮನದಲ್ಲಿಟ್ಟುಕೊಂಡು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೊದಲ ದಿನಕ್ಕೂ ಮೂರನೇ ದಿನಕ್ಕೂ ಚಿತ್ರದ ಗಳಿಕೆಯಲ್ಲಿ ಸುಮಾರು 325 ಪ್ರತಿಶತ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಭಾರತದಲ್ಲಿ ಚಿತ್ರವು 27 ಕೋಟಿ ರೂಗೂ ಹೆಚ್ಚು ಹಣವನ್ನು ಚಿತ್ರ ಗಳಿಸಿದೆ ಎಂದೂ ಅವರು ಹೇಳಿದ್ದಾರೆ.
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ‘ದಿ ಕಾಶ್ಮೀರ್ ಫೈಲ್ಸ್ಗೆ ಟ್ಯಾಕ್ಸ್ ಫ್ರೀ:
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವನ್ನು ವೀಕ್ಷಿಸಿದ್ದಾರೆ. ನಂತರ ಮಾತನಾಡಿದ ಅವರು, ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. ಗುಜರಾತ್, ಹರ್ಯಾಣ ಹಾಗೂ ಮಧ್ಯಪ್ರದೇಶಗಳಲ್ಲೂ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ.
ರಾಜ್ಯದಲ್ಲಿ ನಾಳೆ (ಮಂಗಳವಾರ) ಸಚಿವರು ಹಾಗೂ ಶಾಸಕರಿಗೆ ಬೆಂಗಳೂರಿನ ಮಂತ್ರಿ ಮಾಲ್ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ಸದನದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ: