ಡಾ. ರಾಜ್​ಕುಮಾರ್​ ಮೊಮ್ಮೊಗ ಧೀರೇನ್​​ ಜತೆ ‘ಜೇಮ್ಸ್​’ ನಿರ್ಮಾಪಕರ ಹೊಸ ಸಿನಿಮಾ ಅನೌನ್ಸ್​

ಡಾ. ರಾಜ್​ಕುಮಾರ್​ ಮೊಮ್ಮೊಗ ಧೀರೇನ್​​ ಜತೆ ‘ಜೇಮ್ಸ್​’ ನಿರ್ಮಾಪಕರ ಹೊಸ ಸಿನಿಮಾ ಅನೌನ್ಸ್​
ಧೀರೇನ್ ರಾಮ್ ಕುಮಾರ್

Dheeren Ramkumar: ಧೀರೇನ್​ ರಾಮ್​ ಕುಮಾರ್ ಅವರ​ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಕಿಶೋರ್​ ಪತ್ತಿಕೊಂಡ ನಿರ್ಮಾಣದ ಈ ಚಿತ್ರಕ್ಕೆ ಶಂಕರ್​ ಗುರು ನಿರ್ದೇಶನ ಮಾಡಲಿದ್ದಾರೆ.

TV9kannada Web Team

| Edited By: Madan Kumar

Apr 29, 2022 | 10:21 AM

ಡಾ. ರಾಜ್​ಕುಮಾರ್​ ಅವರ ಇಡೀ ಕುಟುಂಬವೇ ಕಲೆಗಾಗಿ ಮೀಸಲಾಗಿದೆ. ಅಣ್ಣಾವ್ರ ಮಕ್ಕಳು ಮಾತ್ರವಲ್ಲದೇ ಮೊಮ್ಮಕ್ಕಳು ಕೂಡ ಈಗ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ರಾಘವೇಂದ್ರ ರಾಜ್​ಕುಮಾರ್​ ಪುತ್ರರಾದ ವಿನಯ್​ ರಾಜ್​ಕುಮಾರ್​, ಯುವ ರಾಜ್​ಕುಮಾರ್​ ಅವರು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ರಾಮ್​ ಕುಮಾರ್​-ಪೂರ್ಣಿಮಾ ದಂಪತಿಯ ಮಕ್ಕಳಾದ ಧನ್ಯಾ ರಾಮ್​ ಕುಮಾರ್​ ಹಾಗೂ ಧೀರೇನ್​ ರಾಮ್​ ಕುಮಾರ್​ (Dheeren Ramkumar) ಅವರು ಈಗಾಗಲೇ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಇಂದು (ಏ.29) ಧೀರೇನ್​ ಜನ್ಮದಿನದ ಪ್ರಯುಕ್ತ ಅವರ ಹೊಸ ಸಿನಿಮಾ ಅನೌನ್ಸ್​ ಆಗಿದೆ. ಈ ಸಿನಿಮಾಗೆ ಹಣ ಹೂಡುತ್ತಿರುವುದು ‘ಜೇಮ್ಸ್​’ ಚಿತ್ರದ (James Movie) ನಿರ್ಮಾಪಕರು ಎಂಬುದು ವಿಶೇಷ. ಹೌದು, ಪುನೀತ್​ ರಾಜ್​ಕುಮಾರ್​  ನಟನೆಯ ‘ಜೇಮ್ಸ್​’ ಸಿನಿಮಾವನ್ನು ನಿರ್ಮಿಸಿದ್ದ ಕಿಶೋರ್​ ಪತ್ತಿಕೊಂಡ (Kishore Pathikonda) ಅವರೇ ಈಗ ಡಾ. ರಾಜ್​ಕುಮಾರ್​ ಮೊಮ್ಮಗ ಧೀರೇನ್​ ರಾಮ್​ ಕುಮಾರ್​  ಜೊತೆಗೆ ಕೈ ಜೋಡಿಸಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಮಾಡುವ ಮೂಲಕ ಧೀರೆನ್​ ಜನ್ಮದಿನಕ್ಕೆ ಶುಭ ಕೋರಲಾಗಿದೆ. ಈ ಸುದ್ದಿ ತಿಳಿದು ಡಾ. ರಾಜ್​ ಫ್ಯಾಮಿಲಿ ಅಭಿಮಾನಿಗಳು ಖುಷಿ ಆಗಿದ್ದಾರೆ.

ಧೀರೇನ್​ ರಾಮ್​ ಕುಮಾರ್​ ಅವರು ಈಗಾಗಲೇ ‘ಶಿವ 143’ ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರಕ್ಕೆ ಮಾನ್ವಿತಾ ಕಾಮತ್​ ನಾಯಕಿ. ಕಾರಣಾಂತರಗಳಿಂದ ಚಿತ್ರದ ಕೆಲಸಗಳು ವಿಳಂಬ ಆದವು. ಇತ್ತೀಚೆಗೆ ‘ಶಿವ 143’ ಸಿನಿಮಾದ ಹೊಸ ಹಾಡು ಬಿಡುಗಡೆ ಆಗಿ, ಪಡ್ಡೆಗಳ ನಿದ್ದೆ ಕೆಡಿಸಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಆ ಸಿನಿಮಾ ರಿಲೀಸ್​ ಆಗಲಿದೆ. ಅಷ್ಟರಲ್ಲಿ ಧೀರೇನ್​ ಅವರು ಹೊಸ ಚಿತ್ರ ಅನೌನ್ಸ್​ ಆಗಿದೆ.

‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ನಟಿಸಿದ್ದ ‘ಜೇಮ್ಸ್​’ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿತ್ತು. ಮೇಕಿಂಗ್​ನಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ರೀತಿಯಲ್ಲಿ ಕಿಶೋರ್​ ಪತ್ತಿಕೊಂಡ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಅವರ ನಿರ್ಮಾಣ ಸಂಸ್ಥೆಯಿಂದ ಮೂಡಿಬರಲಿರುವ ಎರಡನೇ ಸಿನಿಮಾಗೆ ಧೀರೇನ್​ ರಾಮ್​ಕುಮಾರ್​ ನಾಯಕನಾಗಿರುವುದು ವಿಶೇಷ. ‘ಅಭಿಮಾನಿ ದೇವರುಗಳೇ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹಾಗೂ ಆಶೀರ್ವಾದದೊಂದಿಗೆ ನನ್ನ ಮುಂದಿನ ಹೆಜ್ಜೆ’ ಎಂದು ಸೋಶಿಯಲ್​ ಮೀಡಿಯಾದಲ್ಲಿ ಧೀರೇನ್​ ಬರೆದುಕೊಂಡಿದ್ದಾರೆ.

ಈ ಸಿನಿಮಾಗೆ ಶಂಕರ್​ ಗುರು ನಿರ್ದೇಶನ ಮಾಡಲಿದ್ದಾರೆ. ಡಾಲಿ ಧನಂಜಯ ನಟನೆಯ ‘ಬಡವ ರಾಸ್ಕಲ್​’ ಸಿನಿಮಾಗೆ ನಿರ್ದೇಶನ ಮಾಡಿ ಗೆಲುವು ಕಂಡಿರುವ ಶಂಕರ್​ ಗುರು ಅವರು ಈ ಬಾರಿ ಧೀರೇನ್​ಗಾಗಿ ಯಾವ ರೀತಿಯ ಕಥೆ ಸಿದ್ಧಪಡಿಸಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಚಿತ್ರದ ಪಾತ್ರವರ್ಗದಲ್ಲಿ ಬೇರೆ ಯಾರೆಲ್ಲ ಇರಲಿದ್ದಾರೆ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.

ಪುನೀತ್​ ಧ್ವನಿಯೊಂದಿಗೆ ‘ಜೇಮ್ಸ್’ ಪ್ರದರ್ಶನ:

ಮಾ.17ರಂದು ‘ಜೇಮ್ಸ್​’ ಸಿನಿಮಾ ಬಿಡುಗಡೆ ಆದಾಗ ಅದರಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಧ್ವನಿ ಇರಲಿಲ್ಲ. ಆದರೆ ನಂತರ ಹೊಸ ತಂತ್ರಜ್ಞಾನದ ಮೂಲಕ ಅಪ್ಪು ಧ್ವನಿ ಅಳವಡಿಸಿ ಮರುಬಿಡುಗಡೆ ಮಾಡಲಾಯಿತು. ಪುನೀತ್​ ಧ್ವನಿ ಜೊತೆಗೆ ಸಿನಮಾ ನೋಡಿರುವ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಗಲ್ಲಾ ಪೆಟ್ಟಿಗೆಯಲ್ಲಿ ಈ ಸಿನಿಮಾ ಉತ್ತಮ ಕಲೆಕ್ಷನ್​ ಮಾಡಿದೆ. ನಿರ್ಮಾಪಕರಿಗೆ ಲಾಭ ತಂದುಕೊಟ್ಟಿದೆ. ಈಗ ಎರಡನೇ ಬಾರಿಗೆ ನಿರ್ಮಾಪಕ ಕಿಶೋರ್​ ಪತ್ತಿಕೊಂಡ ಅವರು ಅಣ್ಣಾವ್ರ ಕುಟುಂಬದ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಇದನ್ನೂ ಓದಿ:

ಬ್ರೇಕಿಂಗ್​ ನ್ಯೂಸ್​ ನೀಡಿದ ‘ಹೊಂಬಾಳೆ ಫಿಲ್ಮ್ಸ್​’: ಯುವ ರಾಜ್​ಕುಮಾರ್​ ಜತೆ ಹೊಸ ಸಿನಿಮಾ ಘೋಷಣೆ

ಮಾನ್ವಿತಾ-ಧೀರೇನ್​ ಲಿಪ್​ ಲಾಕ್​; ಪ್ರೇಮಿಗಳ ದಿನಕ್ಕೆ ರೊಮ್ಯಾಂಟಿಕ್​ ಆಗಿ ಕಾಣಿಸಿಕೊಂಡ ಜೋಡಿ

Follow us on

Related Stories

Most Read Stories

Click on your DTH Provider to Add TV9 Kannada