Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನರಂಜನೆಯ ರುಚಿ ನೀಡಲು ‘ತೋತಾಪುರಿ’ ಟೀಂ ರೆಡಿ- ಟ್ರೆಂಡಿಂಗ್ ನಲ್ಲಿ ಟ್ರೇಲರ್

ನವರಸ ನಾಯಕನ ಕಾಮಿಡಿ ಟೈಮಿಂಗ್, ವಿಜಯಪ್ರಸಾದ್ ಡೈಲಾಗ್ ಎರಡು ಸಿಂಕ್ ಆದ್ರೆ ಅಲ್ಲೊಂದು ಸೂಪರ್ ಹಿಟ್ ಸಿನಿಮಾ ಸೃಷ್ಟಿಯಾಗುತ್ತೆ ಅನ್ನೋದಕ್ಕೆ ನೀರ್ ದೋಸೆ ಸಾಕ್ಷಿ.

ಮನರಂಜನೆಯ ರುಚಿ ನೀಡಲು ‘ತೋತಾಪುರಿ’ ಟೀಂ ರೆಡಿ- ಟ್ರೆಂಡಿಂಗ್ ನಲ್ಲಿ ಟ್ರೇಲರ್
ತೋತಾತಪುರಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Apr 29, 2022 | 6:50 PM

ಹೇಳಿ ಕೇಳಿ ಇದು ಮಾವಿನ ಸೀಸನ್. ಮಾರುಕಟ್ಟೆಗೆ ಹೋಗಿ, ಯಾವ್ದೆ ಅಂಗಡಿಗೆ ಹೋಗಿ ಹಣ್ಣುಗಳ ರಾಜ ಮಾವು ಕೈ ಬೀಸಿ ಕರೆಯುತ್ತೆ. ತಿನ್ನಲೇ ಬೇಕು ಎನಿಸುತ್ತೆ. ಅದು ಹಣ್ಣುಗಳ ರಾಜನ ತಾಕತ್ತು. ಅದೇ ರೀತಿ ‘ತೋತಾಪುರಿ’ ಟ್ರೇಲರ್ ನೋಡಿದ ಮೇಲೆ ಸಿನಿಮಾ ನೋಡಲೇಬೇಕು ಎನ್ನುವ ಕಾತುರತೆ ಹೆಚ್ಚಾಗಿದೆ. ಸಿನಿಮಾವಾಗಿರೋ ತೋತಾಪುರಿ ಅದೆಷ್ಟು ರುಚಿಯಾಗಿರುತ್ತೆ ಅನ್ನೋದಕ್ಕೆ  ಕೊಂಚ ದಿನ ಕಾಯಬೇಕಷ್ಟೇ.

ನವರಸ ನಾಯಕನ ಕಾಮಿಡಿ ಟೈಮಿಂಗ್, ವಿಜಯಪ್ರಸಾದ್ ಡೈಲಾಗ್ ಎರಡು ಸಿಂಕ್ ಆದ್ರೆ ಅಲ್ಲೊಂದು ಸೂಪರ್ ಹಿಟ್ ಸಿನಿಮಾ ಸೃಷ್ಟಿಯಾಗುತ್ತೆ ಅನ್ನೋದಕ್ಕೆ ನೀರ್ ದೋಸೆ ಸಾಕ್ಷಿ. ಈಗ ಅದೇ ಜೋಡಿ ಬೆಟ್ಟದಷ್ಟು ನಿರೀಕ್ಷೆಯನ್ನು ಪ್ರೇಕ್ಷಕರ ಮನದಲ್ಲಿ ಸೃಷ್ಟಿ ಮಾಡಿ ‘ತೋತಾಪುರಿ’ಗಾಗಿ ಕಾಯುವಂತೆ ಮಾಡಿದೆ. ಪಕ್ಕಾ ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾ ತೋತಾಪುರಿ. ಹಾಗೆಂದ ಮಾತ್ರಕ್ಕೆ ಬರೀ ಕಾಮಿಡಿಯೇ ಇಲ್ಲ ಸಾಕಷ್ಟು ಉತ್ತಮ ವಿಚಾರಗಳ ಬಗ್ಗೆಯೂ ಸಿನಿಮಾ ಬೆಳಕು ಚೆಲ್ಲಿದೆ. ಟ್ರೇಲರ್ ಸೂಕ್ಷ್ಮವಾಗಿ ಗಮನಿಸಿದವರಿಗೆ ಅದು ತಿಳಿದಿದೆ. ಚಿತ್ರತಂಡ ಕೂಡ ಬೇರಯದ್ದೇನೋ ಹೇಳುವ ಪ್ರಯತ್ನ ಮಾಡಿದ್ದೀವಿ ಅನ್ನೋದನ್ನ ಸಾರಿ ಸಾರಿ ಹೇಳ್ತಿದೆ. ಸದ್ಯ ಟ್ರೇಲರ್ ಅತಿ ಕಡಿಮೆ ಅವಧಿಯಲ್ಲಿ ಐದು ಮಿಲಿಯನ್ಗೂ ಹೆಚ್ಚಿನ ಮನಸ್ಸುಗಳ ಪ್ರೀತಿಗೆ ಪಾತ್ರವಾಗಿ ಟ್ರೆಂಡಿಂಗ್ ನಲ್ಲಿದೆ.

ತೋತಾಪುರಿ ಸಿನಿಮಾ ಎಷ್ಟು ರಿಚ್ ಆಗಿ ಮೂಡಿ ಬಂದಿದೆಯೋ ಅದರ ಕಲಾ ಬಳಗ ಕೂಡ ಅಷ್ಟೇ ಶ್ರೀಮಂತವಾಗಿದೆ. ಅದಿತಿ ಪ್ರಭುದೇವ ನಾಯಕ ನಟಿಯಾಗಿ, ದತ್ತಣ್ಣ, ಸುಮನ ರಂಗನಾಥ್, ವೀಣಾ ಸುಂದರ್, ಧನಂಜಯ, ಹೇಮಾದತ್ತ್ ಹೀಗೆ ಹಲವು ಅನಿಭವಿ ಕಲಾವಿದರು ಚಿತ್ರಕ್ಕೆ ಮೆರುಗು ತಂದುಕೊಟ್ಟಿದ್ದಾರೆ. ಅನೂಪ್ ಸೀಳಿನ್ ಸಂಗೀತವೂ ಮ್ಯಾಜಿಕ್ ಮಾಡಲಿದೆ ಅನ್ನೋ ಕುರುಹು ‘ಬಾಗ್ಲು ತೆಗಿ ಮೇರಿ ಜಾನ್’ ಹಾಡು ನೀಡಿದೆ.  ಉಳಿದಂತೆ ನಿರಂಜನ್ ಬಾಬು ಕ್ಯಾಮೆರಾ ವರ್ಕ್, ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ. ಮೋನಿಫ್ಲಿಕ್ಸ್ ಸ್ಟುಡಿಯೋಸ್, ಸುರೇಶ್ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಪಕ ಕೆ ಎ ಸುರೇಶ್ ಅದ್ದೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಮನರಂಜನೆಯ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಇದನ್ನೂ ಓದಿ: ‘ನನಗೆ ಇಷ್ಟು ದೊಡ್ಡ ಯಶಸ್ಸು ಸಿಕ್ಕಿದ್ದು ಇದೇ ಮೊದಲು’; ಎಲ್ಲರಿಗೂ ಧನ್ಯವಾದ ತಿಳಿಸಿದ ‘ತೋತಾಪುರಿ’ ಜಗ್ಗೇಶ್​

 ತೋತಾಪುರಿ; ರುಚಿಗೆ ಪ್ರೇಕ್ಷಕರು ಫಿದಾ; ದೇಸಿ ಫೈಲ್ಸ್; ಎಂದು ಹೊಗಳಿಕೆ