Sign In

By signing in or creating an account, you agree with Associated Broadcasting Company's Terms & Conditions and Privacy Policy.

Radhika Pandit: ನಾಚಿ ನೀರಾದ ರಾಧಿಕಾ ಪಂಡಿತ್; ವೈರಲ್ ಆಯ್ತು ಫೋಟೋ

2016ರಲ್ಲಿ ಯಶ್ ಅವರ ಜತೆ ಹಸೆಮಣೆ ಏರಿದರು. ಆ ಬಳಿಕ ಅವರು ಆ್ಯಕ್ಟಿಂಗ್​​ನಲ್ಲಿ ಆ್ಯಕ್ಟೀವ್ ಆಗಿದ್ದಿದ್ದು ಕಡಿಮೆಯೇ. ಹೆಚ್ಚು ಸಮಯವನ್ನು ಕುಟುಂಬಕ್ಕೆ ಮೀಸಲಿಟ್ಟರು. ಈಗ ಮಕ್ಕಳ ಆರೈಕೆಯಲ್ಲಿ ರಾಧಿಕಾ ಬ್ಯುಸಿ ಆಗಿದ್ದಾರೆ.

Radhika Pandit: ನಾಚಿ ನೀರಾದ ರಾಧಿಕಾ ಪಂಡಿತ್; ವೈರಲ್ ಆಯ್ತು ಫೋಟೋ
ರಾಧಿಕಾ ಪಂಡಿತ್ (ಚಿತ್ರ ಕೃಪೆ: ಇನ್​ಸ್ಟಾಗ್ರಾಮ್)
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Apr 29, 2022 | 9:31 PM

ನಟಿ ರಾಧಿಕಾ ಪಂಡಿತ್ (Radhika Pandit) ನಟನೆಯಿಂದ ದೂರ ಉಳಿದುಕೊಂಡಿದ್ದಾರೆ ನಿಜ. ಆದರೆ, ಅವರು ಸೋಶಿಯಲ್ ಮೀಡಿಯಾದಿಂದ (Scoail Media) ದೂರ ಉಳಿದಿಲ್ಲ. ಇನ್​ಸ್ಟಾಗ್ರಾಮ್​ನಲ್ಲಿ (Instagram) ಸದಾ ಆ್ಯಕ್ಟೀವ್ ಆಗಿರುವ ಅವರು ಹೊಸಹೊಸ ಫೋಟೋ ಹಂಚಿಕೊಳ್ಳುತ್ತಾರೆ. ಅಭಿಮಾನಿಗಳು ಕೇಳುವ ಪ್ರಶ್ನೆಗೆ ಉತ್ತರ ನೀಡುತ್ತಾರೆ. ಮಕ್ಕಳ ತುಂಟಾಟದ ಬಗ್ಗೆ ಅಪ್​ಡೇಟ್​ ನೀಡುತ್ತಾರೆ. ಈಗ ರಾಧಿಕಾ ಪಂಡಿತ್ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಖತ್ ಖುಷಿಪಟ್ಟಿದ್ದಾರೆ. ಈ ಫೋಟೋ ಅವರ ಅಭಿಮಾನಿಗಳ ವಲಯದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಾಧಿಕಾ ಪಂಡಿತ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ‘ಮೊಗ್ಗಿನ ಮನಸು’ ಸಿನಿಮಾ ಮೂಲಕ ಗಮನ ಸೆಳೆದ ಅವರು ಸಾಕಷ್ಟು ಹೀರೋಗಳ ಜತೆ ತೆರೆ ಹಂಚಿಕೊಂಡರು. 2016ರಲ್ಲಿ ಯಶ್ ಅವರ ಜತೆ ಹಸೆಮಣೆ ಏರಿದರು. ಆ ಬಳಿಕ ಅವರು ಆ್ಯಕ್ಟಿಂಗ್​​ನಲ್ಲಿ ಆ್ಯಕ್ಟೀವ್ ಆಗಿದ್ದಿದ್ದು ಕಡಿಮೆಯೇ. ಹೆಚ್ಚು ಸಮಯವನ್ನು ಕುಟುಂಬಕ್ಕೆ ಮೀಸಲಿಟ್ಟರು. ಈಗ ಮಕ್ಕಳ ಆರೈಕೆಯಲ್ಲಿ ರಾಧಿಕಾ ಬ್ಯುಸಿ ಆಗಿದ್ದಾರೆ.

ರಾಧಿಕಾ ಪಂಡಿತ್ ಹೊಸ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ನಾಚಿಕೊಂಡಿದ್ದಾರೆ. ‘ನಾನೂ ನಾಚುತ್ತೇನೆ’ ಎನ್ನುವ ಕ್ಯಾಪ್ಶನ್​ನೊಂದಿಗೆ ರಾಧಿಕಾ ಪಂಡಿತ್ ಈ ಫೋಟೋ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಹಾರ್ಟ್​ ಎಮೋಜಿಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಅಲ್ಲದೆ, ಅನೇಕರು ಫೋಟೋ ಅದ್ಭುತವಾಗಿದೆ ಎನ್ನುವ ಕಮೆಂಟ್ ಹಾಕುತ್ತಿದ್ದಾರೆ.

‘ಕೆಜಿಎಫ್ 2’ ಗೆಲುವಿನ ಅಲೆಯಲ್ಲಿ ಯಶ್ ತೇಲುತ್ತಿದ್ದಾರೆ. ಇದನ್ನು ಸಂಭ್ರಮಿಸಲು ಇಡೀ ಚಿತ್ರತಂಡ ಕುಟುಂಬದ ವೆಕೇಶನ್​ಗೆ ತೆರಳಿತ್ತು. ರಾಧಿಕಾ ಅವರನ್ನು ತಬ್ಬಿ ಯಶ್ ಮುತ್ತಿಡುತ್ತಿರುವ ಫೋಟೋ ವೈರಲ್ ಆಗಿತ್ತು. ಈ ಫೋಟೋ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದರು. ಇವರು ರಜೆಯ ಮಜ ಕಳೆಯೋಕೆ ಎಲ್ಲಿಗೆ ತೆರಳಿದ್ದರು ಎನ್ನುವ ವಿಚಾರ ತಿಳಿದು ಬಂದಿಲ್ಲ.

ಸದ್ಯ, ಯಶ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ. ‘ಕೆಜಿಎಫ್ 3’ ಸಿನಿಮಾ ಕೆಲಸಗಳು ಯಾವಾಗ ಆರಂಭವಾಗುತ್ತದೆ ಎನ್ನುವ ಪ್ರಶ್ನೆಯೂ ಇದೆ. ಇವುಗಳ ಮಧ್ಯೆ ರಾಧಿಕಾ ಪಂಡಿತ್​ಗೆ ನಟನೆಗೆ ಮರಳುವಂತೆ ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ. ಆದರೆ, ರಾಧಿಕಾ ಪಂಡಿತ್ ಅವರ ಕಡೆಯಿಂದ ಇದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: ರಾಧಿಕಾ ಪಂಡಿತ್ ಮನೆಯಲ್ಲಿ ಯುಗಾದಿ ಸಂಭ್ರಮ; ಹೋಳಿಗೆ ಊಟ ಸವಿದ ಯಶ್​ ಕುಟುಂಬ

Radhika Pandit: ಪತ್ನಿ ರಾಧಿಕಾ ಪಂಡಿತ್ ಕೆನ್ನೆಗೆ ಮುತ್ತಿಟ್ಟ ಯಶ್; ಫೋಟೋ ವೈರಲ್

Published On - 9:30 pm, Fri, 29 April 22