‘ನಿಮ್ಮ ಅಜ್ಞಾನ ನಿಜಕ್ಕೂ ದಿಗ್ಭ್ರಮೆಗೊಳಿಸಿದೆ’; ಕಡ್ಡಿ ಮುರಿದಂತೆ ಹೇಳಿದ ನಟಿ ರಮ್ಯಾ

‘ನಿಮ್ಮ ಅಜ್ಞಾನ ನಿಜಕ್ಕೂ ದಿಗ್ಭ್ರಮೆಗೊಳಿಸಿದೆ’; ಕಡ್ಡಿ ಮುರಿದಂತೆ ಹೇಳಿದ ನಟಿ ರಮ್ಯಾ
ರಮ್ಯಾ-ಅಜಯ್ ದೇವಗನ್

ದಕ್ಷಿಣದ ಭಾಷೆಗಳ ಸಿನಿಮಾವನ್ನು ಹಿಂದಿಯಲ್ಲಿ ಡಬ್​ ಮಾಡುವುದು ಹಾಗೂ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವುದು ಎರಡು ಪ್ರತ್ಯೇಕವಾದ ವಿಚಾರ. ಅದನ್ನು ಅಜಯ್​ ದೇವಗನ್​ ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಅನೇಕರು ಕಿವಿ ಹಿಂಡುತ್ತಿದ್ದಾರೆ.

TV9kannada Web Team

| Edited By: Rajesh Duggumane

Apr 28, 2022 | 5:36 PM

ಅಜಯ್ ದೇವಗನ್ (Ajay Devgn) ಮಾಡಿರುವ ಒಂದು ಟ್ವೀಟ್ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ‘ಹಿಂದಿ ರಾಷ್ಟ್ರ ಭಾಷೆ’ ಎಂದು ಹೇಳುವ ಮೂಲಕ ಅವರು ಪೇಚಿಗೆ ಸಿಲುಕಿದ್ದಾರೆ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದು ಸತ್ಯ. ಆದರೆ, ಈ ಮೊದಲು ಹಿಂದಿ ನಮ್ಮ ದೇಶದ ರಾಷ್ಟ್ರ ಭಾಷೆ ಎಂಬುದನ್ನು ತಲೆಯಲ್ಲಿ ತುಂಬಲಾಗಿತ್ತು. ಪಠ್ಯಗಳಲ್ಲೂ ಅದನ್ನೇ ಸೇರಿಸಲಾಗಿತ್ತು. ಆದರೆ, ಈಗ ಅನೇಕರಲ್ಲಿ ಜಾಗೃತಿ ಮೂಡಿದೆ. ‘ಹಿಂದಿ ನಮ್ಮ ರಾಷ್ಟ್ರ ಭಾಷೆ’ ಎಂಬ ಸುಳ್ಳನ್ನು ಹೇಳಿದರೆ ಜನರು ನಗುತ್ತಾರೆ. ಆದಾಗ್ಯೂ, ಅಜಯ್​ ದೇವಗನ್ ಈ ಹೇಳಿಕೆಯನ್ನು ನೀಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ನಟಿ ರಮ್ಯಾ (Ramya) ಬೋಲ್ಡ್ ಹೇಳಿಕೆ ನೀಡಿದ್ದಾರೆ.

ಹಿಂದಿ ಬಗ್ಗೆ ಸುದೀಪ್ ಹೇಳಿದ ಮಾತು ಚರ್ಚೆ ಹುಟ್ಟು ಹಾಕಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ್ದ ಅಜಯ್ ​ದೇವಗನ್, ‘ನನ್ನ ಸಹೋದರ ಕಿಚ್ಚ ಸುದೀಪ್​ ಅವರೇ.. ನಿಮ್ಮ ಪ್ರಕಾರ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂಬುದಾದರೆ ನಿಮ್ಮ ಮಾತೃಭಾಷೆಯ ಸಿನಿಮಾಗಳನ್ನು ಹಿಂದಿಗೆ ಡಬ್ ಮಾಡಿ ನೀವೇಕೆ ರಿಲೀಸ್​ ಮಾಡುತ್ತೀರಿ? ಅಂದು, ಇಂದು ಎಂದೆಂದಿಗೂ ಹಿಂದಿಯೇ ನಮ್ಮ ರಾಷ್ಟ್ರ ಭಾಷೆ ಆಗಿರಲಿದೆ. ಜನ ಗಣ ಮನ’ ಎಂದಿದ್ದಾರೆ. ಅವರ ಈ ಮಾತಿಗೆ ಅನೇಕರಿಂದ ಖಂಡನೆ ವ್ಯಕ್ತವಾಗುತ್ತಿದೆ.

ರಮ್ಯಾ ಕೂಡ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ‘ಹಿಂದಿ ನಮ್ಮ ರಾಷ್ಟ್ರಭಾಷೆಯಾಗಿ ಉಳಿದಿಲ್ಲ. ಅಜಯ್ ದೇವಗನ್ ಅವರೇ ನಿಮ್ಮ ಅಜ್ಞಾನ ನನ್ನನ್ನು ದಿಗ್ಭ್ರಮೆಗೊಳಿಸಿದೆ. ಕೆಜಿಎಫ್, ಪುಷ್ಪ ಹಾಗೂ ಆರ್​ಆರ್​ಆರ್​ ಹಿಂದಿ ಬೆಲ್ಟ್​ನಲ್ಲಿ ಉತ್ತಮ ಪರ್ಫಾರ್ಮೆನ್ಸ್ ಮಾಡಿರುವುದು ನಿಜಕ್ಕೂ ಗ್ರೇಟ್. ಕಲೆಗೆ ಭಾಷೆಯ ತಡೆ ಇಲ್ಲ. ನಿಮ್ಮ ಸಿನಿಮಾಗಳನ್ನು ನಾವು ನೋಡಿ ಆನಂದಿಸಿದಂತೆ ದಯವಿಟ್ಟು ನಮ್ಮ ಸಿನಿಮಾಗಳನ್ನು ನೋಡಿ ನೀವೂ ಆನಂದಿಸಿ’ ಎಂದು ಬರೆದುಕೊಂಡಿರುವ ಅವರು, ‘ಹಿಂದಿ ಹೇರಿಕೆ ನಿಲ್ಲಿಸಿ’ ಎನ್ನುವ ಹ್ಯಾಶ್​ಟ್ಯಾಗ್ ನೀಡಿದ್ದಾರೆ.

ದಕ್ಷಿಣದ ಭಾಷೆಗಳ ಸಿನಿಮಾವನ್ನು ಹಿಂದಿಯಲ್ಲಿ ಡಬ್​ ಮಾಡುವುದು ಹಾಗೂ ಹಿಂದಿ ರಾಷ್ಟ್ರ ಭಾಷೆ ಅಲ್ಲ ಎನ್ನುವುದು ಎರಡು ಪ್ರತ್ಯೇಕವಾದ ವಿಚಾರ. ಅದನ್ನು ಅಜಯ್​ ದೇವಗನ್​ ಅವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ ಎಂದು ಅನೇಕರು ಕಿವಿ ಹಿಂಡುತ್ತಿದ್ದಾರೆ.

ಇದನ್ನೂ ಓದಿ: ಹಿಂದಿ ವಿವಾದ: ಸುದೀಪ್​ ವರ್ಸಸ್​ ಅಜಯ್​ ದೇವಗನ್​ ಕಾಂಟ್ರವರ್ಸಿ ಶುರು ಆಗಿದ್ದು ಹೇಗೆ? ಇಲ್ಲಿದೆ ವಿವರ..

ಅಜಯ್​ ದೇವಗನ್ ಟ್ವೀಟ್ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದೇನು?

Follow us on

Related Stories

Most Read Stories

Click on your DTH Provider to Add TV9 Kannada