ಮಾನ್ವಿತಾ-ಧೀರೇನ್ ಲಿಪ್ ಲಾಕ್; ಪ್ರೇಮಿಗಳ ದಿನಕ್ಕೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡ ಜೋಡಿ
‘ಶಿವ 143’ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಧೀರೇನ್ ರಾಮ್ಕುಮಾರ್ ಬೋಲ್ಡ್ ಆದಂತಹ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಅವರಿಗೆ ಮಾನ್ವಿತಾ ಕಾಮತ್ ಸಾಥ್ ನೀಡಿದ್ದಾರೆ.
ನಟಿ ಮಾನ್ವಿತಾ ಕಾಮತ್ (Manvitha Kamath) ಅವರು ಚಂದನವನದಲ್ಲಿ ಸಖತ್ ಜನಪ್ರಿಯತೆ ಪಡೆದುಕೊಂಡಿದ್ದಾರೆ. ‘ಕೆಂಡಸಂಪಿಗೆ’, ‘ಟಗರು’, ‘ಚೌಕ’ ಸಿನಿಮಾಗಳ ಮೂಲಕ ಅವರ ಖ್ಯಾತಿ ಕರುನಾಡಿನಾದ್ಯಂತ ಹಬ್ಬಿದೆ. ಸಿನಿಮಾ ಮತ್ತು ಪಾತ್ರಗಳ ಆಯ್ಕೆಯಲ್ಲಿ ತಮ್ಮದೇ ಆದ ಒಂದಷ್ಟು ನಿಯಮಗಳನ್ನು ಪಾಲಿಸುತ್ತಿರುವ ಅವರು ಈಗ ‘ಶಿವ 143’ (Shiva 143 Movie) ಚಿತ್ರದ ಮೂಲಕ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಈ ಚಿತ್ರದಲ್ಲಿ ಡಾ. ರಾಜ್ಕುಮಾರ್ ಕುಟುಂಬದ ಕುಡಿ ಧೀರೇನ್ ರಾಮ್ಕುಮಾರ್ ಮತ್ತು ಮಾನ್ವಿತಾ ಕಾಮತ್ ಜೋಡಿಯಾಗಿ ನಟಿಸಿದ್ದಾರೆ. ಪ್ರೇಮಿಗಳ ದಿನದ ಪ್ರಯುಕ್ತ ಇಂದು (ಫೆ.14) ‘ಶಿವ 143’ ಸಿನಿಮಾದ ಹೊಸ ಹಾಡು ಬಿಡುಗಡೆ ಆಗಿದೆ. ಈ ಹಾಡಿನಲ್ಲಿ ಮಾನ್ವಿತಾ ಕಾಮತ್ ಹಾಗೂ ಧೀರೇನ್ ರಾಮ್ಕುಮಾರ್ (Dheeren Ramkumar) ತುಂಬ ಬೋಲ್ಡ್ ಆಗಿ ನಟಿಸಿದ್ದಾರೆ. ಇಬ್ಬರ ನಡುವಿನ ಲಿಪ್ ಲಾಕ್ ದೃಶ್ಯಗಳು ಪಡ್ಡೆಗಳ ಕಣ್ಣು ಕುಕ್ಕುತ್ತಿವೆ. ಸಖತ್ ರೊಮ್ಯಾಂಟಿಕ್ ಆಗಿ ಮೂಡಿಬಂದಿರುವ ಈ ಹಾಡಿನ ದೃಶ್ಯ ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಒಂದಲ್ಲ ಎರಡಲ್ಲ, ಹತ್ತಾರು ಬಾರಿ ಮಾನ್ವಿತಾ ಮತ್ತು ಧೀರೇನ್ ಲಿಪ್ ಲಾಕ್ ಮಾಡಿದ್ದಾರೆ. ಈ ಮೂಲಕ ‘ಶಿವ 143’ ಚಿತ್ರದ ಮೇಲಿನ ಕೌತುಕ ಹೆಚ್ಚುವಂತೆ ಮಾಡಿದ್ದಾರೆ.
ಪ್ರೇಮಿಗಳ ದಿನದ ಸಲುವಾಗಿ ಬಿಡುಗಡೆ ಆಗಿರುವ ‘ಮಳೆ ಹನಿಯೇ..’ ಹಾಡಿಗೆ ಕ್ರಾಂತಿ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ನಿಹಾಲ್ ಮತ್ತು ಪೃಥ್ವಿ ಭಟ್ ಕಂಠದಿಂದ ಈ ಹಾಡು ಮೂಡಿಬಂದಿದೆ. ಈ ಗೀತೆಯಲ್ಲಿ ಮಾನ್ವಿತಾ ಕಾಮತ್ ಮತ್ತು ಧೀರೇನ್ ಕಾಣಸಿಕೊಂಡಿರುವ ಪರಿ ನೋಡಿ ಪ್ರೇಕ್ಷಕರು ಅಚ್ಚರಿಪಟ್ಟಿದ್ದಾರೆ. ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಶಿವ 143’ ಚಿತ್ರಕ್ಕೆ ಅನಿಲ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಧೀರೇನ್ ರಾಮ್ಕುಮಾರ್ ಅವರಿಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲೇ ಅವರು ಬೋಲ್ಡ್ ಆದಂತಹ ಪಾತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಅವರಿಗೆ ಮಾನ್ವಿತಾ ಕಾಮತ್ ಸಾಥ್ ನೀಡಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗುವ ಸೂಚನೆ ಸಿಕ್ಕಿದೆ. ಈ ಹಾಡಿನಲ್ಲಿ ಬಗೆಬಗೆಯ ಮುತ್ತಿನಾಟ ಇರುವುದು ಯಾಕೆ? ಕಿಸ್ಸಿಂಗ್ ದೃಶ್ಯಗಳಿಗೆ ಕಥೆಯಲ್ಲಿ ಎಷ್ಟು ಮಹತ್ವ ಇದೆ? ಎಂಬಿತ್ಯಾದಿ ಪ್ರಶ್ನೆಗಳು ಈಗ ಪ್ರೇಕ್ಷಕರ ಮನದಲ್ಲಿ ಮೂಡಿವೆ. ಈ ಚಿತ್ರಕ್ಕೆ ಜಯಣ್ಣ, ಭೋಗೇಂದ್ರ ಮತ್ತು ಡಾ. ಸೂರಿ ಬಂಡವಾಳ ಹೂಡಿದ್ದಾರೆ.
ಬಹಳ ಹಿಂದೆಯೇ ಸೆಟ್ಟೇರಿದ್ದ ‘ಶಿವ 143’ ಚಿತ್ರ ಈಗಾಗಲೇ ಬಿಡುಗಡೆ ಆಗಿರಬೇಕಿತ್ತು. ಆದರೆ ಕಾರಣಾಂತರಗಳಿಂದ ಸಿನಿಮಾದ ಕೆಲಸಗಳು ವಿಳಂಬ ಆದವು. ಆದಷ್ಟು ಬೇಗ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ.
ಇದನ್ನೂ ಓದಿ: