ಪೃಥ್ವಿ ಅಂಬರ್​-ಮಾನ್ವಿತಾ ಕಾಮತ್​ ಈಗ ‘ಹ್ಯಾಪಿಲಿ ಮ್ಯಾರೀಡ್’

ಅರುಣ್​ಕುಮಾರ್​ ಎಮ್.​ ಮತ್ತು ಸಾಬು ಅಲೋಸಿಸ್​ ‘ಲೈಫ್​ ಈಸ್​ ಬ್ಯೂಟಿಫುಲ್​’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತಂಡ ‘ಹ್ಯಾಪಿಲಿ ಮ್ಯಾರೀಡ್’ ಚಿತ್ರಕ್ಕಾಗಿ ಮತ್ತೆ ಒಂದಾಗಿದೆ.

ಪೃಥ್ವಿ ಅಂಬರ್​-ಮಾನ್ವಿತಾ ಕಾಮತ್​ ಈಗ ‘ಹ್ಯಾಪಿಲಿ ಮ್ಯಾರೀಡ್’
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Aug 30, 2021 | 5:16 PM

2020ರ ಆರಂಭದಲ್ಲಿ ತೆರೆಕಂಡಿದ್ದ ‘ದಿಯಾ’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರದ ನಂತರ ನಟ ಪೃಥ್ವಿ ಅಂಬರ್​ಗೆ ಸಿನಿಮಾ ಆಫರ್​ಗಳ ಸಂಖ್ಯೆ ಹೆಚ್ಚಿದೆ. ಅವರು ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರು ‘ಹ್ಯಾಪಿಲಿ ಮ್ಯಾರೀಡ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪೃಥ್ವಿ ನಟನೆಯ ‘ಲೈಫ್​ ಈಸ್​ ಬ್ಯೂಟಿಫುಲ್​’ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳುತ್ತಿರುವ ನಿರ್ದೇಶಕರೇ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ ಅನ್ನೋದು ವಿಶೇಷ.

ಅರುಣ್​ಕುಮಾರ್​ ಎಮ್.​ ಮತ್ತು ಸಾಬು ಅಲೋಸಿಸ್​ ‘ಲೈಫ್​ ಈಸ್​ ಬ್ಯೂಟಿಫುಲ್​’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ತಂಡ ‘ಹ್ಯಾಪಿಲಿ ಮ್ಯಾರೀಡ್’ ಚಿತ್ರಕ್ಕಾಗಿ ಮತ್ತೆ ಒಂದಾಗಿದೆ. ಈ ಚಿತ್ರಕ್ಕೆ ಮಾನ್ವಿತಾ ಕಾಮತ್​ ನಾಯಕಿ. ಇಂದು (ಆಗಸ್ಟ್​ 30) ಚಿತ್ರದ ಪೋಸ್ಟರ್​ ಜತೆ ಟೈಟಲ್​ ಲಾಂಚ್​ ಆಗಿದೆ.

ಫಸ್ಟ್​ ಪೋಸ್ಟರ್​ನಲ್ಲಿ ಪೃಥ್ವಿ ಅಂಬರ್ ಹಾಗೂ ಮಾನ್ವಿತಾ ಕಾಮತ್​ ಮದುವೆ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ  ‘ಹ್ಯಾಪಿಲಿ ಮ್ಯಾರೀಡ್’ ಎಂದು ಬೋರ್ಡ್​ ಹಿಡಿದುಕೊಂಡಿದ್ದಾರೆ. ಬೋರ್ಡ್​ಗೆ ರಕ್ತ ಬಡಿದ ಚಾಕು ಇದೆ. ಪೃಥ್ವಿ ಮತ್ತು ಮಾನ್ವಿತಾ ನಗುಮುಖದಲ್ಲಿದ್ದಾರೆ.

ಕೊವಿಡ್​ ಎರಡನೇ ಅಲೆ ಕಾಣಿಸಿಕೊಳ್ಳುವುದಕ್ಕೂ ಮೊದಲು ದಿಯಾ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರ  ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಇದು ಚಿತ್ರರಂಗದಲ್ಲಿ ಪೃಥ್ವಿ ಅಂಬರ್​ ಮೈಲೇಜ್​ ಕೊಟ್ಟಿತ್ತು.  ಸದ್ಯ, ಪೃಥ್ವಿ ಅಂಬರ್ ‘ಶುಗರ್​ಲೆಸ್’​, ‘ಲೈಫ್​ ಈಸ್​ ಬ್ಯೂಟಿಫುಲ್’, ‘ಬೈರಾಗಿ’ ಚಿತ್ರದ ಕೆಲಸದಲ್ಲಿ ಪೃಥ್ವಿ ಬ್ಯುಸಿಯಾಗಿದ್ದಾರೆ. ‘ದಿಯಾ’ ಹಿಂದಿ ರಿಮೇಕ್​ನಲ್ಲೂ ಅವರು ಹೀರೋ. ತಮಿಳು ಚಿತ್ರದಲ್ಲೂ ಪೃಥ್ವಿ ನಟಿಸುತ್ತಿದ್ದಾರೆ.

ಇದನ್ನೂ ಓದಿ: ಆಟೋ-ಕಾರುಗಳ ಮೇಲೆ ಶಿವಣ್ಣನ ಹುಲಿವೇಷ ವೈರಲ್​; ಡಾಲಿ ಜೊತೆ ‘ಬೈರಾಗಿ’ ತಂಡ ಈಗೇನು ಮಾಡುತ್ತಿದೆ?​

ಕೃಷಿ ಹಾಗೂ ಸ್ಕ್ರಿಪ್ಟ್​ ಕೆಲಸಗಳಲ್ಲಿ ಬ್ಯುಸಿಯಾದ ‘ದಿಯಾ’ ಪೃಥ್ವಿ ಅಂಬರ್; ಇದು ಲಾಕ್​ಡೌನ್​ ದಿನಚರಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ