ಇರಾ ಖಾನ್ ಹಂಚಿಕೊಂಡ ಈ ಫೋಟೋದಲ್ಲಿದ್ದಾರೆ ಮಾಜಿ ಸ್ಟಾರ್ ನಟ; ಯಾರೆಂದು ಗುರುತಿಸುತ್ತೀರಾ?
ಫಿಲ್ಮಿ ಕುಟುಂಬದ ಹಿನ್ನೆಲೆ ಇರುವ ಯುವಕ-ಯುವತಿಯರು ಸುಲಭವಾಗಿ ಚಿತ್ರರಂಗಕ್ಕೆ ಬಂದು ಬಿಡಬಹುದು. ಆದರೆ ಯಶಸ್ಸು ಗಳಿಸುವುದು ಸುಲಭ ಅಲ್ಲ. ಒಂದು ವೇಳೆ ಯಶಸ್ಸು ಸಿಕ್ಕರೂ ಅದನ್ನು ಉಳಿಸಿಕೊಂಡು ಮುಂದೆ ಸಾಗುವುದು ಸಿಕ್ಕಾಪಟ್ಟೆ ಕಷ್ಟದ ಕೆಲಸ.
Updated on:May 05, 2022 | 4:04 PM

ಇರಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್. ಇನ್ಸ್ಟಾಗ್ರಾಮ್ನಲ್ಲಿ ಅವರು ಹತ್ತು-ಹಲವು ಫೋಟೋ ಹಂಚಿಕೊಳ್ಳುತ್ತಾರೆ. ಆಗಾಗ ಬಾಯ್ಫ್ರೆಂಡ್ ಜತೆ ಇರುವ ಫೋಟೋ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.

ಈಗ ಇರಾ ಖಾನ್ ಅವರು ಈದ್ ಹಬ್ಬದ ಪ್ರಯುಕ್ತ ಒಂದು ಫೋಟೋ ಹಂಚಿಕೊಂಡಿದ್ದಾರೆ. ಅದರಲ್ಲಿ ಮಾಜಿ ಸ್ಟಾರ್ ನಟನೂ ಇದ್ದಾರೆ.

ಫಿಲ್ಮಿ ಕುಟುಂಬದ ಹಿನ್ನೆಲೆ ಇರುವ ಯುವಕ-ಯುವತಿಯರು ಸುಲಭವಾಗಿ ಚಿತ್ರರಂಗಕ್ಕೆ ಬಂದು ಬಿಡಬಹುದು. ಆದರೆ ಯಶಸ್ಸು ಗಳಿಸುವುದು ಸುಲಭ ಅಲ್ಲ. ಒಂದು ವೇಳೆ ಯಶಸ್ಸು ಸಿಕ್ಕರೂ ಅದನ್ನು ಉಳಿಸಿಕೊಂಡು ಮುಂದೆ ಸಾಗುವುದು ಸಿಕ್ಕಾಪಟ್ಟೆ ಕಷ್ಟದ ಕೆಲಸ.

ಬಾಲಿವುಡ್ ನಟ ಆಮಿರ್ ಖಾನ್ ಅವರ ಸಂಬಂಧಿ ಇಮ್ರಾನ್ ಖಾನ್ ವಿಚಾರದಲ್ಲಿ ಹಾಗೆಯೇ ಆಗಿತ್ತು. ಒಂದೆರಡು ಸಿನಿಮಾಗಳಲ್ಲಿ ಯಶಸ್ಸು ಪಡೆದ ಅವರು ನಂತರ ನಟನೆಗೆ ವಿದಾಯ ಹೇಳಬೇಕಾಯಿತು.

ಈಗ ಇರಾ ಹಂಚಿಕೊಂಡ ಫೋಟೋದಲ್ಲಿ ಇಮ್ರಾನ್ ಖಾನ್ ಕೂಡ ಇದ್ದಾರೆ. ಅವರು ಗುರುತು ಸಿಗದೇ ಇರುವಷ್ಟು ಬದಲಾಗಿದ್ದಾರೆ. ಈ ಫೋಟೋ ನೋಡಿದ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ.

ಇರಾ ಮನೆಯಲ್ಲಿ ಈದ್ ಸಂಭ್ರಮ

ಬಾಯ್ಫ್ರೆಂಡ್ ಜತೆ ಇರಾ
Published On - 4:01 pm, Thu, 5 May 22