ತನಗಿಂತ 28 ವರ್ಷ ಚಿಕ್ಕವಳನ್ನು ಮದುವೆಯಾದ ಮಾಜಿ ಕ್ರಿಕೆಟಿಗ..!

Arun Lal: ಟೀಮ್ ಇಂಡಿಯಾ ಪರ 16 ಟೆಸ್ಟ್‌ಗಳು ಮತ್ತು 13 ಏಕದಿನ ಪಂದ್ಯಗಳನ್ನು ಆಡಿರುವ ಅರುಣ್ ಲಾಲ್ ಒಟ್ಟು 851 ರನ್ ಕಲೆಹಾಕಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on:May 05, 2022 | 5:07 PM

ಭಾರತ ತಂಡದ ಮಾಜಿ ಆಟಗಾರ ಅರುಣ್ ಲಾಲ್ ತಮ್ಮ 66ನೇ ವಯಸ್ಸಿನಲ್ಲಿ ಎರಡನೇ ವಿವಾಹವಾಗಿದ್ದಾರೆ. ವಿಶೇಷ ಎಂದರೆ ಅವರ ಪತ್ನಿ ಬುಲ್​ ಬುಲ್ ಸಹಾ ಅವರಿಗಿಂತ 28 ವರ್ಷ ಚಿಕ್ಕವರು ಎಂಬುದು. ಅಷ್ಟೇ ಅಲ್ಲದೆ 2ನೇ ವಿವಾಹಕ್ಕೆ ಮೊದಲ ಪತ್ನಿ ರೀನಾ ಅವರಿಂದ ಒಪ್ಪಿಗೆಯನ್ನೂ ಪಡೆದಿದ್ದರು. ಈ ಮೂಲಕ ಅರುಣ್ ಲಾಲ್ ದಾಂಪತ್ಯ ಜೀವನದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ.

1 / 5
ಅರುಣ್ ಲಾಲ್ ತನ್ನ ಮೊದಲ ಪತ್ನಿ ರೀನಾದಿಂದ ದೂರವಾಗಿದ್ದರು. ಇದಾಗ್ಯೂ ಅವರು ಎರಡನೇ ಮದುವೆಗೆ ಅವರ ಒಪ್ಪಿಗೆಯನ್ನೂ ಪಡೆದಿದ್ದರು. ಇನ್ನು ಮೊದಲ ಪತ್ನಿ ರೀನಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅರುಣ್ ಲಾಲ್ 2ನೇ ಮದುವೆಯಾದರೂ ಅವರ ಮೊದಲ ಪತ್ನಿಯನ್ನು 2ನೇ ಪತ್ನಿ ಬುಲ್ ಬುಲ್ ಸಾಹ ನೋಡಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು.

2 / 5
ಮಾಜಿ ಕ್ರಿಕೆಟಿಗ ಮತ್ತು ಬುಲ್​ ಬುಲ್ ಕೋಲ್ಕತ್ತಾದಲ್ಲಿ ಸರಳ ಸಮಾರಂಭದಲ್ಲಿ ವಿವಾಹವಾಗಿದ್ದಾರೆ.  ಕಳೆದ ವಾರ, ಅರಿಶಿನ ಸಮಾರಂಭದ ಚಿತ್ರಗಳು ಸಹ ವೈರಲ್ ಆಗಿದ್ದವು. ಇದೀಗ ಅರುಣ್ ಲಾಲ್ ಅವರ  ಮದುವೆಯ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

3 / 5
ಅರುಣ್ ಲಾಲ್ ಬಂಗಾಳ ತಂಡದ ಮುಖ್ಯ ಕೋಚ್ ಆಗಿದ್ದಾರೆ.  ಬಂಗಾಳ ತಂಡವು 2019-20 ರ ರಣಜಿ ಟ್ರೋಫಿಯ ಫೈನಲ್‌ಗೆ ತಲುಪಿತ್ತು. ಆದರೆ ಫೈನಲ್​ನಲ್ಲಿ ಸೌರಾಷ್ಟ್ರ ವಿರುದ್ಧ ಸೋಲಬೇಕಾಯಿತು. ಇದಾಗ್ಯೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಬಂಗಾಳ ತಂಡದ ಕೋಚ್ ಆಗಿ ಹಿರಿವಯಸ್ಸಿನ ಅರುಣ್ ಲಾಲ್ ಅವರನ್ನು ಮುಂದುವರೆಸಲಾಗಿದೆ.

4 / 5
ಅರುಣ್ ಲಾಲ್ ಅವರ ಎರಡನೇ ಪತ್ನಿ ಬುಲ್​ ಬುಲ್ ಸಾಹ ವೃತ್ತಿಯಲ್ಲಿ ಶಿಕ್ಷಕಿ. ಇದೀಗ ಮಾಜಿ ಕ್ರಿಕೆಟಿಗನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನು ಟೀಮ್ ಇಂಡಿಯಾ ಪರ 16 ಟೆಸ್ಟ್‌ಗಳು ಮತ್ತು 13 ಏಕದಿನ ಪಂದ್ಯಗಳನ್ನು ಆಡಿರುವ ಅರುಣ್ ಲಾಲ್ ಒಟ್ಟು 851 ರನ್ ಕಲೆಹಾಕಿದ್ದಾರೆ. 2016 ರಲ್ಲಿ ಅಪರೂಪದ ಕ್ಯಾನ್ಸರ್ ಅಡೆನಾಯ್ಡ್ ಸಿಸ್ಟಿಕ್ ಕಾರ್ಸಿನೋಮಗೆ ಒಳಗಾಗಿದ್ದ ಅರುಣ್ ಲಾಲ್ ಇದೀಗ 66ನೇ ವಯಸ್ಸಿನಲ್ಲಿ ಹೊಸ ಇನಿಂಗ್ಸ್ ಆರಂಭಿಸಿರುವುದು ವಿಶೇಷ.

5 / 5

Published On - 5:07 pm, Thu, 5 May 22

Follow us
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್

ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್

ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್

ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ

ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ

ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ