Updated on: May 05, 2022 | 10:15 AM
ಕೆಲವರಿಗೆ ಮುಖ ತೊಳೆಯುವುದಕ್ಕೆ ಹಿಂಜರಿಯುತ್ತಾರೆ. ಆದರೆ ಹೀಗೆ ಮಾಡಬಾರದು. ದಿನ 4 ಬಾರಿಯಾದರೂ ಮುಖ ತೊಳೆಯಬೇಕು.
ಮುಖ ತೊಳೆದ ಬಳಿಕ ಮಾಯ್ಚುರೈಸರ್ ಹಚ್ಚಿ. ಇದು ಮುಖ ಸುಕ್ಕಾಗದಂತೆ ನೋಡಿಕೊಳ್ಳುತ್ತದೆ.
ಹೊರಗೆ ಹೋಗುವ ಮುನ್ನಾ ಸನ್ಸ್ಕ್ರೀನ್ ಬಳಸಿ. ಮಾನ್ಸೂನ್ ಸಮಯದಲ್ಲಿ ಸೂರ್ಯನ ಕಿರಣಗಳು ಕಾಣದೇ ಇದ್ದರೂ, ಅದು ಚರ್ಮವನ್ನು ಹಾನಿಗೊಳಿಸುತ್ತದೆ. ಆದ್ದರಿಂದ ಸನ್ಸ್ಕ್ರೀನ್ ಅನ್ನು ಬಳಸಬೇಕು.
ಮಳೆಗಾಲದಲ್ಲಿ ಹೆಚ್ಚು ನೀರು ಕುಡಿಯಬೇಕು ಅಂತ ಅನಿಸಲ್ಲ. ಹಾಗಂತ ನೀರು ಕುಡಿಯುವುದನ್ನು ಕಡಿಮೆ ಮಾಡಬಾರದು. ದಿನಕ್ಕೆ 3ರಿಂದ 4 ಲೀಟರ್ ನೀರು ಕುಡಿಯಲೇಬೇಕು.
ಹೆಚ್ಚು ಹಣ್ಣುಗಳನ್ನ ಸೇವಿಸಬೇಕು. ಇದರಿಂದ ನಿಮ್ಮ ಚರ್ಮದ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.