‘ಹೂ ಅಂತಿಯಾ ಮಾವ’ ಹಾಡಿಗೆ ವಿರಾಟ್ ಕೊಹ್ಲಿ ಡ್ಯಾನ್ಸ್ ನೋಡಿ ಸಮಂತಾ ಹೇಳಿದ್ದೇನು?  

‘ಹೂ ಅಂತಿಯಾ ಮಾವ’ ಹಾಡಿಗೆ ವಿರಾಟ್ ಕೊಹ್ಲಿ ಡ್ಯಾನ್ಸ್ ನೋಡಿ ಸಮಂತಾ ಹೇಳಿದ್ದೇನು?  
ಸಮಂತಾ-ವಿರಾಟ್​-ಅನುಷ್ಕಾ

ಈ ಹಾಡು ಅವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು. ‘ಪುಷ್ಪ’ ಚಿತ್ರದ ತೂಕ ಹೆಚ್ಚಲು ಈ ಹಾಡು ಕೂಡ ಮುಖ್ಯಪಾತ್ರವಹಿಸಿತ್ತು. ಈ ಕಾರಣಕ್ಕೆ ಸಮಂತಾಗೆ ಈ ಹಾಡಿನ ಬಗ್ಗೆ ವಿಶೇಷ ಪ್ರೀತಿ ಇದೆ.

TV9kannada Web Team

| Edited By: Rajesh Duggumane

Apr 30, 2022 | 2:35 PM

ನಟಿ ಸಮಂತಾ ಅವರು (Samantha) ಇತ್ತೀಚೆಗೆ ಮಾಡುತ್ತಿರುವ ಮೋಡಿ ತುಂಬಾನೇ ದೊಡ್ಡದು. ‘ಪುಷ್ಪ’ ಸಿನಿಮಾದಲ್ಲಿ (Pushpa Movie) ಅವರು ಹೆಜ್ಜೆ ಹಾಕಿದ ‘ಹೂ ಅಂತೀಯಾ ಮಾವ..’ ಹಾಡು ಸಖತ್ ಸದ್ದು ಮಾಡಿತ್ತು. ಈ ಹಾಡಿನಿಂದ ಅವರ ಜನಪ್ರಿಯತೆ ದುಪ್ಪಟ್ಟಾಯಿತು. ಯಾವುದೇ ಪಾರ್ಟಿ ಏರ್ಪಡಲಿ ಅಥವಾ ವಿಶೇಷ ಕಾರ್ಯಕ್ರಮ ಇರಲಿ ಈ ಹಾಡನ್ನು ಪ್ಲೇ ಮಾಡಲಾಗುತ್ತದೆ. ಈ ಹಾಡು ಸಖತ್ ಕಿಕ್ ಕೊಡುವ ರೀತಿಯಲ್ಲಿ ಇರುವುದರಿಂದ ಜನರು ಹುಚ್ಚೆದ್ದು ಡ್ಯಾನ್ಸ್ ಮಾಡುತ್ತಾರೆ. ಅಷ್ಟರ ಮಟ್ಟಿಗೆ ಈ ಹಾಡು ಸದ್ದು ಮಾಡಿದೆ. ಆಸ್ಟ್ರೇಲಿಯಾ ಕ್ರಿಕೆಟರ್ ಡೇವಿಡ್ ವಾರ್ನರ್ ಸೇರಿ ಅನೇಕರು ಈ ಸಾಂಗ್​ಗೆ ಡ್ಯಾನ್ಸ್ ಮಾಡಿದ್ದರು. ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ (Virat Kohli) ಕೂಡ ಇತ್ತೀಚೆಗೆ ಈ ಹಾಡಿಗೆ ಕುಣಿದಿದ್ದರು. ಇದು ಸಮಂತಾಗೆ ಖುಷಿ ನೀಡಿದೆ.

ಆರ್​ಸಿಬಿಯ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್​ವೆಲ್ ಅವರು ಭಾರತೀಯ ಮೂಲದ ವಿನಿ ರಾಮನ್ ಜೊತೆ ಮದುವೆಯಾಗಿದ್ದಾರೆ. ಏಪ್ರಿಲ್ 27ಕ್ಕೆ ಈ ವಿವಾಹಕ್ಕೆ ಒಂದು ತಿಂಗಳಾಗಿದೆ. ಈ ಪ್ರಯುಕ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಯೋಬಬಲ್​ ಅಡಿಯಲ್ಲಿ ಆಟಗಾರರಿಗೆ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು. ಆರ್​ಸಿಬಿ ತಂಡದ ಬಹುತೇಕ ಎಲ್ಲ ಆಟಗಾರರು ಇದರಲ್ಲಿ ಹಾಜರಿದ್ದರು. ಈ ವೇಳೆ ‘ಪುಷ್ಪ’ ಸಿನಿಮಾದ ‘ಹೂ ಅಂತೀಯಾ ಮಾವ..’ ಹಾಡಿಗೆ ಕಿಂಗ್ ಕೊಹ್ಲಿ ಭರ್ಜರಿ ಸ್ಟೆಪ್ ಹಾಕಿದ್ದರು. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದು ಸಮಂತಾ ಗಮನಕ್ಕೂ ಬಂದಿದೆ. ಫಿಲ್ಮ್​ಫೇರ್ ಹಂಚಿಕೊಂಡಿರುವ ವಿಡಿಯೋವನ್ನು ಸ್ಟೇಟಸ್​ಗೆ ಹಾಕಿರುವ ಸಮಂತಾ ಡ್ಯಾನ್ಸಿಂಗ್ ಎಮೋಜಿ ಹಾಕಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅವರು ಸಂತಸ ಹೊರಹಾಕಿದ್ದಾರೆ.

ಸಮಂತಾಗೆ ಈ ಹಾಡಿನ ಬಗ್ಗೆ ವಿಶೇಷ ಪ್ರೀತಿ ಇದೆ. ವಿಚ್ಛೇದನ ಬಳಿಕ ಅವರು ಒಪ್ಪಿಕೊಂಡಿದ್ದ ಮೊದಲ ವಿಶೇಷ ಸಾಂಗ್ ಇದಾಗಿತ್ತು. ಈ ಹಾಡು ಅವರಿಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತ್ತು. ‘ಪುಷ್ಪ’ ಚಿತ್ರದ ತೂಕ ಹೆಚ್ಚಲು ಈ ಹಾಡು ಕೂಡ ಮುಖ್ಯಪಾತ್ರವಹಿಸಿತ್ತು. ಈ ಕಾರಣಕ್ಕೆ ಸಮಂತಾಗೆ ಈ ಹಾಡಿನ ಬಗ್ಗೆ ವಿಶೇಷ ಪ್ರೀತಿ ಇದೆ. ಇತ್ತೀಚೆಗೆ ಸಮಂತಾ ಅವರು ಬರ್ತ್​ಡೇ ಆಚರಿಸಿಕೊಂಡಿದ್ದರು. ಕಾಶ್ಮೀರದಲ್ಲಿ ಶೂಟಿಂಗ್​ನಲ್ಲಿ ಬ್ಯುಸಿ ಇರುವ ಅವರಿಗೆ ಚಿತ್ರತಂಡ ಸರ್​ಪ್ರೈಸ್ ನೀಡಿತ್ತು.

ಹಲವು ಬಗೆಯ ಪಾತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಚಿತ್ರರಂಗದಲ್ಲಿ ಸಮಂತಾ ಮುನ್ನುಗ್ಗುತ್ತಿದ್ದಾರೆ. ಅವರ ಚಾರ್ಮ್​ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹುಟ್ಟುಹಬ್ಬದ ಪ್ರಯುಕ್ತ ‘ಶಾಕುಂತಲಂ’ ಸಿನಿಮಾದ ಹೊಸ ಪೋಸ್ಟರ್​ ರಿಲೀಸ್​ ಆಯಿತು. ‘ಯಶೋದಾ’, ‘ಅರೇಂಜ್​ಮೆಂಟ್ಸ್​ ಆಫ್​ ಲವ್​’ ಮುಂತಾದ ಪ್ರಾಜೆಕ್ಟ್​ಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ನಾಗಚೈತನ್ಯ 2ನೇ ಮದುವೆ ಗಾಸಿಪ್​: ಸಮಂತಾ ರೀತಿ ಹೆಣ್ಣು ಬೇಡವೇ ಬೇಡ ಅಂತಿದೆಯಾ ಅಕ್ಕಿನೇನಿ ಕುಟುಂಬ?

ಮಧ್ಯ ರಾತ್ರಿ ಸಮಂತಾಗೆ ಸರ್ಪ್ರೈಸ್​ ನೀಡಿದ ವಿಜಯ್​ ದೇವರಕೊಂಡ; ಸತ್ಯ ತಿಳಿದಾಗ ನಟಿಯ ಪ್ರತಿಕ್ರಿಯೆ ಏನು?

Follow us on

Related Stories

Most Read Stories

Click on your DTH Provider to Add TV9 Kannada