David Warner, IPL 2022 Auction: ಡೆಲ್ಲಿ ಸೇರಿದ ಡೇವಿಡ್ ವಾರ್ನರ್! ಹರಾಜಿನಲ್ಲಿ ಪಡೆದ ಹಣ ಎಷ್ಟು ಗೊತ್ತಾ?

David Warner Auction Price: ವಾರ್ನರ್ ಅವರನ್ನು ಈ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿದೆ. ಈ ಎಡಗೈ ಬ್ಯಾಟ್ಸ್‌ಮನ್‌ಗಾಗಿ ಈ ತಂಡ 6.25 ಕೋಟಿ ರೂ. ಖರ್ಚು ಮಾಡಿದೆ.

David Warner, IPL 2022 Auction: ಡೆಲ್ಲಿ ಸೇರಿದ ಡೇವಿಡ್ ವಾರ್ನರ್! ಹರಾಜಿನಲ್ಲಿ ಪಡೆದ ಹಣ ಎಷ್ಟು ಗೊತ್ತಾ?
ಡೇವಿಡ್ ವಾರ್ನರ್
Follow us
| Updated By: ಪೃಥ್ವಿಶಂಕರ

Updated on:Feb 12, 2022 | 1:18 PM

ಐಪಿಎಲ್ 2022 ರ ಮೆಗಾ ಹರಾಜಿನ ಮಾರ್ಕ್ಯೂ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ (David Warner) ಹೆಸರೂ ಇತ್ತು. 2016 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ವಾರ್ನರ್ ನಾಯಕತ್ವದಲ್ಲಿ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಈಗ ವಾರ್ನರ್ ಅವರನ್ನು ಈ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಖರೀದಿಸಿದೆ. ಈ ಎಡಗೈ ಬ್ಯಾಟ್ಸ್‌ಮನ್‌ಗಾಗಿ ಈ ತಂಡ 6.25 ಕೋಟಿ ರೂ. ಖರ್ಚು ಮಾಡಿದೆ. ವಾರ್ನರ್ ಅವರನ್ನು ಸನ್ ರೈಸರ್ಸ್ ಉಳಿಸಿಕೊಳ್ಳಲು ಯಾವುದೇ ಮನಸು ಮಾಡಲಿಲ್ಲ. ಆದ್ದರಿಂದ ವಾರ್ನರ್ ಹರಾಜಿಗೆ ಬರಬೇಕಾಯಿತು. ಈ ಹರಾಜಿನಲ್ಲಿ ಮೂರು ತಂಡಗಳು ವಾರ್ನರ್ ಖರೀದಿಗಾಗಿ ಮುಗಿ ಬಿದ್ದಿದ್ದರು. ಆದರೆ ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ.

ವಾರ್ನರ್ ತಮ್ಮ ಬೇಸ್ ಫ್ರೈ ಅನ್ನು 2 ಕೋಟಿ ರೂ. ಗೆ ನಿಗಧಿ ಪಡಿಸಿದ್ದರು. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಅವರ ಮೇಲೆ ಬಿಡ್ ಮಾಡಿದ್ದವು. ವಾರ್ನರ್ ಅವರ ಐಪಿಎಲ್ ವೃತ್ತಿಜೀವನವನ್ನು ಗಮನಿಸಿದರೆ, ಅವರು ಇಲ್ಲಿಯವರೆಗೆ 150 ಪಂದ್ಯಗಳನ್ನು ಆಡಿದ್ದಾರೆ ಮತ್ತು 41.59 ಸರಾಸರಿಯಲ್ಲಿ 5449 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರು ನಾಲ್ಕು ಶತಕಗಳು ಮತ್ತು 50 ಅರ್ಧ ಶತಕಗಳನ್ನು ಗಳಿಸಿದ್ದಾರೆ.

2014 ರಿಂದ 2021 ರವರೆಗಿನ ಪ್ರಯಾಣ

ವಾರ್ನರ್ ಐಪಿಎಲ್‌ನ ಅತ್ಯಂತ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಎಣಿಸಲ್ಪಟ್ಟಿದ್ದಾರೆ. ಅಲ್ಲದೆ ಈ ಲೀಗ್‌ನಲ್ಲಿ ತಾನೊಬ್ಬ ಶ್ರೇಷ್ಠ ನಾಯಕ ಎಂಬುದನ್ನು ಸಾಬೀತುಪಡಿಸಿದ್ದಾರೆ. ಅವರು 2014 ರಿಂದ ಸನ್‌ರೈಸರ್ಸ್‌ಗಾಗಿ ಆಡುತ್ತಿದ್ದರು. 2015 ರಲ್ಲಿ ಅವರನ್ನು ತಂಡದ ನಾಯಕರನ್ನಾಗಿ ಮಾಡಲಾಯಿತು. ಅವರ ನಾಯಕತ್ವದಲ್ಲಿ, ಅವರು 2016 ರಲ್ಲಿ ಸನ್‌ರೈಸರ್ಸ್ ಅನ್ನು ಫೈನಲ್‌ಗೆ ಕರೆದೊಯ್ದರು ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಫೈನಲ್ ಗೆದ್ದರು. ಅವರು 2018 ರಲ್ಲಿ ತಂಡವನ್ನು ಫೈನಲ್‌ಗೆ ಕರೆದೊಯ್ದರು ಆದರೆ ಗೆಲುವು ಪಡೆಯಲು ಸಾಧ್ಯವಾಗಲಿಲ್ಲ. ಕಳೆದ ಋತುವಿನಲ್ಲಿ, ಆದಾಗ್ಯೂ, ಸನ್‌ರೈಸರ್ಸ್ ಅವರ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. ಅದಕ್ಕಾಗಿಯೇ ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು ಮತ್ತು ನಂತರ ಕೊನೆಯ-11 ರಿಂದ ಕೈಬಿಡಲಾಯಿತು. ನಂತರ ಸನ್ ರೈಸರ್ಸ್ ಕೂಡ ಅವರನ್ನು ತಮ್ಮೊಂದಿಗೆ ಇಟ್ಟುಕೊಂಡಿರಲಿಲ್ಲ. ಸನ್‌ರೈಸರ್ಸ್ ಅವರ ಸ್ಥಾನದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್‌ಗೆ ನಾಯಕತ್ವವನ್ನು ಹಸ್ತಾಂತರಿಸಿದೆ.

ದೆಹಲಿಯಿಂದ ಪ್ರಾರಂಭ

ವಾರ್ನರ್ ತಮ್ಮ IPL ವೃತ್ತಿಜೀವನವನ್ನು ಡೆಲ್ಲಿ ಡೇರ್‌ಡೆವಿಲ್ಸ್ (ದೆಹಲಿ ಕ್ಯಾಪಿಟಲ್ಸ್) ನೊಂದಿಗೆ ಪ್ರಾರಂಭಿಸಿದರು. ಅವರು 2009 ರಿಂದ 2013 ರವರೆಗೆ ಈ ತಂಡದ ಪರ ಆಡಿದ್ದರು. 2009 ರಲ್ಲಿ ಅವರಿಗೆ ಪದಾರ್ಪಣೆ ಮಾಡುವ ಅವಕಾಶ ಸಿಗಲಿಲ್ಲ ಆದರೆ 2010 ರಲ್ಲಿ ಅವರು ತಮ್ಮ ಮೊದಲ IPL ಪಂದ್ಯವನ್ನು ಆಡುವಲ್ಲಿ ಯಶಸ್ವಿಯಾದರು. 2010ರಲ್ಲಿ 11 ಪಂದ್ಯಗಳನ್ನು ಆಡಿದ್ದು, ಶತಕ ಸೇರಿದಂತೆ 282 ರನ್ ಗಳಿಸಿದ್ದರು. 2011ರಲ್ಲಿ ಡೆಲ್ಲಿ ಪರ 13 ಪಂದ್ಯಗಳನ್ನು ಆಡಿದ್ದು, 2012ರಲ್ಲಿ ಡೆಲ್ಲಿ ಎಂಟು ಪಂದ್ಯಗಳಲ್ಲಿ ಅವಕಾಶ ನೀಡಿತ್ತು. 2013ರಲ್ಲಿ ಅವರು 16 ಪಂದ್ಯಗಳನ್ನು ಆಡಿದ್ದರು. ನಂತರ ಸನ್ ರೈಸರ್ಸ್ ತಂಡ ಸೇರಿದ್ದರು. ಕಳೆದ ಋತುವಿನಲ್ಲಿ ಅವರು ಕೇವಲ ಎಂಟು ಪಂದ್ಯಗಳನ್ನು ಆಡಿ ಕೇವಲ 195 ರನ್ ಗಳಿಸಿದರು.

ಇದನ್ನೂ ಓದಿ:Pat Cummins, IPL 2022 Auction: ಮತ್ತೆ ಕೋಲ್ಕತ್ತಾ ಸೇರಿದ ಪ್ಯಾಟ್ ಕಮಿನ್ಸ್! ಕೊಟ್ಟ ಹಣವೆಷ್ಟು ಗೊತ್ತಾ?

Published On - 1:14 pm, Sat, 12 February 22

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ